Select Your Language

Notifications

webdunia
webdunia
webdunia
webdunia

’ಕಿನಾರೆ’ಗೆ ಕಿಕ್ ಡ್ಯಾನ್ಸ್ ಶೋ ವಿಜೇತನ ಕೊರಿಯೋಗ್ರಫಿ

’ಕಿನಾರೆ’ಗೆ ಕಿಕ್ ಡ್ಯಾನ್ಸ್ ಶೋ ವಿಜೇತನ ಕೊರಿಯೋಗ್ರಫಿ
Bangalore , ಮಂಗಳವಾರ, 27 ಡಿಸೆಂಬರ್ 2016 (11:53 IST)
ನಿರ್ದೇಶಕ ದೇವರಾಜ್ ಪೂಜಾರಿ ಅವರು ನಿರ್ದೇಶಿಸುತಿರುವ `ಕಿನಾರೆ’ ಚಿತ್ರ ತಂಡದವು ಒಂದು ಪ್ರಮೋಷನ್ ಸಾಂಗ್ ಅನ್ನು ತಯಾರು ಮಾಡಿದೆ. ಅದು ಜನವರಿ 2017 ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಈ ವಿಶೇಷ ಹಾಡಿಗೆ ನೃತ್ಯ ಸಂಯೋಜನೆಯನ್ನು ಶಿವರಾಜ್ ಕುಮಾರ್ ನೇತೃತದಲ್ಲಿ ನಡೆದ ಕಿಕ್ ಡ್ಯಾನ್ಸ್ ರಿಯಾಲಿಟಿ ಶೋ ವಿಜೇತ ಭೂಷಣ್ ಮಾಡಿದ್ದಾರೆ.
 
ಈ ಹಾಡಿನಲ್ಲಿ ಮತ್ತೊಂದು ವಿಶೇಷವೂ ಇದೆ. ಅದೇನೆಂದರೆ, ಸುಮಾರು 50ರಿಂದ 60 ಪುಟ್ಟ ಮಕ್ಕಳು ಕೂಡ ಈ ಹಾಡಿನಲ್ಲಿ ಹೆಜ್ಜೆ ಹಾಕಿರುವುದು. ಈ ಹಾಡಿನ ಒಂದಷ್ಟು ತುಣುಕುಗಳನ್ನು 
ಬೆಂಗಳೂರು ನಗರದ ಕೆಆರ್ ಮಾರುಕಟ್ಟೆಯಲ್ಲಿ ಸೆರೆ ಹಿಡಿಯಲಾಗಿದೆ. 
 
ಇದರಲ್ಲಿ 60 ಪುಟ್ಟ ಮಕ್ಕಳನ್ನು ದೇವಲೋಕದಿಂದ ಇಳಿದು ಬಂದ ಬಾಲ ದೇವತೆಗಳಂತೆ ವಿಶೇಷವಾಗಿ ಚಿತ್ರಿಸಿದ್ದಾರೆ. ಒಂದೇ ಮಾತಲ್ಲಿ ಹೇಳುವುದಾದರೆ ಕಿನಾರೆ ಚಿತ್ರತಂಡ ಕನ್ನಡ ಇಂಥಾ ಹೊಸತನ ಮತ್ತು ಹೊಸ ಪ್ರಯೋಗಗಳ ಮೂಲಕ ಈಗಾಗಲೇ ಎಲ್ಲರ ಗಮನ ಸೆಳೆಯುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಧೂಳಿಪಾಳ ಶೋಭಿತಾ ಧುಮ್ಮುಕ್ಕುವ ಸೌಂದರ್ಯ ಅನಾವರಣ