ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಆನ್ ಲೈನ್ ನಲ್ಲಿ ಲೀಕ್ ಆಗಿದೆ.
									
			
			 
 			
 
 			
			                     
							
							
			        							
								
																	ಕೆಜಿಎಫ್ 2 ನಿನ್ನೆ ವಿಶ್ವದಾದ್ಯಂತ ಭರ್ಜರಿಯಾಗಿ ತೆರೆ ಕಂಡಿತ್ತು. ಆದರೆ ತೆರೆ ಕಂಡ ಕೆಲವೇ ಕ್ಷಣಗಳಲ್ಲಿ ತಮಿಳು ರಾಕರ್ಸ್ ವೆಬ್ ಸೈಟ್ ನಲ್ಲಿ ಪೈರಸಿಯಾಗಿದೆ.
									
										
								
																	ಇದಕ್ಕೂ ಮೊದಲು ಮೊನ್ನೆ ಬಿಡುಗಡೆಯಾದ ದಳಪತಿ ವಿಜಯ್ ಅಭಿನಯದ ಬೀಸ್ಟ್ ಕೂಡಾ ಸೋರಿಕೆಯಾಗಿತ್ತು. ಹೊಸ ಸಿನಿಮಾಗಳಿಗೆ ಪೈರಸಿ ಕಾಟ ಇಂದು ನಿನ್ನೆಯದಲ್ಲ. ಇದನ್ನು ತಡೆಯಲು ಎಷ್ಟೇ ಪ್ರಯತ್ನಪಟ್ಟರೂ ಸಾಧ‍್ಯವಾಗುತ್ತಿಲ್ಲ.