Publish Date: Wed, 27 Apr 2022 (11:38 IST)
Updated Date: Wed, 27 Apr 2022 (11:42 IST)
ಕೊಚ್ಚಿ: ಅವಕಾಶ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದಾರೆಂದು ಮಲಯಾಳಂ ನಟ ವಿಜಯ್ ಬಾಬು ವಿರುದ್ಧ ಯುವತಿ ನೀಡಿದ ದೂರು ಕೇರಳದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಇದೀಗ ಫೇಸ್ ಬುಕ್ ಲೈವ್ ಮುಖಾಂತರ ಯುವತಿಯ ಆರೋಪಗಳಿಗೆ ಪ್ರತಿಕ್ರಿಯಿಸಿರುವ ನಟ ವಿಜಯ್ ಬಾಬು ಸುಳ್ಳು ಆರೋಪ ಹೊರಿಸಿದ ಆಕೆಯನ್ನು ಸುಮ್ಮನೇ ಬಿಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ನಾನು ಏನೂ ತಪ್ಪು ಮಾಡಿಲ್ಲ. ಆಕೆಯನ್ನು ಸುಮ್ಮನೇ ಬಿಡಲ್ಲ. ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ. ಆಕೆ ನನ್ನ ಬಳಿ ಅಡಿಷನ್ ಗೆ ಬಂದು ಹೋಗಿದ್ದಳು. ಅದಾದ ಬಳಿಕ ತನಗೆ ಮಾನಸಿಕ ಖಿನ್ನತೆಯಿದೆ ಎಂದು ಹಲವು ಸಂದೇಶ ಕಳುಹಿಸಿದ್ದಳು. ಅದೆಲ್ಲದರ ಸಾಕ್ಷ್ಯ ನನ್ನ ಬಳಿಯಿದೆ. ನಾನು ನನ್ನ ಕುಟುಂಬಕ್ಕೆ ಉತ್ತರ ಹೇಳಬೇಕಿದೆ. ನಾನು ನಿರಪರಾಧಿ ಎಂದು ಸಾಬೀತಾಗುವವರೆಗೆ ಹೋರಾಡಲಿದ್ದೇನೆ ಎಂದು ವಿಜಯ್ ಬಾಬು ಹೇಳಿದ್ದಾರೆ.