ಸಿಕ್ಸ್ ಪ್ಯಾಕ್ ವಿಚಾರದಲ್ಲಿ ಕನ್ನಡದ ಸಲ್ಮಾನ್ ಖಾನ್ ಯಾರು ಗೊತ್ತಾ

Krishnaveni K
ಶನಿವಾರ, 31 ಆಗಸ್ಟ್ 2024 (13:02 IST)
Photo Credit: Facebook
ಬೆಂಗಳೂರು: ಇತ್ತೀಚೆಗೆ ಸ್ಟಾರ್ ನಟರು ಸಿಕ್ಸ್ ಪ್ಯಾಕ್ ಬಾಡಿ ಬೆಳೆಸುವುದು ಸಾಮಾನ್ಯ. ಬಾಲಿವುಡ್ ನಿಂದ ಬಂದ ಈ ಟ್ರೆಂಡ್ ಕನ್ನಡದಲ್ಲೂ ಸಾಮಾನ್ಯವಾಗಿದೆ. ಆದರೆ ಕನ್ನಡದಲ್ಲಿ ಎಲ್ಲರಿಗಿಂತ ಮೊದಲು ಸಿಕ್ಸ್ ಪ್ಯಾಕ್ ಮಾಡಿ ತೋರಿಸಿದವರು ರಿಯಲ್ ಸ್ಟಾರ್ ಉಪೇಂದ್ರ.

ಒಂದು ಕಾಲದಲ್ಲಿ ಕನ್ನಡದ ಸಲ್ಮಾನ್ ಖಾನ್ ಎಂದು ಕರೆಯಿಸಿಕೊಳ್ಳುತ್ತಿದ್ದ ಉಪೇಂದ್ರ ಈಗಲೂ ಮೈ ಕಟ್ಟು ಕಾಯ್ದುಕೊಳ್ಳುವುದನ್ನು ಮರೆತಿಲ್ಲ. ರಕ್ತ ಕಣ್ಣೀರು ಸಿನಿಮಾದ ಬಾ ಬಾರೋ ರಸಿಕ, ನಾಗರಹಾವು ಸಿನಿಮಾದಲ್ಲಿ ಜ್ಯೋತಿಕಾ ಜೊತೆ ಯಾಕಿಂಗಾಡ್ತೀಯೇ, ಐ ಲವ್ ಯೂ ಸಿನಿಮಾದಲ್ಲಿ ರಚಿತಾ ರಾಮ್ ಜೊತೆ ಹಾಡಿನಲ್ಲಿ ಅವರ ಸಿಕ್ಸ್ ಪ್ಯಾಕ್ ಬಾಡಿ ಪ್ರದರ್ಶನ ಹುಡುಗಿಯರ ಮನ ಕದ್ದಿತ್ತು.

ಈಗಲೂ ಉಪೇಂದ್ರ ಅದೇ ರೀತಿ ತಮ್ಮ ಮೈಕಟ್ಟು ಕಾಯ್ದುಕೊಳ್ಳಲು ಆದ್ಯತೆ ನೀಡುತ್ತಾರೆ ಎಂಬುದು ಇತ್ತೀಚೆಗಿನ ವಿಡಿಯೋವೊಂದರಿಂದ ಖಾತ್ರಿಯಾಗಿದೆ. ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಉಪೇಂದ್ರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಸದ್ಯಕ್ಕೆ ಉಪೇಂದ್ರ ಯುಐ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದು ಆ ಸಿನಿಮಾಗಾಗಿಯೇ ಈ ಕಸರತ್ತು ಮಾಡುತ್ತಿರಬಹುದು ಎನ್ನಲಾಗಿದೆ. ಯುಐ ಸಿನಿಮಾಗೆ ಸ್ವತಃ ಉಪೇಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಅವರ ಇತ್ತೀಚೆಗಿನ ಬಾಡಿ ಬಿಲ್ಡ್ ವಿಡಿಯೋ ನೋಡಿದರೆ ಯುಐ ಬಗ್ಗೆ ಮತ್ತಷ್ಟು ಕುತೂಹಲ ಮೂಡುವುದು ಗ್ಯಾರಂಟಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಲಾವಿದ ನಿತಿನ್ ಶೀವಾಂಶ್ ಜತೆ ಸುಹಾನಾ ಸೈಯ್ಯದ್‌ಗೆ ಪ್ರೀತಿ ಶುರುವಾಗಿದ್ದು ಹೇಗೇ ಗೊತ್ತಾ

ನಮಗೆ ಮಕ್ಕಳು ಬೇಡವೆಂದ ನಟಿ ಸಂಗೀತಾ ಭಟ್‌, ದಿಢೀರನೇ ಆಸ್ಪತ್ರೆಗೆ ದಾಖಲು

ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ಜುಗಾರಿ ಕ್ರಾಸ್ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ

ಸಿನಿಮಾ ಸಕ್ಸಸ್ ಖುಷಿ ಮಧ್ಯೆ ದಿಢೀರ್ ಎಚ್ ಡಿ ದೇವೇಗೌಡರನ್ನು ಭೇಟಿಯಾದ ರಿಷಬ್

BBK12: ರಕ್ಷಿತಾಗೆ ಈಡಿಯಟ್ ಎಂದ ಅಶ್ವಿನಿ: ನಟ್ಟು ಬೋಲ್ಟ್ ಟೈಟ್ ಮಾಡಿ ಎಂದ ನೆಟ್ಟಿಗರು: video

ಮುಂದಿನ ಸುದ್ದಿ
Show comments