Webdunia - Bharat's app for daily news and videos

Install App

ಮಡೆನೂರು ಮನುಗೆ ಶಿವಣ್ಣ ಗೇಟ್ ತೆರೆಯದೇ ಇದ್ದಿದ್ದು ನಿಜಾನಾ

Krishnaveni K
ಶುಕ್ರವಾರ, 27 ಜೂನ್ 2025 (12:30 IST)
ಬೆಂಗಳೂರು: ಅತ್ಯಾಚಾರ ಆರೋಪಕ್ಕೆ ಒಳಗಾಗಿರುವ ನಟ ಮಡೆನೂರು ಮನು ಮೊನ್ನೆಯಷ್ಟೇ ಶಿವಣ್ಣನ ಮನೆಗೆ ಕ್ಷಮೆ ಕೇಳಲು ಹೋಗಿ ಗೇಟ್ ಕೂಡಾ ತೆರೆಯದ ಕಾರಣ ವಾಪಸ್ ಆದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಈ ಬಗ್ಗೆ ನಿಜಾಂಶವೇನೆಂದು ಸ್ವತಃ ಮಡೆನೂರು ಮನು ಈಗ ಹೇಳಿಕೊಂಡಿದ್ದಾರೆ. ಅತ್ಯಾಚಾರ ಆರೋಪದಲ್ಲಿ ಮಡೆನೂರು ಬಂಧನವಾದ ಬೆನ್ನಲ್ಲೇ ಅವರದ್ದು ಎನ್ನಲಾದ ಅಡಿಯೋ ಒಂದು ವೈರಲ್ ಆಗಿತ್ತು. ಇದರಲ್ಲಿ ಶಿವಣ್ಣ ಇನ್ನು ಕೆಲವೇ ದಿನ ಸತ್ತೋಗ್ತಾರೆ ಎಂದು ಆಕ್ಷೇಪಾರ್ಹವಾಗಿ ಮನು ಹೇಳಿದ್ದರು. ಇದರ ಬೆನ್ನಲ್ಲೇ ಚಲನಚಿತ್ರ ವಾಣಿಜ್ಯ ಮಂಡಳಿ ಅವರನ್ನು ಬ್ಯಾನ್ ಮಾಡಿತ್ತು.

ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮನು ಕ್ಷಮೆ ಕೇಳಲು ಶಿವಣ್ಣ ಮನೆಗೆ ಹೋಗಿದ್ದರೆಂದು ಹೇಳಲಾದ ವಿಡಿಯೋ ವೈರಲ್ ಆಗಿತ್ತು. ಆದರೆ ಈ ವಿಡಿಯೋ ಹಳೆಯದ್ದು. ನಾನು ಶಿವಣ್ಣನ ಮನೆಗೆ ಹೋದಾಗ ಅವರು ಅಲ್ಲಿರಲಿಲ್ಲ. ಹೀಗಾಗಿ ಅವರು ಇಲ್ಲ ಅಂತ ವಾಪಸ್ ಆಗಿದ್ದೆ ಅಷ್ಟೇ. ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದಿದ್ದಾರೆ.

ಚಿತ್ರರಂಗದಿಂದ ನಿಷೇಧವಾದ ಬಳಿಕ ಇದೀಗ ತಮ್ಮ ಮೇಲಿನ ನಿಷೇಧ ಹಿಂತೆಗೆಯಲು ಮಡೆನೂರು ಮನು ತೀವ್ರ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಶಿವಣ್ಣ, ದರ್ಶನ್, ಧ್ರುವ ಸರ್ಜಾ ಬಳಿ ಸೋಷಿಯಲ್ ಮೀಡಿಯಾದಲ್ಲೇ ಕ್ಷಮೆ ಯಾಚಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟಿ ನಿರೂಪಕಿ ಅನುಶ್ರೀ ಎಷ್ಟೊಂದು ಸಿಂಪಲ್‌, ಮದುವೆ ಸೀರೆ ಬಗ್ಗೆ ಕೊಟ್ರು ಬಿಗ್‌ ಅಪ್ಡೇಟ್‌

Amrithadhare serial: ಅಮೃತಧಾರೆಯಲ್ಲಿ ಮಹಾ ತಿರುವು, ಕನ್ನಡದಲ್ಲಿ ಅಪರೂಪಕ್ಕೆ ನಡೆಯುತ್ತಿದೆ ಇಂಥಾ ಟ್ವಿಸ್ಟ್

ಖ್ಯಾತ ಕಿರುತೆರೆ ನಟ ಆಶಿಶ್ ಕಪೂರ್ ಮೇಲೆ ಇದೆಂಥಾ ಆರೋಪ, ಜೈಲು ಸೇರುವ ಪರಿಸ್ಥಿತಿ ಹಾಕೆ ಬಂತು

ಜಿಎಸ್ ಟಿ ದರ ಕಡಿತವಾದ್ರೂ ಕನ್ನಡ ಸಿನಿಮಾ ವೀಕ್ಷಕರಿಗೆ ಲಾಭವಿಲ್ಲ

ನಾನು ಸ್ವಲ್ಪ ಸ್ಲೋ ಎನಿಸಬಹುದು ಆದ್ರೆ.. ರಕ್ಷಿತ್ ಶೆಟ್ಟಿ ಹೇಳಿದ ಮಾತು ನೋಡಿ video

ಮುಂದಿನ ಸುದ್ದಿ
Show comments