ಅರ್ಜುನ್‌ ಜತೆಗಿನ ಬ್ರೇಕಪ್‌ ಸುದ್ದಿಗೆ ಬ್ರೇಕ್‌ ನೀಡಿದ ಮಲೈಕಾ ಅರೋರಾ ಮ್ಯಾನೇಜರ್

sampriya
ಶನಿವಾರ, 1 ಜೂನ್ 2024 (15:41 IST)
Photo By Instagram
ಮುಂಬೈ: ವಯಸ್ಸಿನ ಅಂತರ ಮೀರಿ ಪ್ರೀತಿಯಲ್ಲಿ ಬಿದ್ದಿರುವ ಬಾಲಿವುಡ್ ರೋಮ್ಯಾಂಟಿಕ್‌ ಕಪಲ್‌  ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್  ಅವರ ಬ್ರೇಕಪ್‌ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಹರಿದಾಡುತ್ತಿದೆ.

ಹಲವು ವರ್ಷಗಳಿಂದ ಲಿವಿಂಗ್‌ ರಿಲೇಶನ್‌ ಶಿಪ್‌ನಲ್ಲಿರುವ ಈ ಜೋಡಿ ದೂರವಾಗಿದ್ದಾರೆಂಬ ವದಂತಿ ಹರಿದಾಡುತ್ತಿರುವ ಬೆನ್ನಲ್ಲೇ ನಟಿ ಮಲೈಕಾ ಅರೋರಾ ಅವರ ಮ್ಯಾನೇಜರ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಮಲೈರಾ ಅರೋರಾ ಮತ್ತು ಅರ್ಜುನ್ ಕಪೂರ್ ಬ್ರೇಕಪ್ ವದಂತಿಯನ್ನು ನಟಿಯ ಮ್ಯಾನೇಜರ್ ಅಲ್ಲಗಳೆದಿದ್ದಾರೆ. ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ ಈ ಮೂಲಕ ಬ್ರೇಕಪ್‌ ಸುದ್ದಿಗೆ ಬ್ರೇಕ್‌ ನೀಡಿದ್ದಾರೆ.

ನಟಿ ಮಲೈಕಾ ಅರ್ಜುನ್ ಕಪೂರ್‌ಗಿಂತ ವಯಸ್ಸಿನಲ್ಲಿ ದೊಡ್ಡವರು. ಆದರೆ ಈ ಜೋಡಿ ವಯಸ್ಸಿನ ಅಂತರ ಮೀರಿ ಪ್ರೀತಿ ಮಾಡಿ ಒಟ್ಟಿಗೆ ಲಿವಿಂಗ್‌ ರಿಲೇಶನ್‌ ಶಿಪ್‌ನಲ್ಲಿದ್ದರು.

ಈ ಜೋಡಿ ಆಗಾಗ ವಿದೇಶಕ್ಕೆ ಪ್ರಯಾಣ ಬೆಳೆಸಿ ತಮ್ಮ ಅತ್ಯಮೂಲ್ಯ ಕ್ಷಣಗಳನ್ನು ಒಟ್ಟಿಗೆ ಕಳೆಯುತ್ತಿದ್ದರು. ಅದಲ್ಲದೆ ಪಾರ್ಟಿಗಳಲ್ಲಿ ಒಟ್ಟಿಗೆ ಎಂಜಾಯ್‌ ಮಾಡಿ, ಕ್ಯಾಮರಾಗಳಿಗೆ ಪೋಸ್‌ ನೋಡಿತ್ತಿದ್ದರು. ತಮ್ಮಿಬ್ಬರ ಪ್ರೀತಿಯನ್ನು ಮುಕ್ತಾವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತಿದ್ದರು. . ಇನ್ನೂ ಇವರಿಬ್ಬರ ರಿಲೇಶನ್‌ಶಿಪ್‌ ಬಗ್ಗೆ ನೆಟ್ಟಿಗರು ಕಮೆಂಟ್‌ ಮಾಡಿ ಇದು ಟೈಮ್‌ ಪಾಸ್‌ ಲವ್‌ ಎಂದಿದ್ದರು.

ಇನ್ನೂ ನಟಿ ಮಲೈಕಾ ಅರೋರಾ ಅವರು ಇದಕ್ಕೆಲ್ಲ ಕ್ಯಾರೇ ಎನ್ನದೇ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು. ಅದಲ್ಲದೆ ಅರ್ಜುನ್‌ ಕಪೂರ್‌ ಜತೆ ಒಟ್ಟಿಗೆ ಭವಿಷ್ಯವನ್ನು ಕಟ್ಟಿಕೊಳ್ಳುವ ಆಸೆಯನ್ನು  ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಆದರೆ ಈಚೆಗೆ ಬಾಲಿವುಡ್‌ ಅಂಗಳದಲ್ಲಿ ಇವರಿಬ್ಬರು ದೂರಾವಾಗಿರುವ ಬಗ್ಗೆ ವದಂತಿ ಇದೆ. ಆದರೆ ಈ ಬಗ್ಗೆ ಜೋಡಿ ಇದುವರೆಗೂ ಮೌನವಹಿಸಿದ್ದಾರೆ. ‌<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹಿರಿಯ ನಟ ಉಮೇಶ್ ಚಿಕಿತ್ಸೆಗೆ ನೆರವಾಗಲು ಮುಖ್ಯಮಂತ್ರಿಗಳಿಗೇ ಪತ್ರ ಬರೆದ ಸಚಿವ ತಂಗಡಗಿ

ರಿಷಬ್ ಶೆಟ್ಟಿ ರೊಮ್ಯಾನ್ಸ್ ಸೀನ್ ಮಾಡುವಾಗ ಇದೊಂದು ಕಾರಣಕ್ಕೆ ಮಾನಿಟರ್ ಮುಂದಿರುತ್ತಾರಂತೆ ಪ್ರಗತಿ

ಕನ್ನಡ ಅಂತ ಬಂದ್ರೆ ನನ್ನ ಶೇಕ್ ಮಾಡಕ್ಕಾಗಲ್ಲ ಎಂದ ಅಶ್ವಿನಿ ಗೌಡ: ಕರ್ನಾಟಕ ರತ್ನ ಬಿಡಮ್ಮಾ ಎಂದ ನೆಟ್ಟಿಗರು

ಕರುನಾಡಿನಲ್ಲಿ ಹೊಸ ದಾಖಲೆ ಬರೆದ ಕಾಂತಾರ: ವಿವಿಧ ಭಾಷೆಗಳ ಕಲೆಕ್ಷನ್‌ನ ಮಾಹಿತಿ ಇಲ್ಲಿದೆ

ವೈಲ್ಡ್ ಕಾರ್ಡ್ ಸ್ಪರ್ಧಿಯ ಮಾತಿಗೆ ನೊಂದು ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ

ಮುಂದಿನ ಸುದ್ದಿ
Show comments