Webdunia - Bharat's app for daily news and videos

Install App

ಪ್ರೇಮಿಗಳ ದಿನಕ್ಕೆ ಕೊಡೆಮುರುಗನ ವೀಡಿಯೋ ಸಾಂಗ್ ಗಿಫ್ಟ್..

Webdunia
ಶುಕ್ರವಾರ, 14 ಫೆಬ್ರವರಿ 2020 (18:34 IST)
ಸ್ಯಾಂಡಲ್ ವುಡ್ ನಲ್ಲಿ ಟೈಟಲ್  ಹಾಗೂ ಮೊದಲ ಟ್ರೈಲರ್  ನ ಮೂಲಕವೇ ಕ್ಯೂರಿಯಾಸಿಟಿ ಹುಟ್ಟಿಸಿದ್ದ ಕೊಡೆಮುರುಗ ನಿಂದ ಇಂದು ಪ್ರೇಮಿಗಳ ದಿನಕ್ಕಾಗಿ ಅಭಿಮಾನಿಗಳಿಗೆ ಗಿಫ್ಟ್  ಕೊಟ್ಟಿದೆ. ಚಿತ್ರದಿಂದ 'ನಾನು ಮುರುಗ.'..ಎಂಬ ಟೈಟಲ್ ವೀಡಿಯೋ ಸಾಂಗ್ ರಿಲೀಸ್ ಆಗಿದ್ದು ಮಸ್ತ್ ಆಗಿದೆ.
 ಸಾಮಾನ್ಯವಾಗಿ ಚಿತ್ರ ಕಂಪ್ಲೀಟ್ ಆದ್ಮೇಲೆ ಟ್ರೈಲರ್ ರಿಲೀಸ್ ಮಾಡೋದು ನೋಡಿರ್ತೀವಿ ಆದ್ರೆ ಈ ತಂಡದ ವಿಶೇಷ ಏನೆಂದರೆ ಮೊದಲೇ ಚಿತ್ರತಂಡ ಎಂಟೂವರೆ ನಿಮಿಷಗಳ ದೀರ್ಘ ಟ್ರೇಲರ್ ಬಿಡುಗಡೆ ಮಾಡಿ ಎಲ್ಲರ ಚಿತ್ತ ತನ್ನತ್ತ ಹರಿಸಿಕೊಂಡಿತ್ತು. ಖಾಸಗಿ ವಾಹಿನಿಯ ಅಗ್ನಿಸಾಕ್ಷಿ ದಾರಾವಾಹಿಯಲ್ಲಿ ಫೇಮಸ್ ಆಗಿದ್ದ ವಿಲನ್ ಮುನಿಕೃಷ್ಣಾ ರ   ಮುರುಗ ಪಾತ್ರವನ್ನೇ ಕೊಂಚ ಬದಲಾಯಿಸಿ ಚಿತ್ರದ ಟೈಟಲ್ ಆಗಿಸಿ, ವಿಲನ್ ರನ್ನ ಚಿತ್ರದ ಹೀರೋ ಮಾಡ್ತಿರೋದು  ‘ಕೊಡೆಮುರುಗ’ ಸಿನ್ಮಾದ ಇನ್ನೊಂದು ಆಕರ್ಷಣೆ. ಇವರಿಗೆ ನಾಯಕಿಯಾಗಿ ಪಲ್ಲವಿ ಗೌಡ ಬಣ್ಣಹಚ್ಚಿದ್ದಾರೆ. ಜೊತೆಗೆ ನಿರ್ದೇಶಕ ಸುಬ್ರಮಣ್ಯ ಪ್ರಸಾದ್ ಸಹ ಮತ್ತೊಂದು ಮುಖ್ಯಪಾತ್ರದಲ್ಲಿ ನಾಯಕನಾಗಿ  ಕಾಣಿಸಿಕೊಂಡಿದ್ದಾರೆ.
ದೈನಂದಿನ ಬದುಕಿನಲ್ಲಿ ನಡೆಯೋ ಆಗುಹೋಗುಗಳನ್ನೇ ಹಾಸ್ಯವಾಗಿ ಹೇಳಿ ತೆರೆಮೇಲೆ ತರೋ ಪ್ರಯತ್ನಕ್ಕೆ ಕೈ ಹಾಕಿದ್ದು  ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ್.  ಈ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಈ ವಿಶೇಷ ಕೊಡೆಮುರುಗನಿಗೆ  ಕೆ. ರವಿಕುಮಾರ್ ಬಂಡವಾಳ ಹೂಡುವ ಜವಬ್ದಾರಿಯೊಂದಿಗೆ ನಿರ್ಮಾಪಕರಾಗಿದ್ದಾರೆ.
ಸಿನಿಮಾದೊಳಗೆ ನಡೆಯುವ ಸಿನಿಮಾದ ಕಥೆಯ ಎಳೆಯಲ್ಲಿ ಬರೋ  ನಿರ್ದೇಶಕನ ಪಾತ್ರವನ್ನು ಸ್ವತಃ ಸುಬ್ರಹ್ಮಣ್ಯ ಅವರೇ ನಿಭಾಯಿಸಿದ್ದಾರಂತೆ.ಇನ್ನು ಈ ಚಿತ್ರಕ್ಕೆ  ತ್ಯಾಗರಾಜ್ ಸಂಗೀತ, ರುದ್ರಮುನಿ ಛಾಯಾಗ್ರಹಣ, ಸಿ. ರವಿಚಂದ್ರನ್ ಸಂಕಲನವಿದ್ದು, ಈಗಾಗಲೇ ರಿಲೀಸ್ ಆದ ಚಿತ್ರದ ‘ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ’ ಅನ್ನುವ ಸೂಪರ್ ಲಿರಿಕಲ್ ವೀಡಿಯೋ ರಿಲೀಸ್ ಆಗಿ ಸದ್ದು ಮಾಡಿತ್ತು. ಸಧ್ಯ ಸಿನ್ಮಾ ರಿಲೀಸ್ ಗೆ ರೆಡಿಯಾಗಿದ್ದು ಮಾರ್ಚ್ ತಿಂಗಳಲ್ಲಿ ತೆರೆಗೆ ಬರಲು ಸಿದ್ದತೆ ನಡೆಯುತ್ತಿದೆ. ಸಧ್ಯ ರಿಲೀಸ್ ಅಗಿರೋ ಚಿತ್ರದ ಜಲಕ್ ಗಳನ್ನ ನೋಡಿ ಎಂಜಾಯ್ ಮಾಡ್ತಾ ಈ ಸಲದ ಪ್ರೇಮಿಗಳ ದಿನವನ್ನ ಸೆಲೆಬ್ರೇಟ್ ಮಾಡಿ ಅಂತಿದೆ ಕೊಡೆಮುರುಗ ತಂಡ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments