ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಮತ್ತು ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಭೇಟಿಯಾದ ಕ್ಷಣದ ಫೋಟೋವೊಂದು ಮೊನ್ನೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈಗ ಕಪಿಲ್ ದೇವ್ ಮತ್ತು ರಜನಿ ಭೇಟಿ ಹಿಂದಿನ ರಹಸ್ಯ ಬಯಲಾಗಿದೆ. ರಜನೀಕಾಂತ್ ಪುತ್ರಿ ಐಶ್ವರ್ಯಾ ಲಾಲ್ ಸಲಾಂ ಎನ್ನುವ ಸಿನಿಮಾ ನಿರ್ದೇಶಿಸುತ್ತಿದ್ದಾರೆ.
ಈ ಸಿನಿಮಾದಲ್ಲಿ ರಜನೀಕಾಂತ್ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಅವರ ಜೊತೆಗೆ ಕಪಿಲ್ ದೇವ್ ಕೂಡಾ ಗೆಸ್ಟ್ ಅಪಿಯರೆನ್ಸ್ ಮಾಡುತ್ತಿದ್ದಾರೆ. ವಿಶ್ವಕಪ್ ಗೆಲ್ಲಿಸಿಕೊಡುವ ಮೂಲಕ ಇಡೀ ಭಾರತವೇ ಹೆಮ್ಮೆಪಡುವಂತೆ ಮಾಡಿದ ಕಪಿಲ್ ದೇವ್ ಅವರ ಜೊತೆ ಕೆಲಸ ಮಾಡುತ್ತಿರುವುದು ಹೆಮ್ಮೆ ತಂದಿದೆ ಎಂದು ರಜನಿ ಹೇಳಿಕೊಂಡಿದ್ದಾರೆ.