Publish Date: Sat, 04 Feb 2017 (11:55 IST)
Updated Date: Sat, 04 Feb 2017 (12:02 IST)
ಚಿತ್ರದ ಶೀರ್ಷಿಕೆ ಕೇಳಿದರೆ ಇದೇನು ಶೀರ್ಷಿಕೆಯೋ ಏನೋ ಅಂದ್ಕೋತೀರಾ. ’ಇಬ್ಬರು ಬಿಟೆಕ್ ಸ್ಟುಡೆಂಟ್ಸ್ ಜರ್ನಿ’ ಎಂಬುದು ಚಿತ್ರದ ಹೆಸರು. ಇದೇನಿದು ಟೈಟಲ್ ನಾಲ್ಕು ಮೊಳ ಇದೆ ಎಂದುಕೊಂಡರೂ ಅದಕ್ಕೊಂದು ಅರ್ಥ, ಉದ್ದೇಶ ಇದೆಯಂತೆ.
ಇಬ್ಬರು ಬಿ.ಟೆಕ್ ವಿದ್ಯಾರ್ಥಿಗಳಿಗೆ ಮದುವೆ ನಿಶ್ಚಯವಾಗುತ್ತದೆ. ಒಬ್ಬರನ್ನೊಬ್ಬರು ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಒಂದೇ ಮನೆಯಲ್ಲಿ ಒಂದು ತಿಂಗಳು ವಾಸ ಮಾಡಬೇಕು. ಆನಂತರ ಮದುವೆ. ಇದೇ ಕಥೆ.
ಚಿತ್ರದ ನಾಯಕ ಚೆನ್ನಾಗಿ ಆಸ್ತಿಪಾಸ್ತಿ ಇರುವಂತವನು. ಅಹಂ ಜಾಸ್ತಿ. ಹುಡುಗೀಗೂ ಅಷ್ಟೇ ಪೊಗರು. ಒಂದು ತಿಂಗಳ ಕಾಲ ಒಂದೇ ಮನೆಯಲ್ಲಿ ವಾಸ ಮಾಡಿದ ಇವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರಾ? ಇವರಿಬ್ಬರಿಗೂ ಮದುವೆ ಆಗುತ್ತಾ ಎಂಬುದೇ ಸಸ್ಪೆನ್ಸ್.
ಬೆಂಗಳೂರು, ನಂದಿಬೆಟ್ಟ, ಊಟಿ ಮತ್ತು ಹೈದರಾಬಾದ್‌ನಲ್ಲಿ ಶೂಟಿಂಗ್ ನಡೆಯಲಿದೆಯಂತೆ. ಕೃಷ್ಣಂರಾಜು ಮತ್ತು ಕಿರಣ್ ಚಿತ್ರದ ನಾಯಕನಾಯಕಿ. ವೀಣಾ ಸುಂದರ್ ಮತ್ತು ರವಿಕಿರಣ್ ಸಹ ಪಾತ್ರವರ್ಗದಲ್ಲಿದ್ದಾರೆ. ಲಯೇಂದ್ರ ಸಂಗೀತ ಚಿತ್ರಕ್ಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.