ಕಾಂತಾರದಲ್ಲಿ ಭೂತಕೋಲ, ವೀರ ಚಂದ್ರಹಾಸದಲ್ಲಿ ಯಕ್ಷಗಾನ: ವೈರಲ್ ಆಗ್ತಿದೆ ರವಿ ಬಸ್ರೂರು ವೀರ ಚಂದ್ರಹಾಸ ಟೀಸರ್

Krishnaveni K
ಮಂಗಳವಾರ, 20 ಆಗಸ್ಟ್ 2024 (10:39 IST)
ಬೆಂಗಳೂರು: ಕಾಂತಾರ ಸಿನಿಮಾದಲ್ಲಿ ತುಳುನಾಡಿನ ಭೂತಕೋಲವನ್ನು ವಿಶ್ವಕ್ಕೇ ಪರಿಚಯಿಸಿದ ರಿಷಬ್ ಶೆಟ್ಟಿ ಗೆಲುವು ಕಂಡರು. ಇದೀಗ ಅದೇ ಕುಂದಾಪುರದವರೇ ಆದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಆಂಡ್ ಟೀಂ ಯಕ್ಷಗಾನವನ್ನು ಸಿನಿಮಾವಾಗಿ ಹೊರತರಲು ಸಿದ್ಧತೆ ನಡೆಸಿದೆ.

ರವಿ ಬಸ್ರೂರು ನಿರ್ದೇಶನ, ಸಂಗೀತ ನಿರ್ದೇಶನದಲ್ಲಿ ವೀರ ಚಂದ್ರಹಾಸ ಎನ್ನುವ ಸಿನಿಮಾ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾ ಯಕ್ಷಗಾನ ಕತೆಯನ್ನು ಹೊಂದಿದೆ. ಇದುವರೆಗೆ ಸಿನಿಮಾದಲ್ಲಿ ಯಕ್ಷಗಾನವನ್ನು ಬಳಸಿದ ಉದಾಹರಣೆಯಿಲ್ಲ. ಆದರೆ ರವಿ ಬಸ್ರೂರು ಇದೇ ಮೊದಲ ಬಾರಿಗೆ ಇಂತಹದ್ದೊಂದು ಪ್ರಯೋಗಕ್ಕಿಳಿದಿದ್ದಾರೆ.

ಕುಂತಲದ ಚಂದ್ರಹಾಸ ರಾಜನ ಸಾಹಸ ಕತೆಯನ್ನೊಳಗೊಂಡ ಯಕ್ಷಗಾನ ಪ್ರಸಂಗವನ್ನು ಸಿನಿಮಾ ರೂಪಕ್ಕಿಳಿಸಲಾಗಿದೆ. ಯಕ್ಷಗಾನ ಕೇವಲ ಒಂದು ರಂಗ ವೇದಿಕೆಗೆ ಸೀಮಿತವಾಗಿತ್ತು. ಕೆಲವೊಂದು ಸಿನಿಮಾಗಳಲ್ಲಿ ಯಕ್ಷಗಾನ ಪ್ರದರ್ಶನ ಮಾಡುತ್ತಿರುವ ದೃಶ್ಯವನ್ನು ಪ್ರಸಾರ ಮಾಡಿರಬಹುದು.

ಆದರೆ ಯಕ್ಷಗಾನವೇ ಸಿನಿಮಾವಾದ ಉದಾಹರಣೆಯಿಲ್ಲ. ಇದೀಗ ಕುಂದಾಪುರದವರಾದ ರವಿ ಬಸ್ರೂರು ಕರಾವಳಿಯ ಕಲೆ ಯಕ್ಷಗಾನವನ್ನು ಸಿನಿಮಾ ಮಾಡಿ ಈ ಕಲೆಯನ್ನು ಇನ್ನೊಂದು ಮಟ್ಟಕ್ಕೆ ಕೊಂಡೊಯ್ಯಲು ತಯಾರಿ ನಡೆಸಿದ್ದಾರೆ. ಸದ್ಯಕ್ಕೆ ಇದರ ಟೀಸರ್ ಬಿಡುಗಡೆಯಾಗಿದ್ದು ಇಲ್ಲಿದೆ ಲಿಂಕ್.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಚಾಪ್ಟರ್ 1 ಒಟಿಟಿಗೆ: ಬಂದದ್ದು ಸ್ವಲ್ಪ ಬೇಗ ಆಯ್ತಾ ಅಂತ ಅಂತಿದ್ದಾರೆ ಫ್ಯಾನ್ಸ್

ಪುನೀತ್ ರಾಜ್ ಕುಮಾರ್ ನಾಲ್ಕನೇ ಪುಣ್ಯ ತಿಥಿ: ಅಪ್ಪು ನೆನಪಿನಲ್ಲಿ ಅಶ್ವಿನಿ ಪುನೀತ್ ಹೇಳಿದ್ದೇನು

ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ನಟ ಧನುಷ್‌ಗೆ ಬಾಂಬ್ ಬೆದರಿಕೆ

ನಂದಗೋಕುಲದ ಅಭಿದಾಸ್ ಈಗ ಲ್ಯಾಂಡ್ ಲಾರ್ಡ್ ನಲ್ಲಿ ಖಡಕ್ ಚಿಕ್ಕದಣಿ

ಕಾಂತಾರ ಚಾಪ್ಟರ್ 1 ದೊಡ್ಡ ಪರದೆಯಲ್ಲಿ ಸಿನಿಮಾ ನೋಡದವರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಮುಂದಿನ ಸುದ್ದಿ
Show comments