Publish Date: Sat, 04 Nov 2023 (09:00 IST)
Updated Date: Sat, 04 Nov 2023 (09:01 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಮಾಳವಿಕಾ ಅವಿನಾಶ್ ಅವರ ಆಧಾರ್ ಕಾರ್ಡ್ ಹೆಸರಿನಲ್ಲಿ ವಂಚನೆ ನಡೆದಿದ್ದು, ಅವರನ್ನು ಬಂಧಿಸಲು ಮುಂಬೈ ಪೊಲೀಸರು ಸಿದ್ಧತೆ ನಡೆಸಿದ್ದರು ಎಂಬ ಅಂಶ ಬಹಿರಂಗವಾಗಿದೆ!
ಇದನ್ನು ಸ್ವತಃ ಮಾಳವಿಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯಾರೋ ತಮ್ಮ ಆಧಾರ್ ಕಾರ್ಡ್ ನಂಬರ್ ಬಳಸಿ ಸಿಮ್ ಖರೀದಿಸಿ ಬೆದರಿಕೆ, ಅಶ್ಲೀಲ ಕರೆ ಮಾಡುವುದು ಮಾಡುತ್ತಿದ್ದರು. ಈ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ ಸಿಮ್ ಖರೀದಿಗೆ ಮಾಳವಿಕಾ ಆಧಾರ್ ಸಂಖ್ಯೆ ನೀಡಿರುವುದ ಪತ್ತೆಯಾಗಿದೆ.
ಆದರೆ ಮಾಳವಿಕಾ ಫೋಟೋ ನೋಡಿ ಸ್ವತಃ ಮುಂಬೈ ಪೊಲೀಸರಿಗೆ ಅಚ್ಚರಿಯಾಗಿತ್ತು. ಸ್ವತಃ ಮಾಳವಿಕಾಗೆ ಕರೆ ಮಾಡಿ ಈ ಬಗ್ಗೆ ವಿಚಾರಸಿದ್ದು, ನೀವು ಕೆಜಿಎಫ್ ನಟಿಯಲ್ವಾ ಎಂದು ಗುರುತಿಸಿದ್ದಾರಂತೆ. ತಮ್ಮ ಆಧಾರ್ ಸಂಖ್ಯೆಯನ್ನು ಸೈಬರ್ ವಂಚಕರು ಹೇಗೆ ಪಡೆದುಕೊಂಡರು ಎಂಬುದು ಗೊತ್ತಿಲ್ಲ ಎಂದಿದ್ದಾರೆ ಮಾಳವಿಕಾ. ಇದೀಗ ಪೊಲೀಸರ ಸಲಹೆಯಂತೆ ಈ ಬಗ್ಗೆ ಮಾಳವಿಕಾ ಕೂಡಾ ದೂರು ನೀಡಿದ್ದಾರಂತೆ.
Krishnaveni K
Publish Date: Sat, 04 Nov 2023 (09:00 IST)
Updated Date: Sat, 04 Nov 2023 (09:01 IST)