Select Your Language

Notifications

webdunia
webdunia
webdunia
webdunia

ಬಿಗ್‌ಬಾಸ್‌ಗೆ ಧಮ್ಕಿ ಹಾಕಿದ ಲಾಯರ್ ಜಗದೀಶ್ ಒಂದು ವಾರದಲ್ಲೇ ಹೊರ ನಡೆಯುತ್ತಾರಾ

BigBoss Season 11

Sampriya

ಬೆಂಗಳೂರು , ಗುರುವಾರ, 3 ಅಕ್ಟೋಬರ್ 2024 (16:05 IST)
Photo Courtesy X
ಬೆಂಗಳೂರು: ಟಾಸ್ಕ್ ವಿಚಾರವಾಗಿ ಧನರಾಜ್ ಆಚಾರ್ ಜತೆ ಕಿತ್ತಾಡಿಕೊಂಡ ದಿನವೇ ಲಾಯರ್ ಜಗದೀಶ್ ಅವರು ಬಿಗ್‌ಬಾಸ್ ಮನೆಯಿಂದ ಹೊರ ನಡೆಯುವುದಾಗಿ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.  ಬಿಗ್‌ಬಾಸ್‌ ರಿಯಾಲಿಟಿ ಶೋ ಆರಂಭವಾಗಿ ಕೇವಲ ಮೂರನೇ ದಿನಕ್ಕೆ ಲಾಯರ್ ಜಗದೀಶ್ ನಡೆ ಕುತೂಹಲ ಮೂಡಿಸುತ್ತಿದೆ.

ಸ್ವರ್ಗ ಹಾಗೂ ನರಕ ನಿವಾಸಿಗಳು ನಡುವೆ ಈಗಾಗಲೇ ಭಿನ್ನಾಭಿಪ್ರಾಯ ಶುರುವಾಗಿದೆ. ಇನ್ನೂ ಸ್ವರ್ಗ ನಿವಾಸಿಯಾಗಿರುವ ಜಗದೀಶ್ ಅವರಿಗೆ ನರಕ ನಿವಾಸಿಗಳನ್ನು ಮಾನವೀಯತೆ ಇಲ್ಲದ ಹಾಗೇ ನೋಡಿಕೊಳ್ಳಲಾಗುತ್ತಿದೆ. ಇದರಿಂದ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಅದಲ್ಲದೆ ಬಿಗ್‌ಬಾಸ್‌ಗೆ ಅವಾಜ್ ಹಾಕಿ, ನಮ್ಮನ್ನು ಎದುರು ಹಾಕಿಕೊಂಡು ಬಿಗ್‌ಬಾಸ್ ಹೇಗೆ ಓಡಿಸ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.  ಅದಲ್ಲದೆ ಬಿಗ್‌ಬಾಸ್ ಕಾರ್ಯಕ್ರಮದ ಹೆಸರು ಹಾಳು ಮಾಡುವುದಾಗಿಯೂ, ಅಲ್ಲಿಗೆ ಯಾರು ಕಾಲಿಡದಂತೆ ಮಾಡುವುದಾಗಿಯೂ ಹೇಳಿದ್ದಾರೆ.

ಜಗದೀಶ್ ಅವರು ಈಗಾಗಲೇ ಬಿಗ್‌ಬಾಸ್ ರೂಲ್ಸ್‌ ಬ್ರೇಕ್ ಮಾಡಿ ನರಕ ನಿವಾಸಿಗಳಿಗೆ ಸ್ವರ್ಗ ನಿವಾಸಿಗಳ ಆಹಾರ ಕೊಡುವುದು, ಬಿಸಿ ನೀರು ಕಾಯಿಸಿಕೊಡುವುದು, ನರಕ ನಿವಾಸಿಗಳು ಮಾಡಬೇಕಾದ ಕೆಲಸಗಳನ್ನು ತಾವೇ ಮಾಡಿ ಮನೆಯವರ ಕೋಪಕ್ಕೆ ಕಾರಣರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೇಪ್ ಕೇಸ್: ಆ ಒಂದು ಕಾರಣಕ್ಕೆ ಜಾನಿ ಮಾಸ್ಟರ್‌ಗೆ ನಾಲ್ಕು ದಿನದ ಜಾಮೀನು ನೀಡಿದ ಕೋರ್ಟ್‌