Select Your Language

Notifications

webdunia
webdunia
webdunia
webdunia

ಲಕ್ಕಿ ಮ್ಯಾನ್ ಸಿನಿಮಾ ತಂಡದಿಂದ ಪುನೀತ್ ಫ್ಯಾನ್ಸ್ ಗೆ ಸಿಹಿ ಸುದ್ದಿ

ಲಕ್ಕಿ ಮ್ಯಾನ್ ಸಿನಿಮಾ ತಂಡದಿಂದ ಪುನೀತ್ ಫ್ಯಾನ್ಸ್ ಗೆ ಸಿಹಿ ಸುದ್ದಿ
ಬೆಂಗಳೂರು , ಶನಿವಾರ, 1 ಜನವರಿ 2022 (09:10 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದ ಸಿನಿಮಾ ಲಕ್ಕಿ ಮ್ಯಾನ್. ಈ ಸಿನಿಮಾ ವತಿಯಿಂದ ಈಗ ಸಿಹಿ ಸುದ್ದಿಯೊಂದು ಹೊರಬಂದಿದೆ.

ಹೊಸ ವರ್ಷದ ಹೊಸ್ತಿಲಲ್ಲಿ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿರುವ ಚಿತ್ರತಂಡ ಸದ್ಯದಲ್ಲೇ ಚಿತ್ರ ಬಿಡುಗಡೆಯಾಗುತ್ತಿರುವುದಾಗಿ ಹೇಳಿದೆ. ಪುನೀತ್ ಇರುವ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕರಾಗಿ ಅಭಿನಯಿಸಿದ್ದಾರೆ. ಚಿತ್ರದ ಹಾಡೊಂದರಲ್ಲಿ ಪುನೀತ್ ಮತ್ತು ಡ್ಯಾನ್ಸ್ ‍ಸ್ಟಾರ್ ಪ್ರಭುದೇವ ಜೊತೆಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಹೀಗಾಗಿ ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಿಮ್ ಆರಂಭಿಸಿದ ಅಭಿಮಾನಿಗೆ ಬಲ ಕೊಟ್ಟ ಧ್ರುವ ಸರ್ಜಾ