Webdunia - Bharat's app for daily news and videos

Install App

'ಮಂಜಿನ ಹನಿ' ಚಿತ್ರದ ಸಹನಟಿಗೆ ಸಹನಿರ್ಮಾಪಕನಿಂದ ಮೋಸ

Webdunia
ಸೋಮವಾರ, 27 ಆಗಸ್ಟ್ 2018 (14:30 IST)
ಬೆಂಗಳೂರು : ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಬೇಕೆಂದರೆ ಪೂಜೆ ಮಾಡಿ ಮಗುವನ್ನು ಬಲಿ ಕೊಡಬೇಕು ಎಂದು ನಂಬಿಸಿ, ಸಹನಿರ್ಮಾಪಕನೊಬ್ಬ ಲಕ್ಷಾಂತರ ರೂ. ಹಣ ವಂಚಿಸಿದ್ದಾನೆ ಎಂದು ನಟಿ ಚೇತನಾ ಎಂಬುವವರು ಸಹನಿರ್ಮಾಪಕನ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ನಟಿ ಚೇತನಾ ಕ್ರೇಜಿಸ್ಟಾರ್​ ರವಿಚಂದ್ರನ್ ಅವರ 'ಮಂಜಿನ ಹನಿ' ಚಿತ್ರದಲ್ಲಿ ನಾಯಕನ ತಂಗಿ ಪಾತ್ರದಲ್ಲಿ  ನಟಿಸುತ್ತಿದ್ದರು. ಈ ವೇಳೆ ಸಹ ನಿರ್ಮಾಪಕ ನಾಗೇಶ್​​, ಮನು ಎನ್ನುವ ಹೆಸರಿನಲ್ಲಿ ಚೇತನಾಗೆ ಮೆಸೇಜ್​ ಮಾಡಿ, 'ನೀನು ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು. ನೀನು ಒಳ್ಳೆ ಹೆಸರು ಮಾಡಬೇಕಾದರೆ ಗೌರಿ ಎಂಬಾಕೆಯನ್ನು ಭೇಟಿಯಾಗು ಎಂದು ಸೂಚಿಸಿದ್ದನಂತೆ.


ಅದರಂತೆಯೇ ಚೇತನಾ ಮೊಬೈಲ್​ ಮೂಲಕ ಗೌರಿ ಎಂಬಾಕೆಯ ಜೊತೆ ಮಾತನಾಡಿದ್ದು, ಈ ವೇಳೆ ಗೌರಿ 'ನಿನ್ನ ಹೆಸರಲ್ಲಿ ಪೂಜೆ ಮಾಡಿಸಬೇಕು, ನಿನಗೆ ದೋಷವಿದೆ, ಮಗುವನ್ನ ಬಲಿ ಕೊಡಬೇಕು. ನಿನ್ನ ಹೆಸರಿನಲ್ಲಿ ನಾವು ಪೂಜೆ ಮಾಡ್ತೀವಿ. ನಿನಗೆ ಒಳ್ಳೆ ಹೆಸರು ಬರುತ್ತೆ. ಒಳ್ಳೆ ಅವಕಾಶಗಳು ಬರುತ್ತೆ ಎಂದು ನಂಬಿಸಿದ್ದರಂತೆ.


ಹೀಗೆ ಹೇಳಿ ನನ್ನ ಬಳಿ ಮೂರು ವರ್ಷಗಳಲ್ಲಿ 8 ಲಕ್ಷಕ್ಕೂ ಹೆಚ್ಚು ಹಣ ಕಿತ್ತುಕೊಂಡು ಮೋಸ ಮಾಡಿದ್ದಾರೆ. ಇದೀಗ ಅವರು ಮೊಬೈಲ್ ಸ್ವಿಚ್​ ಆಫ್​​ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಚೇತನಾ ಗಿರಿನಗರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments