Webdunia - Bharat's app for daily news and videos

Install App

ರೇಪ್ ಮಾಡುವ ಪುರುಷರಿಗೆ ಮಹಿಳೆಯರು ಕಾಂಡೋಮ್ ಕೊಟ್ಟು ಸಹಕರಿಸಬೇಕು ಎಂದು ಚಿತ್ರ ನಿರ್ಮಾಪಕ!

Webdunia
ಬುಧವಾರ, 4 ಡಿಸೆಂಬರ್ 2019 (15:55 IST)
ಮುಂಬೈ: ರೇಪ್ ಮಾಡುವ ಪುರುಷರ ಕಾಮದಾಹ ತೀರಿಸಲು ಮಹಿಳೆಯರು ಸಹಕರಿಸಬೇಕು. ಅದಕ್ಕಾಗಿ ಅವರು ದಿನವೂ ತಮ್ಮ ಬ್ಯಾಗ್ ನಲ್ಲಿ ಕಾಂಡೋಮ್ ಇಟ್ಟುಕೊಂಡರೆ ಸಾಕು. ಒಂದು ವೇಳೆ ಇಂತಹ ಪುರುಷರಿಗೆ ಸಹಕರಿಸಿದರೆ ಅವರ ಬಯಕೆ ತೀರಿದ ಬಳಿಕ ಕೊಲೆ ಮಾಡದೇ ಬಿಟ್ಟು ಬಿಡುತ್ತಾರೆ!


ಹೀಗೊಂದು ಐಡಿಯಾ ಕೊಟ್ಟಿದ್ದು ಒಬ್ಬ ಸಿನಿಮಾ ನಿರ್ಮಾಪಕ! ಡೇನಿಯಲ್ ಶ್ರವಣ್ ಎಂಬ ಚಿತ್ರ ನಿರ್ಮಾಪಕ ತನ್ನ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ ಮಾಡಿ ಪೈಶಾಚಿಕವಾಗಿ ಕೊಲೆ ಮಾಡುವ ದುರುಳರಿಂದ ರಕ್ಷಿಸಿಕೊಳ್ಳಲು ಇಂತಹದ್ದೊಂದು ಐಡಿಯಾ ಬರೆದುಕೊಂಡಿದ್ದಾರೆ. ಇದನ್ನು ಓದಿದ ಜನ ಈಗ ಚಿತ್ರ ನಿರ್ಮಾಪಕನನ್ನು ಹಿಗ್ಗಾ ಮುಗ್ಗಾ ಬೈಯುತ್ತಿದ್ದಾರೆ.

‘ಕೊಲೆ ಮಾಡದೇ ಕೇವಲ ಅತ್ಯಾಚಾರ ಮಾಡುವುದನ್ನು ಸರ್ಕಾರ ಕಾನೂನುಬದ್ಧಗೊಳಿಸಬೇಕು. 18 ಕ್ಕಿಂತ ಮೇಲ್ಪಟ್ಟ ವಯಸ್ಸಿನ ಹುಡುಗಿಯರಿಗೆ ಅತ್ಯಾಚಾರದ ಬಗ್ಗೆ ಶಿಕ್ಷಣ ನೀಡಬೇಕು. ಉದಾಹರಣೆಗೆ ಹುಡುಗಿಯರು ಪುರುಷರ ಲೈಂಗಿಕ ಬಯಕೆಯನ್ನು ತಡೆಯಬಾರದು. ಆಗಲೇ ಇಂತಹ ಕೊಲೆ ಪ್ರಕರಣವನ್ನು ನಿಲ್ಲಿಸಲು ಸಾಧ್ಯ. ವೀರಪ್ಪನ್ ಕೊಂದಿದ್ದರಿಂದ ಕಳ್ಳಸಾಗಣೆ ತಡೆಯಲು ಸಾಧ‍್ಯವಾಗಿಲ್ಲ, ಲಾಡೆನ್ ಕೊಂದ ಮಾತ್ರಕ್ಕೆ ಉಗ್ರವಾದ ನಿಲ್ಲಲಿಲ್ಲ. ಅದೇ ರೀತಿ ನಿರ್ಭಯಾ ಅಪರಾಧಿಗಳಿಗೆ ಶಿಕ್ಷೆ ಜಾರಿ ಮಾಡಿರುವುದರಿಂದ ಅತ್ಯಾಚಾರ ನಿಲ್ಲಲಿಲ್ಲ. ವಿಶೇಷವಾಗಿ ಭಾರತೀಯ ಮಹಿಳೆಯರಿಗೆ ತಿಳುವಳಿಕೆ ನೀಡಬೇಕು (18 ವಯಸ್ಸು ದಾಟಿದ ಮೇಲೆ ಕಾಂಡೋಮ್ ಬ್ಯಾಗ್ ನಲ್ಲಿಟ್ಟುಕೊಂಡು ಹೋಗುವುದು ಇತ್ಯಾದಿ) ಇದು ತುಂಬಾ ಸಿಂಪಲ್ ಲಾಜಿಕ್. ಪುರುಷರ ಲೈಂಗಿಕ ಬಯಕೆ ಈಡೇರಿದರೆ ಅವರು ಮತ್ತೆ ಆ ಮಹಿಳೆಯನ್ನು ಕೊಲೆ ಮಾಡಲ್ಲ. ಸರ್ಕಾರ ಇದು ಕಾನೂನುಬದ್ಧಗೊಳಿಸಬೇಕು’ ಎಂದು ಸುದೀರ್ಘವಾಗಿ ಡೇನಿಯಲ್ ಬರೆದುಕೊಂಡಿದ್ದಾರೆ.

ಇವರ ಈ ಐಡಿಯಾ ಓದಿದ ಜನ ಮೊದಲು ಇಂತಹಾ ಮೆಂಟಾಲಿಟಿಯ ಜನರನ್ನು ಸರ್ಕಾರ ಸ್ವಯಂಪ್ರೇರಿತವಾಗಿ ಮಾನಸಿಕ ತಜ್ಞರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕು. ಇಂತಹ ಮೆಂಟಾಲಿಟಿ ಇರುವವರಿಂದಲೇ ಸಮಾಜ ಹಾಳಾಗುತ್ತಿರುವುದು. ಪೈಶಾಚಿಕ ಕೃತ್ಯ ಎಸಗುತ್ತಿರುವ ಪುರುಷರ ಸಾಲಿನಲ್ಲಿ ಈತನೂ ಇರುವುದು ಈ ಮೂಲಕ ಗ್ಯಾರಂಟಿಯಾಯಿತು ಎಂದೆಲ್ಲಾ ಚೆನ್ನಾಗಿಯೇ ಉಗಿದು ನಿರ್ಮಾಪಕನ ಬೆವರಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಾಲಿವುಡ್ ನಟ ಗುಲ್ಶನ್ ದೇವಯ್ಯ ಫಸ್ಟ್ ಲುಕ್ ಬಿಡುಗಡೆ ಮಾಡಿದ ಕಾಂತಾರ ತಂಡ

ಸಾಹಸಸಿಂಹ ವಿಷ್ಣುವರ್ದನ್ ಸ್ಮಾರಕಕ್ಕಾಗಿ ಕಿಚ್ಚ ಸುದೀಪ್ ಜಾಗ ಖರೀದಿ

ಸಪ್ಪೆ ಮುಖದಲ್ಲಿ ಪತಿ ದರ್ಶನ್ ನೋಡಲು ಬಂದ ವಿಜಯಲಕ್ಷ್ಮಿ

ಬಳ್ಳಾರಿನಾ, ಪರಪ್ಪನಾ ಅಗ್ರಹಾರನಾ: ದರ್ಶನ್‌ಗೆ ಮುಗಿಯದ ಸಂಕಷ್ಟ

₹100ಕೋಟಿ ಕ್ಲಬ್ ಸೇರುತ್ತಾ, ಮತ್ತೊಂದು ಹೊಸ ದಾಖಲೆ ಮಾಡಿದ ಸು ಫ್ರಮ್ ಸೋ

ಮುಂದಿನ ಸುದ್ದಿ