Publish Date: Sat, 28 Oct 2017 (08:11 IST)
Updated Date: Sat, 28 Oct 2017 (08:13 IST)
ಬೆಂಗಳೂರು: ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರವಾಹಿಯಿಂದ ಹೊರ ಬಂದು ತೆಲುಗು ಧಾರವಾಹಿ, ಕನ್ನಡ ಸಿನಿಮಾ ಎಂದು ಓಡಾಡಿಕೊಂಡಿದ್ದ ಚಿನ್ನು ಆಲಿಯಾಸ್ ಕವಿತಾ ಗೌಡ ಮತ್ತೆ ಕನ್ನಡ ಧಾರವಾಹಿಗೆ ಮರಳಿದ್ದಾರೆ.
ಆದರೆ ಈ ಬಾರಿ ಅವರು ತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಕಲರ್ಸ್ ವಾಹಿನಿಯಲ್ಲಲ್ಲ. ಫಾರ್ ಎ ಚೇಂಜ್ ಜೀ ಕನ್ನಡ ವಾಹಿನಿಯಲ್ಲಿ. ‘ವಿದ್ಯಾ ವಿನಾಯಕ’ ಎಂಬ ಹೊಸ ಧಾರವಾಹಿಯಲ್ಲಿ ಕವಿತಾ ಗೌಡ ನಾಯಕಿ ಪಾತ್ರ ನಿರ್ವಹಿಸಲಿದ್ದಾರೆ.
ಇದೇ ಸೋಮವಾರ ರಾತ್ರಿ 8 ಗಂಟೆಗೆ ವಿದ್ಯಾ ವಿನಾಯಕ ಧಾರವಾಹಿ ಪ್ರಸಾರವಾಗಲಿದೆ. ಯಶಸ್ವೀ ಉದ್ಯಮಿ, ಪಕ್ಕಾ ಪ್ರಾಕ್ಟಿಕಲ್ ಹುಡುಗ ವಿನಾಯಕ ಮತ್ತು ಜೀವನವನ್ನು ಸಿಂಪಲ್ ಎಂದು ತಿಳಿದುಕೊಂಡಿರುವ ವಿದ್ಯಾ ನಡುವಿನ ಪ್ರೀತಿಯ ಕತೆ ‘ವಿದ್ಯಾ ವಿನಾಯಕ’.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ