Webdunia - Bharat's app for daily news and videos

Install App

ಉಡುಪಿನೊಂದಿಗೆ ಕೆಜಿಗಟ್ಟಲೇ ಚಿನ್ನ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದ ಮಾಣಿಕ್ಯ ಸಿನಿಮಾ ನಟಿ

Sampriya
ಮಂಗಳವಾರ, 4 ಮಾರ್ಚ್ 2025 (15:36 IST)
Photo Courtesy X
ಬೆಂಗಳೂರು: ಅಕ್ರಮ ಚಿನ್ನ ಸಾಗಾಟ ಆರೋಪದಲ್ಲಿ ನಟ ಕಿಚ್ಚ ಸುದೀಪ್ ಅಭಿನಯಿಸಿದ ಮಾಣಿಕ್ಯ ಸಿನಿಮಾದ ನಟಿ ರನ್ಯಾ ರಾವ್ ಅವರನ್ನು ಅರೆಸ್ಟ್ ಮಾಡಲಾಗಿದೆ.

ದುಬೈಯಿಂದ ಬಂದಿದ್ದ ಅವರು ಬರೋಬ್ಬರಿ 14.8ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿರುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಬಿಸಿನೆಸ್ ಕೆಲಸದ ನಿಮ್ಮಿತ್ತ ನಟಿ ರನ್ಯಾ ರಾವ್ ಆಗಾಗ ದುಬೈಗೆ ಪ್ರಯಾಣ ಬೆಳೆಸುತ್ತಿದ್ದರು.  ಅದೇ ರೀತಿ ಮಾರ್ಚ್ 3ರ ರಾತ್ರಿ ಕೂಡ ಅವರು ದುಬೈನಿಂದ ಬಂದಿದ್ದಾರೆ. ಈ ವೇಳೆ ಅವರನ್ನು ವಶಕ್ಕೆ ಪಡೆದಾಗ ಉಡುಪಿನ ಒಳಗೆ ಬರೋಬ್ಬರಿ 14.8 ಕೆಜಿ ಚಿನ್ನ ಸಿಕ್ಕಿದೆ. ವಶಕ್ಕೆ ಪಡೆದ ಚಿನ್ನದ ಬೆಲೆ 12ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಅನೇಕ ಬಾರಿ ದುಬೈಗೆ ಹೋಗಿ ಬರುತ್ತಿದ್ದರು ರನ್ಯಾ. ಈ ವಿಚಾರದಿಂದ ಕಸ್ಟಮ್​ನ ಡಿಆರ್​ಐ ಅಧಿಕಾರಿಗಳಿಗೆ ಅನುಮಾನ ಮೂಡಿತ್ತು. ಹೀಗಾಗಿ ದೆಹಲಿಯ DRI ಅಧಿಕಾರಿಗಳು ನಟಿಯ ಹಿಂದೆ ಬಿದ್ದಿದ್ದರು.

ಅವರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಎರಡು ಗಂಟೆ ಮೊದಲೇ ಆಗಮಿಸಿದ್ದರು. ಈ ರೀತಿ ವಶಕ್ಕೆ ಪಡೆದ ಚಿನ್ನದ ಮೌಲ್ಯ ಸುಮಾರು 12 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ರನ್ಯಾ ರಾವ್ ಅನೇಕ ಬಾರಿ ಈ ರೀತಿ ಚಿನ್ನಸಾಗಾಣಿಗೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments