Webdunia - Bharat's app for daily news and videos

Install App

ದರ್ಶನ್, ಯಶ್ ಜತೆ ಹುಳಿಹಿಂಡಲು ಯತ್ನಿಸಿದಾತನಿಗೆ ಸುದೀಪ್ ಉತ್ತರವೇನು ಗೊತ್ತಾ?

Webdunia
ಮಂಗಳವಾರ, 22 ಆಗಸ್ಟ್ 2017 (09:39 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಗಳ ಮಧ್ಯೆ ವಾರ್ ತಂದಿಡುವ ಕೆಲಸ ಈ ಹಿಂದೆಯೂ ಹಲವು ಬಾರಿ ನಡೆದಿದೆ. ಆದರೆ ಈ ಬಾರಿ ಹಾಗೆ ಮಾಡಲು ಹೊರಟ ಅಭಿಮಾನಿಗೆ ಕಿಚ್ಚ ಸುದೀಪ್ ಸರಿಯಾಗಿಯೇ ಉತ್ತರ ಕೊಟ್ಟಿದ್ದಾರೆ.

 
ಇದೆಲ್ಲಾ ನಡೆದಿರುವುದು ಟ್ವಿಟರ್ ಸಂಭಾಷಣೆಯಲ್ಲಿ. ದರ್ಶನ್ ಮತ್ತು ಸುದೀಪ್ ಸ್ನೇಹಿತರಲ್ಲ ಎಂದು ಮೊದಲೇ  ಘೋಷಣೆ ಮಾಡಿಕೊಂಡಿದ್ದರು. ಇದನ್ನೇ ಇಟ್ಟುಕೊಂಡು ಕಿಡಿಗೇಡಿಯೊಬ್ಬ ಯಶ್ ಮತ್ತು ದರ್ಶನ್ ಮುಂದೆ ನೀವೇನೂ ಅಲ್ಲ ಎಂದು ಸಂದೇಶ ಕಳುಹಿಸಿದ್ದ.

‘ಬಾಸ್ ಅಂದ್ರೆ ಇಬ್ರೇ. ಅದು ಡಿ ಬಾಸ್ ಮತ್ತು ಯಶ್ ಬಾಸ್. ತುಕಾಲಿ ಸುದೀಪ್ ಬಾಸ್ ಅಲ್ಲ’ ಎಂದು ಪ್ರತಾಪ್ ಎಂಬಾತ ಸಂದೇಶ ಬರೆದಿದ್ದ. ಆದರೆ ಇದಕ್ಕೆ ಆಂಗ್ರಿ ಯಂಗ್ ಮ್ಯಾನ್ ಆಗಿ ಉತ್ತರಿಸುವ ಬದಲು ಮುಕುಂದ ಮುರಾರಿ ಸ್ಟೈಲ್ ನಲ್ಲಿ ಕೂಲ್ ಆಗಿ ಸುದೀಪ್ ಏಟು ಕೊಟ್ಟಿದ್ದಾರೆ.

‘ನೀವು ನನ್ನನ್ನು ಧ್ವೇಷಿಸುವ ಪರಿಯೇ ನನಗಿಷ್ಟವಾಯಿತು. ಇನ್ನೂ ಹೆಚ್ಚು ಸಾಧನೆ ಮಾಡಲು ನನಗೆ ಸ್ಪೂರ್ತಿಯಾಗುತ್ತದೆ’ ಎಂದು ಸುದೀಪ್ ಉತ್ತರಿಸಿದ್ದಾರೆ. ಆದರೆ  ಸುದೀಪ್ ಅಭಿಮಾನಿಗಳು ಮಾತ್ರ ಕಿಚ್ಚ ಬರೀ ಬಾಸ್ ಅಲ್ಲ, ಬಾಸ್ ಗಳಿಗೇ ಬಿಗ್ ಬಾಸ್ ಎಂದು ಆತನಿಗೆ ಸರಿಯಾಗಿ ಜಾಡಿಸಿದ್ದಾರೆ.

ಇದನ್ನೂ ಓದಿ.. ‘ಇಂದಿರಾ ಕ್ಯಾಂಟೀನ್ ಊಟಕ್ಕೆ ಬಿಜೆಪಿಯವರು ಜಿರಲೆ ಹಾಕಿಯಾರು’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments