ಸಂತಾನೋತ್ಪತ್ತಿ ಸಂಗೀತ..ಕಾಂತಾರ ಚಾಪ್ಟರ್ 1 ಭಾಷಾಂತರ ಅವಾಂತರ

Krishnaveni K
ಸೋಮವಾರ, 3 ನವೆಂಬರ್ 2025 (12:07 IST)
ಬೆಂಗಳೂರು: ಸೂಪರ್ ಹಿಟ್ ಕಾಂತಾರ ಚಾಪ್ಟರ್ 1 ಸಿನಿಮಾ ಈಗ ಅಮೆಝೋನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ. ಆದರೆ ಸಿನಿಮಾದ ಸಬ್ ಟೈಟಲ್ ಅವಾಂತರಗಳು ಈಗ ನೆಟ್ಟಿಗರಿಂದ ಭಾರೀ ಟೀಕೆಗೊಳಗಾಗಿದೆ.

ಕಾಂತಾರ ಚಾಪ್ಟರ್ 1 ಸಿನಿಮಾ ಪ್ರೇಕ್ಷಕರಿಗೆ ಅರ್ಥವಾಗಲಿ ಎಂಬ ಉದ್ದೇಶಕ್ಕೆ ಸಬ್ ಟೈಟಲ್ ಕೂಡಾ ಹಾಕಲಾಗುತ್ತಿದೆ. ಆದರೆ ಇಂಗ್ಲಿಷ್ ನಿಂದ ಕನ್ನಡಕ್ಕೆ ಬರುವಾಗ ಸಬ್ ಟೈಟಲ್ ಅರ್ಥ ಹೋಗಿ ಅನರ್ಥವಾಗುತ್ತಿದೆ. ಇದು ವೀಕ್ಷಕರ ಟೀಕೆಗೆ ಗುರಿಯಾಗಿದೆ.

ಉದಾಹರಣೆಗೆ ಬೆರ್ಮೆಯನ್ನು ಕಟ್ಟಿ ಹಾಕಿ ರಾಜ ಕುಲಶೇಖರ ಪ್ರಶ್ನೆ ಮಾಡುತ್ತಿರುವ ಸನ್ನಿವೇಶದಲ್ಲಿ ಸಬ್ ಟೈಟಲ್ ಸಂತಾನೋತ್ಪತ್ತಿ ಸಂಗೀತ ಎಂದು ಬರುತ್ತಿದೆ. ಇನ್ನು ‘ಶಂಖದ ಹೊಡೆತಗಳು’, ‘ರಾಜಶೇಖರ ಗುಜುಗುಜುಗಳು’, ‘ಸುಡುವ ಲಾಗ್ ತುಣುಕುಗಳು’ ಎಂಬಿತ್ಯಾದಿ ಸಬ್ ಟೈಟಲ್ ಗಳು ಬರುತ್ತಿವೆ.

ಇದನ್ನು ನೋಡಿದ ಪ್ರೇಕ್ಷಕರು ಇಷ್ಟೆಲ್ಲಾ ಕೋಟಿ ಕೋಟಿ ಖರ್ಚು ಮಾಡಿ ಸಿನಿಮಾ ಮಾಡುತ್ತೀರಿ. ಇಂತಹ ಅನರ್ಥದ ಭಾಷಾಂತರ ಗಮನಿಸಲು ಆಗಲಿಲ್ಲವೇ? ಈ ರೀತಿ ಮಾಡಿ ಸಿನಿಮಾದ ಮರ್ಯಾದೆ ಯಾಕೆ ಕಳೆಯುತ್ತೀರಿ? ಎಐ ತಂತ್ರಜ್ಞಾನದ ಮೊರೆ ಹೋಗುವ ಬದಲು ಓರ್ವ ಸಮರ್ಥ ಭಾಷಾಂತರ ತಜ್ಞನನ್ನು ಕೂರಿಸಿಕೊಂಡು ಇಂತಹ ಪ್ರಮಾದಗಳನ್ನು ತಡೆಯಬಹುದಿತ್ತಲ್ಲವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬರ್ತಡೇ ದಿನ ನಟ ಶಾರುಖ್‌ ಖಾನ್‌ಗೆ ಸಂಸದ ಶಶಿ ತರೂರ್‌ ಹೇಗೇ ಕಾಲೆಳೆಯುವುದಾ

ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್​ಗೆ 60ರ ಸಂಭ್ರಮ: ಮನೆಮುಂದೆ ಅಭಿಮಾನಿಗಳ ಜಾತ್ರೆ

ಆತಂಕದಲ್ಲಿರುವ ಫ್ಯಾನ್ಸ್‌ಗೆ ನಟ ಧರ್ಮೇಂದ್ರ ಆರೋಗ್ಯದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್‌

ನಟ ದರ್ಶನ್ ಅಭಿಮಾನಿಗಳ ನಡವಳಿಕೆಗೆ ವೇದಿಕೆಯಿಂದಲೇ ಕೆಳಗಿಳಿದ ರಚಿತಾ ರಾಮ್‌

ನಟಿ ಶಿಲ್ಪಾಗೆ ಮುಗಿಯದ ಸಂಕಷ್ಟ, ತಾಯಿ ಸುನಂದಾ ಶೆಟ್ಟಿ ಆಸ್ಪತ್ರೆಗೆ ದಾಖಲು

ಮುಂದಿನ ಸುದ್ದಿ
Show comments