ಬೆಂಗಳೂರು: ಹುಟ್ಟುಹಬ್ಬ ದಿನ ನಂದಿ ಲಿಂಕ್ ಗ್ರೌಂಡ್ ನಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಕಿಚ್ಚ ಸುದೀಪ್ ಯಾವ ಕಿತ್ತೋದ ನನ್ಮಕ್ಳಿಗೂ ತಲೆಕೆಡಿಸಿಕೊಳ್ಬೇಡಿ ಎಂದಿರುವ ವಿಡಿಯೋ ಈಗ ವೈರಲ್ ಆಗಿದೆ. ಅಷ್ಟಕ್ಕೂ ಕಿಚ್ಚ ಕೌಂಟರ್ ಕೊಟ್ಟಿದ್ದು ಯಾರಿಗೆ?
ನಂದಿ ಲಿಂಕ್ ಗ್ರೌಂಡ್ ನಲ್ಲಿ ನಿನ್ನೆ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಕಿಚ್ಚ ಸುದೀಪ್ ಎರಡು ವಿಚಾರಗಳನ್ನು ಹೇಳಿದರು. ನಾನು ಎರಡು ವಿಚಾರಗಳನ್ನು ಹೇಳಬೇಕಿದೆ. ನೀವು ಮಾಡ್ತೀರಾ ಎಂದು ಕೇಳಿದರು. ಇದಕ್ಕೆ ಅಭಿಮಾನಿಗಳೂ ಒಪ್ಪಿಗೆ ಸೂಚಿಸಿದರು.
ಮೊದಲನೆಯದಾಗಿ ಎಲ್ಲರೂ ಸೇಫ್ ಆಗಿ ಮನೆಗೆ ಹೋಗಿ ಸೇರಿಕೊಳ್ಳಿ ಎನ್ನುವುದೇ ನನ್ನ ವಿನಂತಿ ಎಂದರು. ಎಲ್ಲರೂ ಪ್ರೀತಿಯಿಂದ ಬರ್ತೀರಾ ಆದರೆ ಏನಾದರೂ ಹೆಚ್ಚು ಕಮ್ಮಿಯಾದ್ರೆ ನನಗೆ ನೋವಾಗುತ್ತದೆ ಎಂದರು.
ಎರಡನೆಯದಾಗಿ ನೀವೆಲ್ಲಾ ನನ್ನ ತುಂಬಾ ಪ್ರೀತಿಸುತ್ತೀರಾ ಎಂದು ನನಗೆ ಗೊತ್ತು. ಆನ್ ಲೈನ್ ನಲ್ಲಿ ಯಾರಿಂದ, ಯಾವುದೇ ಪೇಜ್ ನಿಂದ ನನಗೆ ಎಷ್ಟೇ ಕೆಟ್ಟದಾಗಿ ಬೈದರೂ ನೀವು ರಿಯಾಕ್ಟ್ ಮಾಡಬೇಡಿ. ಹಾಗೆ ನಮ್ಮ ಫ್ಯಾನ್ ಪೇಜ್ ನಿಂದ ಯಾವ ಕಲಾವಿದರಿಗೂ ಅವಮಾನ ಮಾಡಬೇಡಿ. ನೀವು ಪ್ರೀತಿಸುವ ಈ ಕಿಚ್ಚ ಯಾವ ಅವಮಾನ ಎದುರಿಸೋಕೂ ಸಿದ್ಧನಾಗಿದ್ದೇನೆ. ಬೆಳಿಗ್ಗೆ ಹೊತ್ತು ಫೋನ್ ತೆಗೆದುಕೊಂಡು ಏನಾದ್ರೂ ಮಾಡಬೇಕು ಎಂದರೆ ಎರಡು ಒಳ್ಳೆ ಕೆಲಸ ಮಾಡಿ. ಯಾವ, ಯಾವನೋ ಕಿತ್ತೋದ ನನ್ಮಕ್ಳಿಗೆ ತಲೆಕೆಡಿಸ್ಕೊಳ್ಬೇಡಿ. ಒಂದು ವಿಚಾರ ನೆನಪಿಡಿ, ನೀವು ಏನು ಮಾಡ್ತೀರೋ ಅದನ್ನೇ ನಿಮ್ಮ ಮನೆಯವರೂ ಮಾಡೋದು. ಯಾರೂ ಯಾವುದಕ್ಕೂ ರಿಯಾಕ್ಟ್ ಮಾಡಬೇಡಿ ಎಂದು ಸುದೀಪ್ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಹೆಸರಿನಲ್ಲಿ ನಡೆಯುತ್ತಿರುವ ಸ್ಟಾರ್ ವಾರ್ ಗಳ ನಿಟ್ಟಿನಲ್ಲಿ ಸುದೀಪ್ ಈ ರೀತಿ ಖಡಕ್ ಮಾತನಾಡಿದ್ದಾರೆ.