Select Your Language

Notifications

webdunia
webdunia
webdunia
webdunia

ಮಾಸ್ತಿ ಗುಡಿ ದುರಂತ: ಚಿತ್ರ ತಂಡದ ವಿರುದ್ಧ ಕೇಸು ದಾಖಲು

ಮಾಸ್ತಿ ಗುಡಿ ದುರಂತ: ಚಿತ್ರ ತಂಡದ ವಿರುದ್ಧ ಕೇಸು ದಾಖಲು
Bangalore , ಮಂಗಳವಾರ, 8 ನವೆಂಬರ್ 2016 (09:28 IST)
ಬೆಂಗಳೂರು: ಮಾಸ್ತಿ ಗುಡಿ ಸಿನಿಮಾದಲ್ಲಿ ಅಪಾಯಕಾರಿ ಸಾಹಸ ದೃಶ್ಯ ಮಾಡಿಸಿ ಉದಯ್ ಮತ್ತು ಅನಿಲ್ ಸಾವಿಗೆ ಕಾರಣವಾದ ಚಿತ್ರ ತಂಡದ ವಿರುದ್ಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಕೊಲೆಯಲ್ಲದ ಮಾನವ ಹತ್ಯೆ ಪ್ರಕರಣದ ಅಡಿಯಲ್ಲಿ ದೂರು ದಾಖಲಾಗಿದೆ.

ನಿರ್ದೇಶಕ, ಸಾಹಸ ನಿರ್ದೇಶಕ, ಯೂನಿಟ್ ಮ್ಯಾನೇಜರ್ ಭರತ್ ವಿರುದ್ಧ ತಿಪ್ಪಗೊಂಡನಹಳ್ಳಿ ಜಲಾಶಯದ ಅಧೀಕ್ಷಕಿ ಅನಸೂಯಾ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡದ್ದಾರೆ. ಒಂದು ವೇಳೆ ಹೆಲಿಕಾಪ್ಟರ್ ನಿಂದ ದುನಿಯಾ ವಿಜಯ್ ಇಬ್ಬರು ಖಳ ನಟರನ್ನು ಕೆಳಗೆ ತಳ್ಳಿರುವುದು ಪತ್ತೆಯಾದರೆ ವಿಜಿ ವಿರುದ್ಧವೂ ಕೇಸು ದಾಖಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಶಿವರಾಜ್ ಕುಮಾರ್ ಕಲಾವಿದರ ಜೀವನದ ಜತೆ ಆಟವಾಡಬಾರದು ಎಂದು ಸಾಹಸ ನಿರ್ದೇಶಕರಿಗೆ ಕಟುವಾಗಿ ಹೇಳಿದ್ದಾರೆ. ಹೀರೋ ಇರಲಿ, ಖಳನಟರೇ ಇರಲಿ, ಅವರ ಜೀವಕ್ಕೆ ಬೆಲೆ ಕೊಡಬೇಕು. ಅವರ ಕೈಯಲ್ಲಿ ಸಾಧ್ಯವಾಗದ ಕೆಲಸ ಮಾಡಿಸಬಾರದು. ಒಂದು ವೇಳೆ ಮಾಡುವುದಿದ್ದರೂ ತಕ್ಕ ವ್ಯವಸ್ಥೆ ಮಾಡದೆ ಹೇಗೆ ಚೆಲ್ಲಾಟವಾಡಿದಿರಿ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ತಿ ಗುಡಿ ದುರಂತ: ಇನ್ನೂ ಸಿಕ್ಕಿಲ್ಲ ಉದಯ್, ಅನಿಲ್ ಮೃತದೇಹ