Select Your Language

Notifications

webdunia
webdunia
webdunia
webdunia

’ಟಗರು’ ಚಿತ್ರಕ್ಕೆ ಆಗಮಿಸಿದ ಮಲಯಾಳಿ ನಟಿ ಭಾವನಾ

’ಟಗರು’ ಚಿತ್ರಕ್ಕೆ ಆಗಮಿಸಿದ ಮಲಯಾಳಿ ನಟಿ ಭಾವನಾ
Bangalore , ಬುಧವಾರ, 1 ಮಾರ್ಚ್ 2017 (15:08 IST)
ಮಲಯಾಳಂ ನಟಿ ಭಾವನಾ ಸ್ಯಾಂಡಲ್‌ವುಡ್‌ಗೆ ಮತ್ತೆ ಅಡಿಯಿಟ್ಟಿದ್ದಾರೆ. ಸದ್ಯಕ್ಕೆ ಪೃಥ್ವಿರಾಜ್ ನಾಯನಟನಾಗಿರುವ ಆಡಂ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಇದೀಗ ಕನ್ನಡದ ಟಗರು ಚಿತ್ರಕ್ಕೆ ಆಗಮಿಸಿದ್ದಾರೆ ಭಾವನಾ. ದುನಿಯಾ ಸೂರಿ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ನಾಯಕ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.
 
ಈ ಚಿತ್ರವನ್ನು ಕೆ.ಪಿ. ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ಮಾರ್ಚ್ 3ರಿಂದ ಟಗರು ಇನ್ನೊಂದು ಹಂತದ ಚಿತ್ರೀಕರಣ ನಡೆಯಲಿದೆ. ಅಂದೇ ಭಾವನಾ ಸಹ ಚಿತ್ರತಂಡ ಸೇರಲಿದ್ದಾರೆ ಎಂದು ದುನಿಯಾ ಸೂರಿ ತಿಳಿಸಿದ್ದಾರೆ. ಮಾರ್ಚ್ ಮೊದಲ ವಾರದಿಂದ ಅವರ ಡೇಟ್ಸ್ ಫಿಕ್ಸ್ ನಿಗದಿಯಾಗಿದ್ದು, ಅದರಂತೆ ಅವರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
 
ಸೂರಿ ನಿರ್ದೇಶನದ ಜಾಕಿ ಚಿತ್ರದಲ್ಲೂ ಈ ಹಿಂದೆ ಭಾವನಾ ಅಭಿನಯಿಸಿದ್ದರು. ಅದಾದ ಬಳಿಕ ಗಣೇಶ್ ಜತೆಗೆ ರೋಮಿಯೋ ಚಿತ್ರದಲ್ಲೂ ಅಭಿನಯಿಸಿದ್ದರು. ಸಾಕಷ್ಟು ಚಿತ್ರಗಳಲ್ಲಿ ಬಣ್ಣಹಚ್ಚಿದ್ದ ಭಾವನಾ ಈಗ ಮತ್ತೆ ಸ್ಯಾಂಡಲ್‌ವುಡ್‌ಗೆ ಅಡಿಯಿಟ್ಟಿದ್ದಾರೆ. ಟಗರು ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಮಹೇಂದ್ರ ಸಿಂಹ ಛಾಯಾಗ್ರಹಣ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ವೇತಾ ಬಸು ಪ್ರಸಾದ್ ಈಗೇನು ಮಾಡುತ್ತಿದ್ದಾರೆ?