Webdunia - Bharat's app for daily news and videos

Install App

ಗುಂಡನ ಕಥೆ ಮೆಚ್ಚಿದ ಅಭಿನಯ ಚಕ್ರವರ್ತಿ!

Webdunia
ಮಂಗಳವಾರ, 28 ಜನವರಿ 2020 (12:29 IST)
ನಾನು ಮತ್ತು ಗುಂಡ, ಸ್ಯಾಂಡಲ್ ವುಡ್‌ನಲ್ಲಿ‌ ಪ್ರಾಣಿ‌ ಮತ್ತು ಮನುಷ್ಯ ನಡುವಿನ ಸಂಬಂಧ ಎಂತದ್ದು ಅನ್ನೋದನ್ನ ತುಂಬಾ ಅಚ್ಚು ಕಟ್ಟಾಗಿ‌‌ ಕೊಟ್ಟಿರೋ ಸಿನಿಮಾವಿದು. ಕಾಮಿಡಿ‌ ಕಿಲಾಡಿ ಖ್ಯಾತಿಯ ಶಿವರಾಜ್ ಕೆಆರ್ ಪೇಟೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರೋ ಚಿತ್ರ. ಈಗಾಗ್ಲೇ ಥಿಯೇಟರ್ ನಲ್ಲಿ ಕಮಾಲ್ ಮಾಡ್ತಿರೋ ಗುಂಡನ ಕಥೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಒಳ್ಳೆ ಕಥೆ, ಸೂಪರ್ ಸಿನಿಮಾ ಅಂತೆಲ್ಲಾ ಚಿತ್ರಕ್ಕೆ ರೆಸ್ಪಾನ್ಸ್ ಸಿಕ್ತಿದೆ.
ಕಳೆದ ಶುಕ್ರವಾರವಷ್ಟೇ ರಿಲೀಸ್ ಆಗಿರೋ ಸಿನಿಮಾಕ್ಕೆ ರಾಜ್ಯಾದ್ಯಂತ ಪ್ರಶಂಸೆ‌ ದೊರೆಯುತ್ತಿದೆ. ಈ ನೈಜ ಘಟನೆಯಾಧಾರಿತ ಗುಂಡನ ಕಥೆಗೆ ಸುದೀಪ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಬಗ್ಗೆ ಉತ್ತಮ‌ ಮಾತು ಕೇಳಿ ಬರ್ತಿದೆ. ಸಿನಿಮಾ ತಂಡಕ್ಕೆ ಶುಭವಾಗಲಿ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ನಾನು ಮತ್ತು ಗುಂಡನ ಚಿತ್ರದ ಬೆಂಬಲಕ್ಕೆ ನಿಂತಿದ್ದಾರೆ ಅಭಿನಯ ಚಕ್ರವರ್ತಿ.
 
ಇನ್ನು, ಶಿವರಾಜ್ ಕೆ ಆರ್ ಪೇಟೆ ಜೊತೆ ಗೋವಿಂದೇಗೌಡ, ಸಂಯುಕ್ತ ಹೊರನಾಡು, ಸಿಂಬಾ ಅನ್ನೋ ನಾಯಿ ಅದ್ಭುತವಾಗಿ‌ ನಟಿಸಿದ್ದಾರೆ. ಚಿತ್ರಕ್ಕೆ ರಘು ಹಾಸನ್ ನಿರ್ದೇಶನ‌ ಮಾಡಿದ್ದು, ಶ್ರೀನಿವಾಸ್ ತಿಮ್ಮಯ್ಯ ಬಂಡವಾ ಹೂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸ್ನೇಹಿತನ ಮೊಬೈಲ್‌ನಿಂದ ನಟಿ ರಮ್ಯಾಗೆ ಅಶ್ಲೀಲ ಸಂದೇಶ: ಪೊಲೀಸರ ಅತಿಥಿಯಾದ ಕೆ.ಆರ್.ಪುರದ ಯುವಕ

ರಾತ್ರೋರಾತ್ರಿ ವಿಷ್ಣು ಸ್ಮಾರಕ ನೆಲಸಮ, ಹಬ್ಬದ ದಿನವೇ ಕಣ್ಣೀರು ಹಾಕುತ್ತಿರುವ ವಿಷ್ಣುವರ್ಧನ್ ಫ್ಯಾನ್ಸ್‌

ಪಾರ್ಕಿಂಗ್ ವಿಷಯಕ್ಕೆ ಕಿರಿಕ್, ಪ್ರಾಣ ಕಳೆದುಕೊಂಡ ಖ್ಯಾತ ನಟಿ ಹುಮಾ ಖುರೇಷಿ ಸಹೋದರ

ಕಾಂತಾರ ಚಾಪ್ಟರ್‌ 1ರಲ್ಲಿ ರಿಷಭ್‌ ಶೆಟ್ಟಿಗೆ ಜೋಡಿಯಾಗಿ ರುಕ್ಮಿಣಿ: ಅಕ್ಟೋಬರ್‌ 2ರಂದು ಸಿನಿಮಾ ತೆರೆಗೆ

ಮಡೆನೂರು ಮನು ವಿರುದ್ಧದ ರೇಪ್‌ ಕೇಸ್‌ನಲ್ಲಿ ನಡೆ ಬದಲಾಯಿಸಿದ ಸಂತ್ರಸ್ತ ನಟಿ

ಮುಂದಿನ ಸುದ್ದಿ
Show comments