Select Your Language

Notifications

webdunia
webdunia
webdunia
webdunia

ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಹೃದಯಾಘಾತದಿಂದ ನಿಧನ

Dwarakish

Krishnaveni K

ಬೆಂಗಳೂರು , ಮಂಗಳವಾರ, 16 ಏಪ್ರಿಲ್ 2024 (11:58 IST)
ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಮೇರು ಪ್ರತಿಭೆ, ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಹೃದಯಾಘಾತದಿಂದಾಗಿ ಸಾವನ್ನಪ್ಪಿರುವ ಸುದ್ದಿ ಬಂದಿದೆ.

81 ವರ್ಷದ ದ್ವಾರಕೀಶ್ ಇಂದು ನಿಧನರಾಗಿರುವುದಾಗಿ ಅವರ ಪುತ್ರ ಯೋಗಿ ಮಾಹಿತಿ ನೀಡಿದ್ದಾರೆ. ನಿನ್ನೆ ರಾತ್ರಿ ಅವರಿಗೆ ಆರೋಗ್ಯದಲ್ಲಿ ಸಣ್ಣ ಏರುಪೇರಾಗಿತ್ತು. ಬೇಧಿಯಾಗುತ್ತಿದ್ದ ಕಾರಣ ಅವರು ಸರಿಯಾಗಿ ನಿದ್ರಿಸಲು ಸಾಧ‍್ಯವಾಗಿರಲಿಲ್ಲ. ಹಾಗಿದ್ದರೂ ತಡರಾತ್ರಿ ಎರಡು ಗಂಟೆಗಳ ಕಾಲ ನಿದ್ರಿಸಿದವರು ಬೆಳಿಗ್ಗೆ ಎದ್ದಿರಲಿಲ್ಲ.

ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ. ದ್ವಾರಕೀಶ್ ಸಾವನ್ನಪ್ಪಿರುವ ಸುದ್ದಿ ಸ್ಯಾಂಡಲ್ ವುಡ್ ಗೆ ಆಘಾತವಾಗಿದೆ. ಅವರ ನಿಧನಕ್ಕೆ ಸೆಲೆಬ್ರಿಟಿಗಳು, ಫ್ಯಾನ್ಸ್ ಕಂಬನಿ ಮಿಡಿಯುತ್ತಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಅವರ ಆಪ್ತ ಗೆಳೆಯನಾಗಿದ್ದ ದ್ವಾರಕೀಶ್ ಹಲವು ಸಿನಿಮಾಗಳಲ್ಲಿ ನಾಯಕನಾಗಿ, ಪೋಷಕ ನಟನಾಗಿ, ಹಾಸ್ಯ ಕಲಾವಿದನಾಗಿ ಮಿಂಚಿದ್ದರು.

ಕೆಲವು ಸಮಯದ ಹಿಂದೆ ಅವರ ಸಾವಿನ ಸುಳ್ಳು ಸುದ್ದಿ ಹರಿದಾಡಿತ್ತು. ಬಳಿಕ ಅವರೇ ಸ್ಪಷ್ಟನೆ ನೀಡಿದ್ದರು. ಆದರೆ ಈ ಬಾರಿ ನಿಜವಾಗಿಯೂ ಸಾವನ್ನಪ್ಪಿರುವ ದುಃಖದ ಸಮಾಚಾರ ಬಂದಿದೆ. ಇತ್ತೀಚೆಗಿನ ಸಿನಿಮಾ ನಿರ್ಮಾಣದಿಂದ ಕೈ ಸುಟ್ಟುಕೊಂಡಿದ್ದ ಅವರು, ಅನಾರೋಗ್ಯವೂ ಕಾಡುತ್ತಿದ್ದರಿಂದ ಚಿತ್ರರಂಗದಿಂದ ದೂರವಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್ ಮನೆ ಮೇಲೆ ಗುಂಡು ಹಾರಿಸಿದ ಆರೋಪಿಗಳು ಅರೆಸ್ಟ್