Select Your Language

Notifications

webdunia
webdunia
webdunia
webdunia

ಐಎಂಡಿಬಿ ಪಟ್ಟಿಯಲ್ಲಿ ಝೀರೋ ಸಿನಿಮಾವನ್ನು ಹಿಂದಿಕ್ಕಿದ ಕೆಜಿಎಫ್ ಸಿನಿಮಾ

ಐಎಂಡಿಬಿ ಪಟ್ಟಿಯಲ್ಲಿ ಝೀರೋ  ಸಿನಿಮಾವನ್ನು ಹಿಂದಿಕ್ಕಿದ ಕೆಜಿಎಫ್ ಸಿನಿಮಾ
ಬೆಂಗಳೂರು , ಮಂಗಳವಾರ, 13 ನವೆಂಬರ್ 2018 (07:16 IST)
ಬೆಂಗಳೂರು : ಖ್ಯಾತ ಸಿನಿಮಾ ಡೇಟಾಬೇಸ್ ವೆಬ್‍ಸೈಟ್ ಇಂಟರ್ ನೆಟ್ ಮೂವಿ ಡೇಟಾ ಬೇಸ್(ಐಎಂಡಿಬಿ) ಪಟ್ಟಿಯಲ್ಲಿ ‘ಕೆಜಿಎಫ್’ ಎರಡನೇ ಸ್ಥಾನ ಪಡೆದುಕೊಳ್ಳುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಮೂಡಿಸಿದೆ.

ಈ ಪಟ್ಟಿಯಲ್ಲಿ ರಜಿನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ‘2.0 ‘ಮೊದಲ ಸ್ಥಾನದಲ್ಲಿದ್ದರೆ, ಯಶ್ ಅಭಿನಯದ ‘ಕೆಜಿಎಫ್’ ಎರಡನೇ ಸ್ಥಾನ ಪಡೆದುಕೊಂಡಿದೆ. ತೆಲುಗಿನ ವಿಜಯ್ ದೇವರಕೊಂಡ ಅಭಿನಯದ ‘ಟ್ಯಾಕ್ಸಿವಾಲಾ’ ಮೂರನೇ ಸ್ಥಾನದಲ್ಲಿದೆ. ಶಾರುಖ್ ಖಾನ್ ‘ಝೀರೋ’  ಚಿತ್ರ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. 

 

ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಡಿಸೆಂಬರ್ 21ರಂದು ಚಿತ್ರ ತೆರೆಕಾಣಲಿದೆ. ಅಂದೇ ಶಾರೂಖ್ ಖಾನ್ ಅಭಿನಯದ ‘ಝೀರೋ’ ಸಿನಿಮಾ ಸಹ ತೆರೆಕಾಣಲಿದೆ. ಈ ಬಗ್ಗೆ ಇತ್ತೀಚೆಗೆ ಯಶ್ ಹಾಗೂ ಶಾರುಖ್ ಖಾನ್ ಅಭಿಮಾನಿಗಳ ನಡುವೆ ವಾರ್ ಶುರುವಾಗಿದ್ದು, ಶಾರೂಖ್ ಖಾನ್ ಝೀರೋ ಸಿನಿಮಾದ ಮುಂದೆ ಯಶ್ ಕೆಜಿಎಫ್ ಧೂಳಿಪಟವಾಗಲಿದೆ ಎಂದು ಶಾರುಖ್ ಖಾನ್ ಅಭಿಮಾನಿಗಳು ಲೇವಡಿ ಮಾಡಿದ್ದರು. ಆದರೆ ಇದೀಗ ಐಎಂಡಿಬಿ ಪಟ್ಟಿಯಲ್ಲಿ ಕೆಜಿಎಫ್ ಎರಡನೇ ಸ್ಥಾನ ಪಡೆದುಕೊಳ್ಳುವ ಮೂಲಕ ಬಾಲಿವುಡ್ ಬಾದ್‍ಶಾ ಶಾರೂಖ್ ಖಾನ್ ಅಭಿನಯದ ‘ಝೀರೋ’  ಸಿನಿಮಾವನ್ನು ಹಿಂದಿಕ್ಕಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ದೀಪಿಕಾ-ರಣವೀರ್ ಮದುವೆಗೆ ಆಹ್ವಾನ ಪಡೆದ ಸ್ಯಾಂಡಲ್​ವುಡ್ ನ ಖ್ಯಾತ ನಿರ್ದೇಶಕ ಯಾರು ಗೊತ್ತಾ?