Select Your Language

Notifications

webdunia
webdunia
webdunia
webdunia

ಧೂಳಿಪಾಳ ಶೋಭಿತಾ ಧುಮ್ಮುಕ್ಕುವ ಸೌಂದರ್ಯ ಅನಾವರಣ

ಧೂಳಿಪಾಳ ಶೋಭಿತಾ ಧುಮ್ಮುಕ್ಕುವ ಸೌಂದರ್ಯ ಅನಾವರಣ
Mumbai , ಮಂಗಳವಾರ, 27 ಡಿಸೆಂಬರ್ 2016 (11:43 IST)
ಈಕೆಯ ಹೆಸರು ಧೂಳಿಪಾಳ ಶೋಭಿತಾ! ಹೆಸರಿಗೆ ತಕ್ಕಂತೆ ಧೂಳೆಬ್ಬಿಸುವ ಸೌಂದರ್ಯ  ಈ ಚೆಲುವೆಯದು. ಎಷ್ಟೇ ಎಲೆಮರೆಯಕಾಯಿಗಳಂತೆ ಶೋಭಿತಾ ಕೂಡ ಹೆಚ್ಚಾಗಿ ಕಾಣಿಸಿಕೊಂಡವರಲ್ಲ. ಆದರೂ ಅವರ ಸೌಂದರ್ಯ ಎಲೆಮರೆಯ ಚಕ್ಕೋತಾದಂತೆ ಆಕರ್ಷಿಸುತ್ತಲೇ ಇತ್ತು. 
 
ಇಂತಹ ಅಪರೂಪದ ಚೆಲುವೆ ಇತ್ತೀಚೆಗೆ ಫೋಟೋಶೂಟ್ ಮಾಡಿಸಿಕೊಂಡು ಕೆಲವೊಂದು ಶೃಂಗಾರ ಭರಿತ ಚಿತ್ರಗಳನ್ನು ತೇಲಿಬಿಟ್ಟಿದ್ದಾರೆ. ಪಾಪ ಪಡ್ಡೆಗಳ ಪರಿಸ್ಥಿತಿ ಏನಾಗಬೇಡ. ಇದ್ದಕ್ಕಿದ್ದಂತೆ ಸುನಾಮಿ ಅಪ್ಪಳಿಸಿದಂತಾಗಿದೆ ಅವರ ಪರಿಸ್ಥಿತಿ.
 
ಮೈಮೇಲಿನ ಒಂದೊಂದೇ ಬಟ್ಟೆ ಕಳಚಿ ತೆಗೆದಿರುವಂತ ಫೋಟೋಶೂಟ್ ಅದು. ಕಪ್ಪು ಬಿಳುಪು ಅಂದದೊಂದಿಗೆ ರಸಿಕ ಹೃದಯಗಳಲ್ಲಿ ಚಂಡಮಾರುತ ಎಬ್ಬಿಸುವಂತಿದೆ. ಅಂದಹಾಗೆ ಈ ಹಿಂದೆ ಕಿಂಗ್ ಫಿಶರ್ ಕ್ಯಾಲೆಂಡರ್‌ನಲ್ಲೂ ತಮ್ಮ ಸೌಂದರ್ಯವನ್ನು ಅನಾವರಣ ಮಾಡಿದ್ದರು. 
 
ಇಷ್ಟೆಲ್ಲಾ ಸೌಂದರ್ಯವನ್ನು ಬಚ್ಚಿಟ್ಟುಕೊಂಡಿದ್ದರೂ, ಸಿನಿಮಾಗಳಲ್ಲಿ ಮಾತ್ರ ಈ ಬೆಡಗಿಗೆ ನಿರೀಕ್ಷೆಯಂತೆ ಅವಕಾಶಗಳು ಬರುತ್ತಿಲ್ಲ. ಸದ್ಯಕ್ಕೆ ಟಾಲಿವುಡ್‌ನ ಒಂದು ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ ಶೋಭಿತಾ. ಈ ಬೆಡಗಿ ಬೆಳ್ಳಿಪರದೆ ಮೇಲೂ ಶೋಭಿಸಲಿ ಅಲ್ವಾ? 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪಿಂಕ್ ಬಿಕಿನಿ ತೊಟ್ಟ ಜಾಕ್ವೆಲಿನ್ ಜೊತೆಗಿರೋದು ಯಾರು?