Publish Date: Wed, 26 Apr 2023 (06:40 IST)
Updated Date: Wed, 26 Apr 2023 (06:50 IST)
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಮೇಲಿನ ಅಭಿಮಾನದಿಂದ ಕಿಚ್ಚ ಸುದೀಪ್ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.
ಸಿಎಂ ಬೊಮ್ಮಾಯಿ ನಾಮಪತ್ರ ಸಲ್ಲಿಸುವ ದಿನ ಅವರ ಜೊತೆಗಿದ್ದು ಶಿಗ್ಗಾಂವಿಯಲ್ಲಿ ಪ್ರಚಾರ ನಡೆಸಿದ್ದ ಸುದೀಪ್ ಬಳಿಕ ಇಂದಿನಿಂದ ಎರಡನೇ ಹಂತದ ಪ್ರಚಾರ ನಡೆಸಲಿದ್ದಾರೆ.
ಇಂದಿನಿಂದ ಏಪ್ರಿಲ್ 28 ರವರೆಗೆ ಸುದೀಪ್ ಪ್ರಚಾರ ನಡೆಸಲಿದ್ದಾರೆ. ಇಂದು ಚಿತ್ರದುರ್ಗ, ಬಳ್ಳಾರಿ, ದಾವಣಗೆರೆಯಲ್ಲಿ, ಏಪ್ರಿಲ್ 27 ಮತ್ತು 28 ರಂದು ಹುಬ್ಬಳ್ಳಿ, ಗದಗ, ತಮ್ಮ ತವರು ಶಿವಮೊಗ್ಗದಲ್ಲಿ ಬಿಜೆಪಿ ಪರ ಕಿಚ್ಚ ಮತ ಯಾಚನೆ ಮಾಡಲಿದ್ದಾರೆ.