Publish Date: Sun, 22 Sep 2019 (09:14 IST)
Updated Date: Sun, 22 Sep 2019 (09:16 IST)
ಬೆಂಗಳೂರು: ಪೈರಸಿ ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಿಚ್ಚ ಸುದೀಪ್ ಮಾಡಿರುವ ಟ್ವೀಟ್ ನಲ್ಲಿ ಅವರು ಬಳಸಿದ ಶಬ್ಧವೊಂದು ಈಗ ಕೆಲವರ ಆಕ್ಷೇಪಕ್ಕೆ ಗುರಿಯಾಗಿದೆ.
ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ ಎಂದು ಕಿಚ್ಚ ಸುದೀಪ್ ಬರೆದಿರುವುದನ್ನೇ ಕೆಲವರು ಇದು ಮಹಿಳೆಯರಿಗೆ ಮಾಡಿದ ಅಪಮಾನ ಎಂದು ತಿರುಚಿದ್ದಾರೆ.
ಸಿಟ್ಟಲ್ಲಿ ಏನೇನೋ ಬರೆದು ಆಭಾಸ ಮಾಡಬೇಡಿ. ಕೈಗೆ ಬಳೆ ಹಾಕುವ ಮಹಿಳೆಯರು ಅಶಕ್ತರು ಎಂದು ನಿಮ್ಮ ಮಾತಿನಲ್ಲೇ ಪರೋಕ್ಷ ಟೀಕೆ ಮಾಡಿದ್ದೀರಿ. ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಶಕ್ತರು ಎಂಬುದನ್ನು ಮರೆಯಬೇಡಿ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.