ತೀರಿಕೊಂಡ ನಟ, ಸಹ ಆಟಗಾರನಿಗಾಗಿ ಕಿಚ್ಚ ಸುದೀಪ್ ಮಾಡಿದ್ದೇನು?

Webdunia
ಬುಧವಾರ, 27 ಡಿಸೆಂಬರ್ 2017 (08:46 IST)
ಬೆಂಗಳೂರು: ಕಿಚ್ಚ ಸುದೀಪ್ ಎಂದರೆ ಹಾಗೆಯೇ. ಅವರು ತಮ್ಮ ನೆಚ್ಚಿನವರಿಗಾಗಿ ತಮ್ಮ ಕೈಲಾದಷ್ಟು ಸಹಾಯ ಮಾಡಿಯೇ ಮಾಡುತ್ತಾರೆ. ಇದೀಗ ಈ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದ ನಟ ಧ್ರುವ ಶರ್ಮಾ ವಿಚಾರದಲ್ಲೂ ಅದನ್ನೇ ಮಾಡಿ ತೋರಿಸಿದ್ದಾರೆ.
 

ಧ್ರುವ ಶರ್ಮಾ ನಟನಷ್ಟೇ ಅಲ್ಲದೆ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದ ಆಟಗಾರನಾಗಿದ್ದರು. ಆದರೆ ಅವರು ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಕೆಲವು ತಿಂಗಳುಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದೀಗ ತಮ್ಮ ತಂಡದ ಆಟಗಾರನ ಸ್ಮರಣಾರ್ಥ ಕಿಚ್ಚು ಸುದೀಪ್ ಮತ್ತು ತಂಡದವರು ಮೊನ್ನೆ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಎಲ್ಲರೂ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಧ್ರುವ ಶರ್ಮಾ ಫೋಟೋವನ್ನು ಎದೆ ಮೇಲೆ ಅಂಟಿಸಿಕೊಂಡು ಅಗಲಿದ ನಟನಿಗೆ, ಸಿಸಿಎಲ್ ನ ಅದ್ಭುತ ಆಟಗಾರನಿಗೆ ಕಿಚ್ಚ ಸುದೀಪ್ ಮತ್ತು ಬಳಗ  ಅದ್ಭುತವಾಗಿ ಕೊಡುಗೆ ನೀಡಿದ್ದಾರೆ.

ಸುದೀಪ್ ಮತ್ತು ತಂಡದವರ ಈ ಕೆಲಸ ಬೇರೆ ತಂಡಗಳ ಮೆಚ್ಚುಗೆಗೂ ಪಾತ್ರವಾಗಿದೆ. ತಮಿಳು ಸಿನಿಮಾ ಕಲಾವಿದ ತಂಡದ ವಿಶಾಲ್ ವಿಷ್ಣು ಸುದೀಪ್ ರ ಈ ಕಾರ್ಯವನ್ನು ಮೆಚ್ಚಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಮಂತಾ ರುತ್ ಪ್ರಭು ಕೈಹಿಡಿದ ರಾಜ್ ನಿಡಿಮೋರು ಬಗ್ಗೆ ತಿಳಿದಿರದ ಇನ್ನಷ್ಟು ಮಾಹಿತಿ

ಸಮಂತಾ ಜತೆಗೆ ಮದುವೆ ಬೆನ್ನಲ್ಲೇ ರಾಜ್ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ಮದುವೆ ದಿನ ಸಮಂತಾ ಪತಿ ರಾಜ್ ನಿಡಿಮೋರು ಬಗ್ಗೆ ಈ ವಿಚಾರ ಹೆಚ್ಚು ಹುಡುಕಾಟ

ದರ್ಶನ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಚಾಲೆಂಜಿಂಗ್‌ ಸ್ಟಾರ್‌ ಧ್ವನಿಯಲ್ಲೇ ಡೆವಿಲ್ ಟ್ರೇಲರ್ ದಿನಾಂಕ ರಿವಿಲ್‌

ನಿರ್ದೇಶಕ ರಾಜ್ ನಿಡಮೋರು ಜೊತೆ ಸದ್ದಿಲ್ಲದೇ ಮದುವೆಯಾದ ಸಮಂತಾ

ಮುಂದಿನ ಸುದ್ದಿ
Show comments