Select Your Language

Notifications

webdunia
webdunia
webdunia
webdunia

’ಮಾಸ್ತಿಗುಡಿ’ ನಾಗಶೇಖರ್ ಮತ್ತು ರವಿವರ್ಮಾಗೆ ಜಾಮೀನು

’ಮಾಸ್ತಿಗುಡಿ’ ನಾಗಶೇಖರ್ ಮತ್ತು ರವಿವರ್ಮಾಗೆ ಜಾಮೀನು
Bangalore , ಶುಕ್ರವಾರ, 16 ಡಿಸೆಂಬರ್ 2016 (12:40 IST)
ಮಾಸ್ತಿಗುಡಿ ಚಿತ್ರದ ನಿರ್ದೇಶಕ ನಾಗಶೇಖರ್ ಮತ್ತು ಸಾಹಸ ನಿರ್ದೇಶಕ ರವಿವರ್ಮಾ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಮಾಸ್ತಿಗುಡಿ ಚಿತ್ರದ ನಟರಾದ ಅನಿಲ್ ಕುಮಾರ್ ಮತ್ತು ಉದಯ್ ಅವರು ಚಿತ್ರೀಕರಣ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಸಾವಪ್ಪಿದ ಘಟನೆ ನವೆಂಬರ್ 7ರಂದು ನಡೆದಿತ್ತು.
 
ಈ ದುರಂತಕ್ಕೆ ಚಿತ್ರತಂಡದ ನಿರ್ಲಕ್ಷ್ಯವೇ ಕಾರಣ ಎಂದು ಪೊಲೀಸರು ನಿರ್ಮಾಪಕ ಸೇರಿದಂತೆ ನಿರ್ದೇಶಕ, ಸಾಹಸ ನಿರ್ದೇಶಕರ ಮೇಲೆ ಕೇಸ್ ಫೈಲ್ ಮಾಡಿದ್ದರು. ನವೆಂಬರ್ 12ರಂದು ರವಿವರ್ಮಾ ಮತ್ತು ನಾಗಶೇಖರ್ ಪೊಲೀಸ್ ಠಾಣೆಗೆ ಶರಣಾಗಿದ್ದರು. 
 
ಕಳೆದ ಒಂದು ತಿಂಗಳಿಂದ ನ್ಯಾಯಾಂಗಬಂಧನದಲ್ಲಿದ್ದ ಇವರಿಬ್ಬರಿಗೆ ಈಗ ಜಾಮೀನು ಸಿಕ್ಕಿದೆ. ಇದಕ್ಕೂ ಮುನ್ನ ರಾಮನಗರದ ಸ್ಥಳೀಯ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಆದರೆ ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿಭಾವಂತರ ’ನಿರುತ್ತರ’ ಇದೇ ತಿಂಗಳಲ್ಲಿ ನಿಮ್ಮ ಮುಂದೆ