Publish Date: Thu, 20 Jun 2019 (08:46 IST)
Updated Date: Thu, 20 Jun 2019 (08:48 IST)
ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಸೂರಿ ಜತೆಯಾಗಿ ಸಿನಿಮಾ ಮಾಡ್ತಾರೆ ಎಂಬ ಸುದ್ದಿ ಹಲವು ದಿನಗಳಿಂದ ಓಡಾಡುತ್ತಲೇ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.
ನಿರ್ಮಾಪಕ ಶ್ರೀಕಾಂತ್ ಈ ವಿಚಾರವನ್ನು ಕನ್ ಫರ್ಮ್ ಮಾಡಿದ್ದಾರೆ. ಸೂರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ಸಿನಿಮಾ ಮಾಡುವುದು ಪಕ್ಕಾ ಆಗಿದೆ.
ಇಬ್ಬರೂ ಈಗ ತಮ್ಮದೇ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದೆಲ್ಲವೂ ಮುಗಿದ ಬಳಿಕ ಇಬ್ಬರೂ ಹೊಸ ಸಿನಿಮಾದ ಡಿಸ್ಕಷನ್ ಮಾಡಲಿದ್ದಾರೆ ಎಂದು ಶ್ರೀಕಾಂತ್ ಹೇಳಿದ್ದಾರೆ. ಬಳಿಕವಷ್ಟೇ ಹೆಚ್ಚಿನ ಡೀಟೈಲ್ಸ್ ತಿಳಿದುಬರಲಿದೆ.