Webdunia - Bharat's app for daily news and videos

Install App

ಕೊನೆಗೂ ಅನೂಪ್ ಬಂಡಾರಿಗೆ ಓಕೆ ಅಂದ ಕಿಚ್ಚ ಸುದೀಪ್

Webdunia
ಬುಧವಾರ, 19 ಡಿಸೆಂಬರ್ 2018 (10:18 IST)
ಬೆಂಗಳೂರು: ಅನೂಪ್ ಬಂಡಾರಿ ಕನ್ನಡ ಚಿತ್ರರಂಗದ ಪ್ರತಿಭಾವಂತ ಯುವ ನಿರ್ದೇಶಕರಲ್ಲೊಬ್ಬರು. ಇವರ ರಂಗಿತರಂಗ, ರಾಜರಥ ಸಿನಿಮಾ ಹಿಟ್ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ.


ಇದುವರೆಗೆ ಹೊಸಬರನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದ ಅನೂಪ್ ಬಂಡಾರಿಗೆ ಈಗ ಜಾಕ್ ಪಾಟ್ ಹೊಡೆದಿದೆ. ಕೆಲವು ವರ್ಷಗಳ ಹಿಂದೆ ಸುದೀಪ್ ಬಳಿ ನಿಮ್ಮ ಜತೆ ಸಿನಿಮಾ ಮಾಡಬೇಕು ಎಂದು ಅನೂಪ್ ಕನಸು ಹೇಳಿಕೊಂಡಿದ್ದರಂತೆ. ಅದಕ್ಕೆ ಸುದೀಪ್ ಒಳ್ಳೆ ಕತೆ ಇಟ್ಟುಕೊಂಡು ಬನ್ನಿ ಎಂದಿದ್ದರಂತೆ.

ಆ ಕನಸು ಇದೀಗ ನಿಜವಾಗುತ್ತಿದೆ. ಅನೂಪ್ ಬಂಡಾರಿ ಮತ್ತು ಸುದೀಪ್ ನಿರ್ಮಾಣ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇಬ್ಬರೂ ಸೇರಿ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾಳೆ ಪ್ರಕಟಿಸುವುದಾಗಿ ಸ್ವತಃ ಸುದೀಪ್ ಹೇಳಿದ್ದಾರೆ.

ಇನ್ನೊಂದ ಮೂಲಗಳ ಪ್ರಕಾರ ಇದು ಅನೂಪ್ ಹಲವು ವರ್ಷಗಳ ಹಿಂದೆ ರೆಡಿ ಮಾಡಿದ್ದ ಕತೆ. ಅದಕ್ಕೆ ಈಗ ಬಣ್ಣ ಹಚ್ಚಿ ಸುದೀಪ್ ಎದುರು ಇಟ್ಟಿದ್ದಾರೆ. ಇದೊಂದು ಆಕ್ಷನ್, ಅಡ್ವೆಂಚರ್ ಸಿನಿಮಾವಾಗಲಿದೆ. ಒಟ್ಟಾರೆ ಸಂಕ್ರಾಂತಿ ವೇಳೆ ಈ ಚಿತ್ರ ಸೆಟ್ಟೇರುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಸುದೀಪ್ ಖರೀದಿಸಿದ ಜಾಗದಲ್ಲಿ ವಿಷ್ಣು ಅಭಿಮಾನ ಸ್ಮಾರಕ ನಿರ್ಮಾಣಕ್ಕೆ ಚಾಲನೆ

ಮುಂದೂಡಿದ್ದ ಶಿವಣ್ಣ, ಉಪೇಂದ್ರ, ರಾಜ್‌ ಬಿಶೆಟ್ಟಿ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್‌

ಸುಳ್ಳು ಸಾವಿನ ವದಂತಿ: ಸತ್ಯ ಹೇಳಿ ನನ್ನ ಬಾಯಿ ಒಣಗಿತು ಎಂದಾ ನಟ ರಜಾ ಮುರಾದ್‌

ಕನ್ನಡದ ಖ್ಯಾತ ನಿರೂಪಕಿ ಮದುವೆ ಡೇಟ್ ಫಿಕ್ಸ್‌, ಮದುವೆ ಎಲ್ಲಿ ಗೊತ್ತಾ

ನನ್ನ ಹೋರಾಟ ಮಹಿಳೆಯ ಮೇಲೆ ನಡೆದ ದೌರ್ಜನ್ಯದ ವಿರುದ್ಧ: ನಟಿ ರಿನಿ ಜಾರ್ಜ್‌

ಮುಂದಿನ ಸುದ್ದಿ
Show comments