ಬೆಂಗಳೂರು: ಇತ್ತೀಚೆಗಷ್ಟೇ ಅಮ್ಮನಾದ ಸ್ಯಾಂಡಲ್ ವುಡ್ ನಟಿ ಮಯೂರಿ ಕ್ಯಾತರಿ ಈಗ ತಮ್ಮ ಮುದ್ದು ಮಗನ ಹೆಸರಿನ ಜೊತೆಗೆ ಫೋಟೋ ರಿವೀಲ್ ಮಾಡಿದ್ದಾರೆ.
ಮಗನಿಗೆ ಆರವ್ ಎಂದು ಹೆಸರಿಟ್ಟಿರುವ ಮಯೂರಿ-ಅರುಣ್ ದಂಪತಿ ಇದೀಗ ವಿಡಿಯೋ ಮೂಲಕ ಪುತ್ರನ ಮೊದಲ ಫೋಟೋಗಳನ್ನು ಬಹಿರಂಗಪಡಿಸಿದ್ದಾರೆ.
ಮಗನ ಹೆಸರಿನಲ್ಲಿ ಪ್ರತ್ಯೇಕ ಸೋಷಿಯಲ್ ಮೀಡಿಯಾ ಪೇಜ್ ತೆರೆದಿದ್ದ ಮಯೂರಿ ಇನ್ನಷ್ಟು ಫೋಟೋಗಳನ್ನು ಸದ್ಯದಲ್ಲೇ ರಿವೀಲ್ ಮಾಡುವುದಾಗಿ ಹೇಳಿದ್ದಾರೆ. ಸದ್ಯಕ್ಕೆ ಅವರು ಪ್ರಕಟಿಸಿರುವುದು ಆರವ್ ಗೆ 15 ದಿನವಾಗಿದ್ದಾಗ ತೆಗೆದ ಫೋಟೋ ಶೂಟ್ ನ ದೃಶ್ಯಗಳನ್ನು. ತಮ್ಮ ಮಗನಿಗೆ ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಮಯೂರಿ ಕೇಳಿಕೊಂಡಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!