Webdunia - Bharat's app for daily news and videos

Install App

ಶಾರ್ಟ್‌ ಪ್ರಾಕ್‌ನಲ್ಲಿ ಕೀರ್ತಿ ಸುರೇಶ್, ನೀವಿಷ್ಟು ಬದಲಾಗಿದ್ದು ಸಹಿಸಲಾಗುತ್ತಿಲ್ಲ ಎಂದ ನೆಟ್ಟಿಗರು

Sampriya
ಸೋಮವಾರ, 29 ಏಪ್ರಿಲ್ 2024 (20:14 IST)
ಪಾಂಡಿಚೇರಿ:  ಎ ಕಲೇಶ್ವರನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ವರುಣ್ ಧವನ್ ನಟನೆಯ 'ಬೇಬಿ ಜಾನ್ ' ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟಿ ಕೀರ್ತಿ ಸುರೇಶ್ ಕೊಂಚ ಬ್ರೇಕ್ ಪಡೆದು ಫ್ಯಾಮಿಲಿ ಜತೆ ಟ್ರಿಪ್ ಹೋಗಿದ್ದಾರೆ.

ಪಾಂಡಿಚೇರಿಗೆ ಪ್ರವಾಸ ಕೈಗೊಂಡಿರುವ ಕೀರ್ತಿ ಸುರೇಶ್ ಅವರು ಅಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಕೀರ್ತಿ ಮಿನಿ ಪ್ರಾಕ್‌ನಲ್ಲಿ ಫೋಟೋಗೆ ಫೋಸ್ ನೀಡಿದ್ದಾರೆ.  ಕೆಲಸದಿಂದ ಬ್ರೇಕ್ ಪಡೆದು ಟೂರ್ ಹೋಗಿರುವ ಕೀರ್ತಿ ಸುರೇಶ್ ತನ್ನ ಮುದ್ದಿನ ನಾಯಿ ಮರಿ ಜತೆ ಸಂತಸದ ಕ್ಷಣವನ್ನು ಹಂಚಿಕೊಂಡಿದ್ದಾರೆ.

ಮಗುವಿನೊಂದಿಗೆ ತುಂಟಾಟವಾಡುತ್ತಿರುವ  ಹಾಗೂ ಸ್ನೇಹಿತರು ಕಾಲ ಕಳೆಯುತ್ತಿರುವ  ಫೋಟೋವನ್ನು ಶೇರ್ ಮಾಡಿದ್ದಾರೆ. ಪೋಟೋ ನೋಡಿದ ಅಭಿಮಾನಿಗಳು 'ನೀವು ಇಷ್ಟು ಬದಲಾಗಿದ್ದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ' ಎಂದಿದ್ದಾರೆ.  ಇನ್ನೂ ಕೆವರು ಹಾರ್ಟ್ ಎಮೋಜಿ ನೀಡಿದ್ದಾರೆ.

ದಕ್ಷಿಣ ಭಾರತದ ಚಲನಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ನಟಿಯರಲ್ಲಿ ಕೀರ್ತಿ ಸುರೇಶ್ ಒಬ್ಬರು. ತನ್ನ ಸಹಜ ಸೌಂದರ್ಯದ ಮೂಲಕವೇ ಗಮನ ಸೆಳೆದಿದ್ದ, ಕೀರ್ತಿ ಈಚೆಗೆ ತೂಕ ಕಳೆದುಕೊಂಡು ವಿಭಿನ್ನ ಲುಕ್ ಟ್ರೈ ಮಾಡಿದ್ದಾರೆ. ಅದಲ್ಲದೆ ಸೀರೆಯಲ್ಲೇ ಯಾವಾಗಲೂ ಮಿಂಚುತ್ತಿದ್ದ ಕೀರ್ತಿ ಈಚೆಗೆ ವಿಭಿನ್ನ ಲುಕ್ ಟ್ರೈ ಮಾಡಿದ್ದಾರೆ.

ಇನ್ನೂ ಕೀರ್ತಿ ಬದಲಾಗಿದ್ದನ್ನು ಕೆಲವರು ಇಷ್ಟ ಪಟ್ಟಿಲ್ಲ. ನೀವೇ ಮೈ ತುಂಬಿಕೊಂಡು, ಸಾಂಪ್ರದಾಯಿಕ ಉಡುಗೆಯಲ್ಲಿ ಚೆನ್ನಾಗಿ ಕಾಣುತ್ತೀರಿ ಎಂದಿದ್ದರು.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೀರ್ತಿ ಅವರು ಮುಂಬರುವ 'ರೆಂಡು ಜೆಲ್ಲಾ ಸೀತಾ', 'ರಿವಾಲ್ವರ್ ರೀಟಾ', 'ಕನ್ನೀವೇಡಿ' ಸಿನಿಮಾದ  ಅಭಿನಯಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Pahalgam Attack: ರೇಡಿಯೋ ಸ್ಟೇಷನ್‌ಗಳಲ್ಲಿ ಭಾರತೀಯ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ

Ramya: ಪಾಕಿಸ್ತಾನದ ಜೊತೆ ಯುದ್ಧ ಬೇಡ, ಮಾಡಿದ್ರೆ ನಮ್ಮ ಸೈನಿಕರೇ ಸಾಯೋದು: ಇದು ನಟಿ ರಮ್ಯಾ ಅಭಿಪ್ರಾಯ

ದೇಶ ಎಂಬ ವಿಚಾರ ಬಂದಾಗ ಹಿಂದೆ ನೋಡಬಾರದು: ಸುನಿಲ್ ಶೆಟ್ಟಿ

Fighter ಪ್ರಧಾನಿ ಮೋದಿ ಜಮ್ಮು ಕಾಶ್ಮೀರದಲ್ಲಿ ಶಾಂತಿ ತರುತ್ತಾರೆ: ರಜನಿಕಾಂತ್ ಬಣ್ಣನೆ

Sonu Nigam: ಕನ್ನಡ ಹಾಡು ಹಾಡಿ ಎಂದು ಯುವಕನಿಂದ ಸೋನು ನಿಗಂಗೆ ಎಚ್ಚರಿಕೆ: ಗಾಯಕ ಹೇಳಿದ್ದೇನು ಗೊತ್ತಾ

ಮುಂದಿನ ಸುದ್ದಿ
Show comments