Select Your Language

Notifications

webdunia
webdunia
webdunia
webdunia

ಮಾಸ್ತಿ ಗುಡಿ ದುರಂತ: ಇನ್ನೂ ಸಿಕ್ಕಿಲ್ಲ ಉದಯ್, ಅನಿಲ್ ಮೃತದೇಹ

ಮಾಸ್ತಿ ಗುಡಿ ದುರಂತ: ಇನ್ನೂ ಸಿಕ್ಕಿಲ್ಲ ಉದಯ್, ಅನಿಲ್ ಮೃತದೇಹ
Bangalore , ಮಂಗಳವಾರ, 8 ನವೆಂಬರ್ 2016 (09:05 IST)
ಬೆಂಗಳೂರು: ಮಾಸ್ತಿ ಗುಡಿ ಸಿನಿಮಾದ ಸಾಹಸ ದೃಶ್ಯದ ಶೂಟಿಂಗ್ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಖಳನಟರಾದ ಉದಯ್ ಮತ್ತು ಅನಿಲ್ ಮೃತದೇಹ ಇನ್ನೂ ಸಿಕ್ಕಿಲ್ಲ.

ಇದೇ ವೇಳೆ ಉದಯ್ ಗೆ ಜ್ವರವಿತ್ತು. ಈಜು ಬರುತ್ತಿರಲಿಲ್ಲ. ಸರಿಯಾಗಿ ಮಾಹಿತಿ ಕೊಡದೆ ಅವರನ್ನು ಬಲವಂತವಾಗಿ ಸ್ಟಂಟ್ ದೃಶ್ಯದ ಚಿತ್ರೀಕರಣ ಮಾಡಿಸಿದರು ಎಂದು ಉದಯ್ ತಾಯಿ ಚಿತ್ರತಂಡದ ವಿರುದ್ಧ ಕಿಡಿ ಕಾರಿದ್ದಾರೆ.

ನಮ್ಮ ಗೋಳನ್ನು ಕೇಳುವವರು ಯಾರು. ಈ ದೃಶ್ಯ ಮಾಡಲು ಅವನಿಗೆ ಬಲವಂತ ಮಾಡಲಾಗಿತ್ತು ಎಂದು ಅವರು ದುನಿಯಾ ವಿಜಯ್ ಮತ್ತು ಚಿತ್ರತಂಡದವರ ವಿರುದ್ಧ ಆರೋಪ ಮಾಡಿದ್ದಾರೆ.

ಸತತ 19 ಗಂಟೆಯಿಂದ ಶವಗಳಿಗಾಗಿ ಹುಡುಕಾಟ ನಡೆಸಿದರೂ ಇನ್ನೂ ಸಫಲವಾಗಿಲ್ಲ. ಶೋಧ ತಂಡಕ್ಕೆ ಸಹಾಯ ಮಾಡಲು ರೋಬೋ ಮಂಜು ಸೇರಿದಂತೆ ತಜ್ಞರ ಬಳಗವೇ ಇಲ್ಲಿ ಬೀಡು ಬಿಟ್ಟಿದೆ. ಇದೇ ವೇಳೆ ದುರಂತ ನಡೆದ ಸ್ಥಳಕ್ಕೆ ಇಂದು ಬೆಳಿಗ್ಗೆ ಶಿವರಾಜ್ ಕುಮಾರ್ ಮತ್ತು ಪ್ರೇಮ್ ಆಗಮಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ತಿಗುಡಿ ಚಿತ್ರತಂಡದ ತಪ್ಪಿದ್ದಲ್ಲಿ ಕಠಿಣ ಕ್ರಮ: ಜಿ ಪರಮೇಶ್ವರ್