Select Your Language

Notifications

webdunia
webdunia
webdunia
webdunia

ಶತಕ ಸಿಡಿಸಿದ ಹೊಸಬರ ’ರಾಮ ರಾಮ ರೇ’

ಶತಕ ಸಿಡಿಸಿದ ಹೊಸಬರ ’ರಾಮ ರಾಮ ರೇ’
Bangalore , ಮಂಗಳವಾರ, 21 ಫೆಬ್ರವರಿ 2017 (17:36 IST)
ಹೊಸಬರ ತಂಡ ಸೇರಿ ಸಿದ್ದಪಡಿಸಿದ ‘ರಾಮ ರಾಮ ರೇ’  ಚಿತ್ರವು ಬಿಡುಗಡೆಯಾಗಿ ಎಲ್ಲಾ ಕಡೆಗಳಿಂದಲೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದಕ್ಕೆ ತಕ್ಕಂತೆ ಸಿನಿಮಾವು 100 ನೂರು ಪೂರೈಸಿದ ಹಿನ್ನಲೆಯಲ್ಲಿ ತಂಡವು ಚಿತ್ರಕ್ಕೆ ದುಡಿದವರನ್ನು ನೆನಪಿಸಿಕೊಳ್ಳಲು ಸಣ್ಣದೊಂದು ಶತ ದಿನ  ಸಮಾರಂಭವನ್ನು ಏರ್ಪಾಟು ಮಾಡಿತ್ತು. 
 
ಚಿತ್ರಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಲಹೆ, ಪ್ರೋತ್ಸಾಹ, ಧೈರ್ಯ ತುಂಬಿದ್ದು ಅಲ್ಲದೆ ತೂಕದ ಪಾತ್ರ ಮಾಡಿ ನಮ್ಮನ್ನು ಅಗಲಿದ ಜಯರಾಂ ಕುರಿತ ವಿವರ ಪುಟ್ಟಪರದೆ ಮೇಲೆ ಬಂದಾಗ ದುಮ್ಮಾನವಾಗಿ  ಅರಿವಿಲ್ಲದೆ ಕಣ್ಣುಗಳು ಒದ್ದೆಯಾದವು. 
 
ಜಯರಾಂ ಸೆಟ್‍ನಲ್ಲಿ ನಟಿಸುವಾಗ ತಂಡವು  ದುಃಖದಲ್ಲಿ ಇರುವುದರಿಂದ ಯಾರೊಬ್ಬರು ಸಂಭಾವನೆ ಕೇಳಬೇಡಿ. ಹೊಸಬರಿಗೆ ಆಸ್ಥೆಯಿಂದ ಬೆಂಬಲ ಕೊಡಿ  ಎನ್ನುತ್ತಿದ್ದರು. ಅಲ್ಲದೆ ಕತೆಯಲ್ಲಿ ವಿನೂತನ ಜೀಪ್ ಮುಖ್ಯ ಪಾತ್ರವಾಗಿದ್ದರಿಂದ ಅದನ್ನು ಸರಬರಾಜು ಮಾಡಿದ್ದರಂತೆ. ಅತಿಥಿಯಾಗಿ ಆಗಮಿಸಿದ್ದ ನಟ ಧನಂಜಯ್ ತಮ್ಮ ಮಾತಿನಲ್ಲಿ ಗೆಳೆಯ ನಿರ್ದೇಶನ ಮಾಡಿದ ಮೊದಲ ಸಿನಿಮಾ 100 ದಿವಸ ಪ್ರದರ್ಶನ ಕಂಡಿದ್ದು ಖುಷಿತಂದಿದೆ. ಮೂರು ವರ್ಷದ ಕೆಳಗೆ ಕತೆಯನ್ನು ಹೇಳಿದ್ದರು. ಅವರ ಕನಸು ನನಸಾಗಿದೆ. ಇಂದು ವೇದಿಕೆ ಏರಲು ಅವರು ಮುಖ್ಯ ಕಾರಣರಾಗಿದ್ದಾರೆ ಎಂದರು. 
 
ಸಂತೋಷ ಸಮಾರಂಭದಲ್ಲಿ ಪಾಲ್ಗೋಂಡಿದ್ದ ಯೋಗರಾಜ್‌ಭಟ್ ಈ ತಂಡದಲ್ಲಿ ಕೆಲಸ ಮಾಡುವ ಯೋಗ ಸಿಗಲಿಲ್ಲ. ನಿರ್ದೇಶಕರು ಹಾಡು ಬರೆದುಕೊಡಿ ಎಂದು ದುಂಬಾಲು ಮಾಡಿದ್ದರು. ಕಡೆಗೂ ಬರೆಯಲಾಗಲಿಲ್ಲ. ಕೊನೆಗೆ ಮನಸ್ಸು ಮಾಡಿ ಬಿಡುವು ಮಾಡಿಕೊಂಡು ಪ್ರಚಾರದ ಸಲುವಾಗಿ ಹಾಡನ್ನು ಬರೆದುಕೊಟ್ಟಿದ್ದು ಸಾರ್ಥಕ ಅನಿಸಿದೆ ಅಂತ ಮಾತಿಗೆ ವಿರಾಮ ಹಾಕಿದರು.
 
ಸಾರಾಂಶ ಇಲ್ಲದೆ ಚಿತ್ರಗಳನ್ನು ತೆಗೆಯುವ ನಿರ್ದೇಶಕರಿಂದ ಚಿತ್ರರಂಗ ಮಾರಕ ವಾಗುತ್ತಿದೆ. ಒಳ್ಳೆ ಸಂದೇಶ, ತಾತ್ಪರ್ಯ ಇರುವ ಸಿನಿಮಾ ಬಂದರೆ ಅದು ಹೆಚ್ಚು ಜನರಿಗೆ ತಲುಪುತ್ತವೆ. ಅದರ ಸಾಲಿಗೆ ರಾರಾರೇ ಸೇರಿದೆ. ಇತಿಹಾಸದ ಪುಟಗಳನ್ನು ದಕುವಾಗ ಎಲ್ಲರೂ ಮುಂಗಾರುಮಳೆ ಉದಾಹರಣೆ ಕೊಡುತ್ತಾರೆ. 
 
ಜನುಮದಜೋಡಿ 20 ಕೇಂದ್ರಗಳಲ್ಲಿ 25 ವಾರ ಪ್ರದರ್ಶನ ಕಂಡು ದಾಖಲೆ ಮಾಡಿತ್ತು. ಅದನ್ನು ಎಲ್ಲಿಯೋ ಹೇಳದೆ ಇರುವುದು ಸೋಜಿಗ ಅನಿಸುತ್ತದೆ. ಇಂತಹ ಸದಭಿರುಚಿಯ ಇನ್ನು 5 ಸಿನಿಮಾಗಳನ್ನು ಮಾಡಿ ಜನರಿಗೆ ತೋರಿಸಿ ಎಂದು ನಿರ್ದೇಶಕ ಸತ್ಯಪ್ರಕಾಶ್‍ರನ್ನು ಹುರಿದುಂಬಿಸಿದರು ನಾಗಾಭರಣ. 
 
ಎರಡು ವರ್ಷದಿಂದ ಸತತ ಇದೇ ಕೆಲಸದಲ್ಲಿ ಮಗ್ನರಾಗಿ ಮನೆ ಕಡೆ ಗಮನ ಹರಿಸದ ಕಲಾವಿದರು, ತಂತ್ರಜ್ಞರ ಪೋಷಕರನ್ನು ಗೌರವಿಸಿದ್ದು ಅರ್ಥಪೂರ್ಣವೆನಿಸಿತು. ನಾಯಕ ನಟರಾಜ ಇನ್ನು ಮುಂತಾದವರಿಗೆ ನೆನಪಿನ ಕಾಣಿಕೆ ವಿರತಣೆ ಮಾಡುವುದರೊಂದಿಗೆ ಅಂದಿನ ಸುಂದರ ಸಮಾರಂಭವು ಯಶಸ್ವಿಯಾಗಿ ಪೂರ್ಣಗೊಂಡಿತು. ಚಿತ್ರದ ಡಬ್ಬಿಂಗ್ ಹಕ್ಕುಗಳು ಮೂರು ಭಾಷೆಗಳಿಗೆ ಉತ್ತಮ ಬೆಲೆಗೆ ಮಾರಾಟವಾಗಿದೆಯಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಜನಿಕಾಂತ್ ಜತೆ ತೆರೆಹಂಚಿಕೊಳ್ಳಲಿರುವ ವಿದ್ಯಾ ಬಾಲನ್