Select Your Language

Notifications

webdunia
webdunia
webdunia
webdunia

ಶ್ವೇತಾ ಬಸು ಪ್ರಸಾದ್ ಈಗೇನು ಮಾಡುತ್ತಿದ್ದಾರೆ?

ಶ್ವೇತಾ ಬಸು ಪ್ರಸಾದ್ ಈಗೇನು ಮಾಡುತ್ತಿದ್ದಾರೆ?
Mumbai , ಬುಧವಾರ, 1 ಮಾರ್ಚ್ 2017 (15:00 IST)
ಶ್ವೇತಾ ಬಸು ಪ್ರಸಾದ್ ವೃತ್ತಿಬದುಕು ಇನ್ನೇನು ಮುಗಿದೇ ಹೋಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈಗ ಮತ್ತೆ ಅವರು ಧೂಳೆಬ್ಬಿಸಲು ತಯಾರಾಗಿದ್ದಾರೆ. ಈ ಜಾರ್ಖಂಡ್ ಸುಂದರಿ ಈಗ ಮತ್ತೆ ಎರಡನೇ ಇನ್ನಿಂಗ್ಸ್ ಶುರುಮಾಡಿದ್ದಾರೆ.
 
ಟಾಲಿವುಡ್‌ನಲ್ಲಿ ಸಖತ್ ಬಿಜಿಯಾಗಿದ್ದ ಈ ಬೆಡಗಿ ಹೆಸರು ವೇಶ್ಯಾವಾಟಿಕೆ ಜಾಲದಲ್ಲಿ ಕೇಳಿಬಂದ ಬಳಿಕ ಚಿತ್ರೋದ್ಯಮ ಬೆಚ್ಚಿಬಿದ್ದಿತ್ತು. ಆ ಬಳಿಕ ಆ ಪ್ರಕರಣ ರದ್ಧಾಗಿ ಮುಂಬೈಗೆ ಹೋಗಿ ಸೆಟ್ಲ್ ಆಗಿದ್ದರು ಶ್ವೇತಾ. ಕೈಯಲ್ಲಿ ಚಿತ್ರಗಳಿಲ್ಲದ ಕಾರಣ ಹಾಗೂ ಕೆಲಸವಿಲ್ಲದೆ ಮೈತೂಕ ಹೆಚ್ಚಾಗಿತ್ತು. ಮತ್ತೆ ಯೋಗ, ವ್ಯಾಯಾಮದ ಮೂಲಕ ಬಳುಕುವ ಬಳ್ಳಿಯಂತೆ ತಯಾರಾಗಿದ್ದರು.
 
ಇದೀಗ ಹಿಂದಿಯ ಐತಿಹಾಸಿಕ ಧಾರಾವಾಹಿ ’ಚಂದ್ರನಂದಿನಿ’ಯಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸುವ ಛಾನ್ಸ್ ಹೊಡೆದಿದ್ದಾರೆ. ಧಾರಾವಾಹಿ ಜತೆಗೆ ಬಾಲಿವುಡ್‍ನಲ್ಲಿ ತಯಾರಿಸಿದ ಬಿಗ್ ಬಜೆಟ್ ಸಿನಿಮಾ ಬದ್ರಿನಾಥ್ ಕಿ ದುಲ್ಹನಿಯಾದಲ್ಲೂ ಸಣ್ಣ ಪಾತ್ರ ಪೋಷಿಸಿದ್ದ ಶ್ವೇತಾ ಈಗ ಮತ್ತೆ ಟಾಲಿವುಡ್ ಕಡೆಗೆ ಗಮನಹರಿಸಿದ್ದಾರೆ.
 
ಈಕೆಯ ಹೊಸ ಲುಕ್ ನೋಡಿದ ಟಾಲಿವುಡ್ ಮಂದಿ ಶಾಕ್ ಆಗಿದ್ದಾರೆ. ಬಳುಕುವ ಬಳ್ಳಿಯಂತಿರುವ ಈಕೆ ಎಲ್ಲರನ್ನೂ ಹಾಗೆಯೇ ಸೆಳೆದಿದ್ದಾರೆ. ಈ ಮೂಲಕ ಶ್ವೇತಾಗೆ ಮತ್ತೆ ಅವಕಾಶಗಳ ಬಾಗಿಲು ತೆರೆದುಕೊಂಡಿದೆ ಎಂದೇ ಭಾವಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸುನೀಲ್ ಶೆಟ್ಟಿ ತಂದೆ ಇನ್ನಿಲ್ಲ