Select Your Language

Notifications

webdunia
webdunia
webdunia
webdunia

ಆ ನಗ್ನ ಸನ್ನಿವೇಶದಲ್ಲಿ ನಟಿಸಿರುವುದು ನಾನೇ: ಕಂಗನಾ

ಆ ನಗ್ನ ಸನ್ನಿವೇಶದಲ್ಲಿ ನಟಿಸಿರುವುದು ನಾನೇ: ಕಂಗನಾ
Mumbai , ಮಂಗಳವಾರ, 21 ಫೆಬ್ರವರಿ 2017 (22:09 IST)
ಬಾಲಿವುಡ್ ಹೀರೋಯಿನ್ ಕಂಗನಾ ರನೌತ್ ಬೋಲ್ಡ್ ಹೇಳಿಕೆಗಳಿಗೆ ಹೆಸರಾದವರು. ಬೋಲ್ಡ್ ಆಗಿ ಮಾತನಾಡುವುದರಲ್ಲಿ ಅವರದು ಎತ್ತಿದ ಕೈ. ಮಾತಿನಲ್ಲಿ ಆಕೆಯನ್ನು ಮೀರಿದರು ಬಾಲಿವುಡ್‌ನಲ್ಲಿ ಇನ್ನೊಬ್ಬರಿಲ್ಲ ಎನ್ನಬಹುದು. ಕಂಗನಾ ಲೇಟೆಸ್ಟ್ ಸಿನಿಮಾ ’ರಂಗೂನ್’ ಚಿತ್ರದ ಟ್ರೇಲರ್ ಸೆನ್ಸೇಷನ್ ಸೃಷ್ಟಿಸಿದೆ.
 
ಆ ಟ್ರೇಲರ್‌ನಲ್ಲಿ ಹೀರೋ ಶಾಹಿದ್ ಕಪೂರ್ ಜತೆಗಿನ ಶೃಂಗಾರ ಸನ್ನಿವೇಶದಲ್ಲಿ ಕಂಗಾನ ಟಾಪ್‌ಲೆಸ್‌ನಲ್ಲಿ ಕಾಣಿಸಿದ್ದಾರೆ. ಸಾಧಾರಣವಾಗಿ ಈ ರೀತಿಯ ದೃಶ್ಯಗಳಿಗೆ ಹೀರೋಯಿನ್‍ಗಳು ಡ್ಯೂಪ್‍ಗಳ ಮೇಲೋ ಅಥವಾ ಕ್ಯಾಮೆರಾ ಟ್ರಿಕ್‌ಗಳ ಮೇಲೆ ಅವಲಂಭಿಸಿರುತ್ತಾರೆ.
 
ಆದರೆ ಕಂಗನಾ ಮಾತ್ರ ನಿಜವಾಗಿಯೂ ಟಾಪ್‌ಲೆಸ್‌ನಲ್ಲಿ ಕಾಣಿಸಿದ್ದಾರಂತೆ. ಶೂಟಿಂಗ್ ಸಮಯದಲ್ಲಿ ಸಂಪೂರ್ಣವಾಗಿ ಟಾಪ್‍ಲೆಸ್‍ನಲ್ಲಿ ಅಭಿನಯಿಸಿದ್ದೇನೆ ಎಂದಿದ್ದಾರೆ. ಆ ಸನ್ನಿವೇಶದಲ್ಲಿ ಡ್ಯೂಪ್ ಬಳಸಿರುತ್ತಾರೆ ಎಂಬ ಸುದ್ದಿ ಇತ್ತು. ಆ ಸುದ್ದಿಯನ್ನು ಕಂಗನಾ ಅಲ್ಲಗಳೆದಿದ್ದು, "ನಗ್ನ ಸನ್ನಿವೇಶಗಳಿಗಾಗಿ ಯಾವುದೇ ರೀತಿಯ ಟ್ರಿಕ್ ಅವಶ್ಯಕತೆಯಿಲ್ಲ. ಆ ಸನ್ನಿವೇಶದಲ್ಲಿ ನಟಿಸಿರುವುದು ನಾನೇ. ಅದು ಸಹ ನಟನೆಯಲ್ಲಿ ಒಂದು ಭಾಗ" ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶತಕ ಸಿಡಿಸಿದ ಹೊಸಬರ ’ರಾಮ ರಾಮ ರೇ’