Webdunia - Bharat's app for daily news and videos

Install App

ಕಾಂತಾರ 2 ಬಜೆಟ್ ಎಷ್ಟು? ಮುಹೂರ್ತ ಎಲ್ಲಿ ನಡೆಯುತ್ತೆ? ಇಲ್ಲಿದೆ ಡೀಟೈಲ್ಸ್

Webdunia
ಶನಿವಾರ, 25 ನವೆಂಬರ್ 2023 (09:50 IST)
Photo Courtesy: Twitter
ಬೆಂಗಳೂರು: ಬಹುಬನಿರೀಕ್ಷಿತ ಕಾಂತಾರ 2 ಸಿನಿಮಾದ ಫಸ್ಟ್ ಲುಕ್ ಮತ್ತು ಮುಹೂರ್ತ ಯಾವಾಗ ಎಂದು ಹೊಂಬಾಳೆ ಫಿಲಂಸ್ ಈಗಾಗಲೇ ಅಧಿಕೃತವಾಗಿ ಘೋಷಣೆ ಮಾಡಿದೆ.

ಕಾಂತಾರ 2 ಫಸ್ಟ್ ಲುಕ್ ರಿವೀಲ್ ಬಗ್ಗೆ ಸುದ್ದಿ ನೀಡುತ್ತಿದ್ದಂತೇ ಅಭಿಮಾನಿಗಳು ಚಿತ್ರದ ಬಗ್ಗೆ ತಿಳಿಯಲು ಉತ್ಸುಕರಾಗಿದ್ದಾರೆ. ಕಾಂತಾರ 1 ರಲ್ಲಿ ರಿಷಬ್ ನೀಡಿದ್ದ ದೃಶ್ಯ ವೈಭವ ಇದಕ್ಕೆ ಕಾರಣ.

ಕಾಂತಾರ 2 ಅಸಲಿಗೆ ಕಾಂತಾರ ಮೊದಲ ಭಾಗಕ್ಕಿಂತ ಮೊದಲ ಕತೆ ಎಂದು ಈಗಾಗಲೇ ರಿಷಬ್ ಹೇಳಿದ್ದಾರೆ. ಇದು 13 ನೇ ಶತಮಾನದಲ್ಲಿ ನಡೆಯುವ ಕತೆ ಎನ್ನಲಾಗಿದೆ. ಹೀಗಾಗಿ ಅದಕ್ಕೆ ತಕ್ಕಂತೆ ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕಾಂತಾರ 2 ಗಾಗಿ ರಿಷಬ್ ಕೇರಳದ ಕಳರಿಪಯಟ್ಟು, ಕುದುರೆ ಸವಾರಿ ಕಲಿತಿದ್ದಾರೆ.

ಕಾಂತಾರ ಮೊದಲ ಭಾಗ ಕೇವಲ 18 ಕೋಟಿ ವೆಚ್ಚದಲ್ಲಿ ತಯಾರಾಗಿ 600 ಕೋಟಿ ರೂ. ಬಾಚಿಕೊಂಡಿತ್ತು. ಆದರೆ ಕಾಂತಾರ 2 100 ಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಲಿದೆ. ಕಾಂತಾರ 2 ಫಸ್ಟ್ ಲುಕ್ ರಿವೀಲ್ ಮತ್ತು ಮುಹೂರ್ತ ಸೋಮವಾರ ನಡೆಯಲಿದೆ.

ರಿಷಬ್ ಹುಟ್ಟೂರು ಉಡುಪಿಯ ದೇವಸ್ಥಾನವೊಂದರಲ್ಲೇ ಮುಹೂರ್ತ ಕಾರ್ಯಕ್ರಮವೂ ನಡೆಯಲಿದೆಯಂತೆ. ಇಲ್ಲಿಯೇ ಶೂಟಿಂಗ್ ಕೂಡಾ ನಡೆಯುವ ಸಾಧ‍್ಯತೆಯಿದೆ. ಡಿಸೆಂಬರ್ ನಿಂದ ಶೂಟಿಂಗ್ ಆರಂಭವಾಗಲಿದೆ. ಈ ಬಾರಿ ಕೆಲವು ಹೊಸ ಪಾತ್ರಗಳೂ ಸೇರ್ಪಡೆಯಾಗಲಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹುಟ್ಟೂರಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬಿ ಸರೋಜಾದೇವಿ ಅಂತ್ಯಕ್ರಿಯೆ

ಮೋಡಿ ಮಾಡಲು ರೆಡಿಯಾದ ಶೈನ್ ಶೆಟ್ಟಿ-ಅಂಕಿತ ಅಮರ್ ಜೋಡಿ: ಸೆನ್ಸಾರ್‌ ಪರೀಕ್ಷೆ ಪಾಸಾದ ಜಸ್ಟ್ ಮಾರೀಡ್

ಅಭಿನಯ ಸರಸ್ವತಿ ಬಿ ಸರೋಜಾದೇವಿಗೆ ಇಂದು ಅಂತಿಮ ಕ್ರಿಯೆ

ರಾಜ್‌ಕುಮಾರ್‌, ಪುನೀತ್ ಹಾದಿಯಲ್ಲೇ ನಡೆದ ಸರೋಜಾ ದೇವಿ, ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ನಟಿ

ವಿವಾಹದ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾದ ಕಪ್ಪು ಸುಂದರಿ ಸ್ಯಾನ್ ರೆಚಲ್‌, ಸಾವಿನ ಸುತ್ತಾ ಹಲವು ಅನುಮಾನ

ಮುಂದಿನ ಸುದ್ದಿ
Show comments