Select Your Language

Notifications

webdunia
webdunia
webdunia
webdunia

ಪಿಂಕ್ ಬಿಕಿನಿ ತೊಟ್ಟ ಜಾಕ್ವೆಲಿನ್ ಜೊತೆಗಿರೋದು ಯಾರು?

ಪಿಂಕ್ ಬಿಕಿನಿ ತೊಟ್ಟ ಜಾಕ್ವೆಲಿನ್ ಜೊತೆಗಿರೋದು ಯಾರು?
Mumbai , ಮಂಗಳವಾರ, 27 ಡಿಸೆಂಬರ್ 2016 (11:11 IST)
ಸಾಮಾನ್ಯವಾಗಿ ಬಿಕಿನಿ ತೊಟ್ಟ ಹುಡುಗಿ ಜೊತೆ ಬಾಯ್‍ಫ್ರೆಂಡ್ ಅಥವಾ ಲವರ್ ಜೊತೆಗಿರುವುದನ್ನು ನೊಡಿರುತ್ತೀವೆ. ಆದರೆ ಶ್ರೀಲಂಕಾ ಸುಂದರಿ ಜಾಕ್ವೆಲಿನ್ ಫರ್ನಾಂಡೀಸ್ ಬಿಕಿನಿ ತೊಟ್ಟು ಸಹೋದರನ ಜೊತೆ ಪೋಸ್ ಕೊಟ್ಟಿದ್ದಾರೆ. ಈ ಮೂಲಕ ಕುಟುಂಬದ ಜೊತೆ ಕ್ರಿಸ್ಮಸ್ ಸೆಲೆಬ್ರೇಟಿ ಮಾಡಿಕೊಂಡಿದ್ದಾರೆ.  
 
ಜಾಕ್ವೆಲಿನ್ ತಮ್ಮ ರಿಯಾನ್ ಜೊತೆ ಬಿಕಿನಿಯಲ್ಲಿ ತೆಗೆಸಿಕೊಂಡಿರುವ ಫೋಟೋ ಈಗ ವೈರಲ್ ಆಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಜಾಕ್ವೆಲಿನ್ ಫೋಟೋಗೆ ಅತ್ಯಧಿಕ ಹಿಟ್ಸ್ ಬರುತ್ತಿವೆ. ಈ ಫೋಟೋಗೆ ಜಾಕ್ವೆಲಿನ್ ಒಂದು ಅಡಿಬರಹವನ್ನೂ ಕೊಟ್ಟಿದ್ದಾರೆ.."ನನ್ನ ಜೀವನದ ಅತ್ಯಂತ ಪ್ರೀತಿಪಾತ್ರದ ತಮ್ಮ ಇವನು. ನಮ್ಮಿಬ್ಬರ ವಯಸ್ಸಿನ ಅಂತರ 14 ತಿಂಗಳು. ಆದರೂ ನಾವಿಬ್ರೂ ಅವಳಿಜವಳಿ ಇದ್ದಂಗೆ!! ಅವನು ನನ್ನ ಜೊತೆಗಿರುವುದರಿಂದ ಮರೆಯಲಾಗದ ಕ್ರಿಸ್ಮಸ್ ಇದು" ಎಂದಿದ್ದಾರೆ. 
 
ಈಜುಕೊಳದಲ್ಲಿ ಸಹೋದರನ ಜೊತೆಗೆ ಫೋಟೋ ತೆಗೆಸಿಕೊಂಡಿರುವ ಜಾಕ್ವೆಲಿನ್ ತುಂಬಾ ಖುಷಿಯಾಗಿ ಕಾಣುತ್ತಿದ್ದಾರೆ. ಪಿಂಕ್ ಬಿಕಿನಿ ತೊಟ್ಟಿರುವ ಜಾಕ್ವೆಲಿನ್ ತಮ್ಮ ಸೌಂದರ್ಯವನ್ನೂ ಹೊರಹಾಕಿರುವುದು ಕುತೂಹಲ ಮೂಡಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಚಲನ ಚಿತ್ರ ಲೋಕಕ್ಕೆ ಈಗ ಮತ್ತೆ ಚೈತ್ರಕಾಲ