Select Your Language

Notifications

webdunia
webdunia
webdunia
webdunia

'ತ್ರಿನಯನಿ' ಸೀರಿಯಲ್ ಖ್ಯಾತಿಯ ಕನ್ನಡತಿ ಪವಿತ್ರ ಜಯರಾಂ ವಿಧಿವಶ

Pavitra Jayaram

Sampriya

ಹೈದರಾಬಾದ್ , ಭಾನುವಾರ, 12 ಮೇ 2024 (13:46 IST)
Photo Courtesy X
ಹೈದರಾಬಾದ್: ರಸ್ತೆ ಅಪಘಾತದಲ್ಲಿ ಕನ್ನಡತಿ, ತೆಲುಗಿನ 'ತ್ರಿನಯನಿ' ಧಾರವಾಹಿ ಖ್ಯಾತಿಯ ನಟಿ ಪವಿತ್ರ ಜಯರಾಂ ಕೊನೆಯುಸಿರೆಳೆದಿದ್ದಾರೆ.

ಹೈದರಾಬಾದ್ ಸಮೀಪದ ಮೆಹಬೂಬ್ ನಗರದಲ್ಲಿ ಕಾರು ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ  ಪವಿತ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇವರು ಕನ್ನಡದ ಸೀರಿಯಲ್​ಗಳಲ್ಲಿ ಮನೆ ಮಾತಾಗಿದ್ದರು. ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟಿಸಿ, ತೆಲುಗು ಸೀರಿಯಲ್‌ಗಳಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು.

ಕನ್ನಡದ ರೋಬೋ ಫ್ಯಾಮಿಲಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ಕನ್ನಡದಲ್ಲಿ ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟಿಸಿ ಜನಪ್ರಿಯರಾಗಿದ್ದರು.

ನಟಿ ಪವಿತ್ರಾ ಜಯರಾಂ ಸಾವಿಗೆ ಕನ್ನಡ ಹಾಗೂ ತೆಲುಗಿನ ಕಿರುತೆರೆ ಲೋಕ ಸಂತಾ‍ಪ ವ್ಯಕ್ತಪಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತುಂಡುಡುಗೆಯಲ್ಲಿ ಭೂಮಿ ಶೆಟ್ಟಿ ಥಳುಕು ಬಳುಕು, ಟೆಂಪರೇಚರ್‌ ಹೆಚ್ಚಾಗ್ತಿದೆ ಎಂದಾ ನೆಟ್ಟಿಗರು