ದುನಿಯಾ ವಿಜಿ ಜೊತೆ ಸ್ಟಾರ್ ವಾರ್ ನೋ ಚಾನ್ಸ್ ಎಂದ ಕಿಚ್ಚ ಸುದೀಪ್

Webdunia
ಮಂಗಳವಾರ, 12 ಅಕ್ಟೋಬರ್ 2021 (09:35 IST)
ಬೆಂಗಳೂರು: ಸಲಗ ಮತ್ತು ಕೋಟಿಗೊಬ್ಬ 3 ಸಿನಿಮಾ ಒಂದೇ ದಿನ ಬಿಡುಗಡೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಕೆಲವು ಕಿಡಿಗೇಡಿಗಳು ಇಬ್ಬರು ಸ್ಟಾರ್ ಗಳ ಮಧ್ಯೆ ತಂದಿಡುವ ಪ್ರಯತ್ನ ನಡೆಸಿದ್ದಾರೆ.


ಕಿಚ್ಚ ಸುದೀಪ್, ದುನಿಯಾ ವಿಜಯ್ ಅವರ ಸಲಗ ಸಿನಿಮಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಯಾರೋ ಸುದ್ದಿಹಬ್ಬಿಸಿದ್ದರು. ಇಂತಹ ವದಂತಿಗಳಿಗೆ ಸುದೀಪ್ ಕೋಟಿಗೊಬ್ಬ 3 ಪತ್ರಿಕಾಗೋಷ್ಠಿಯಲ್ಲಿ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

‘ಸಲಗ ಸಿನಿಮಾಗೆ ಕ್ಲ್ಯಾಪ್ ಮಾಡಿದ್ದವನು ನಾನು. ಈಗ ಆ ಸಿನಿಮಾಗೆ ಕೆಟ್ಟದಾಗಲಿ ಎಂದು ಹೇಗೆ ಬಯಸಲಿ? ಚಿತ್ರರಂಗದಲ್ಲಿರುವವರೆಲ್ಲಾ ಅಣ್ಣ ತಮ್ಮಂದಿರಂತೆ. ಕೊವಿಡ್ ಕಾಲದಲ್ಲಿ ಎಲ್ಲರಿಗೂ ಕಷ್ಟವಾಗಿತ್ತು. ಈಗ ಸರಿ ಹೋಗುತ್ತದೆ ಎನ್ನುವಾಗ ಬೇರೊಬ್ಬರ ಕುರಿತಾಗಿ ಕೆಟ್ಟ ಮಾತನಾಡುವ ಪುರುಸೊತ್ತು ಯಾರಿಗೂ ಇಲ್ಲ. ಚಿತ್ರರಂಗ ಎಂದರೆ ಒಂದು ರೋಡ್ ನಂತೆ. ಇಲ್ಲಿ ಎಲ್ಲಾ ರೀತಿಯ ಕಾರ್ ಗಳು, ಸೈಕಲ್ ಗಳು ಓಡಾಡುತ್ತವೆ. ಹಾಗಂತ ರಸ್ತೆ ಯಾರೋ ಒಬ್ಬರ ಸೊತ್ತಲ್ಲ. ಇಲ್ಲಿ ಎಲ್ಲರೂ ಒಂದೇ’ ಎಂದು ಸುದೀಪ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕರೂರ್ ಕಾಲ್ತುಳಿತ ಪ್ರಕರಣ: ಸಂತ್ರಸ್ತ ಕುಟುಂಬದ ಜತೆ ಮಾತನಾಡಿದ ವಿಜಯ್ ದಳಪತಿ

ಭಾರೀ ಮೆಚ್ಚುಗೆಯ ನಡುವೆ ರಿಷಬ್ ಶೆಟ್ಟಿಗೆ ಬಂತು ಬೆಂಗಳೂರು ತುಳುಕೂಟದಿಂದ ಪತ್ರ

ನಟಿಗೆ ಲೈಂಗಿಕ ಕಿರುಕುಳ, ವಂಚನೆ ಪ್ರಕರಣ: ನಿರ್ದೇಶಕ ಹೇಮಂತ್ ಕುಮಾರ್ ಅರೆಸ್ಟ್‌

ಕಾಂತಾರ ಸಿನಿಮಾ ಬಗ್ಗೆ ರಿಷಬ್ ಶೆಟ್ಟಿಗೆ ಪ್ರಕಾಶ್ ರಾಜ್‌ರಿಂದ ಬಂದು ಮೆಸೇಜ್‌

ನಟನೆಗೆ ಬ್ರೇಕ್ ನೀಡಿ ಸ್ನೇಹಿತರ ಜತೆ ಆಧ್ಯಾತ್ಮಿಕ ಪಯಣ ಬೆಳೆಸಿದ ರಜನಿಕಾಂತ್‌

ಮುಂದಿನ ಸುದ್ದಿ
Show comments