ಸೀರಿಯಲ್ ಕಲಾವಿದರ ವೃತ್ತಿ ಬದುಕಿಗೆ ಭದ್ರತೆಯೇ ಇಲ್ಲ

Webdunia
ಬುಧವಾರ, 24 ಆಗಸ್ಟ್ 2022 (10:24 IST)
ಬೆಂಗಳೂರು: ದೊಡ್ಡ ಕಂಪನಿಯ ಸಿಇಒ, ಐಷಾರಾಮಿ ಮನೆ, ಕಾರು, ಅಧಿಕಾರ.. ಇವೆಲ್ಲಾ ಒಂದು ಧಾರವಾಹಿಯ ಕತೆಯಲ್ಲಿ ಬರುವ ಕುಟುಂಬದ ಚಿತ್ರಣವಾಗಿರುತ್ತದೆ. ಇತ್ತ ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಮೆಚ್ಚಿನ ಪಾತ್ರಧಾರಿಗಳನ್ನು ಅಭಿಮಾನಿಗಳು ತಲೆ ಮೇಲೆ ಹೊತ್ತು ಮೆರೆಸುತ್ತಾರೆ. ಆದರೆ ನಿಜ ಜೀವನದಲ್ಲಿ ಕಲಾವಿದರ ಬದುಕು ಹೇಗಿರುತ್ತದೆ ಗೊತ್ತಾ?

ಕಿರುತೆರೆ ಇಂದು ಮನೆ ಮನೆಗೂ ತಲುಪಿ ಅದರ ಪಾತ್ರಧಾರಿಗಳು ಸ್ಟಾರ್ ಗಳಾಗಿರಬಹುದು. ಆದರೆ ತೆರೆ ಹಿಂದಿನ ಅವರ ಬದುಕು ಅಷ್ಟು ಸುಲಭವಲ್ಲ. ನಿರ್ಮಾಪಕರು ಮತ್ತು ಕಲಾವಿದರ ನಡುವಿನ ಒಪ್ಪಂದದ ಪ್ರಕಾರ ಒಂದು ದಿನಕ್ಕೆ ಇಂತಿಷ್ಟು ಸಂಭಾವನೆ ಎಂದು ಫಿಕ್ಸ್ ಆಗಿ ಅವರು ಈ ಫೀಲ್ಡ್ ಗೆ ಬರುತ್ತಾರೆ. ಆದರೆ ಅಲ್ಲಿ ಅವರಿಗೆ ಲೆಕ್ಕ ಪ್ರಕಾರ 12 ಗಂಟೆಗಳ ಕೆಲಸದ ಅವಧಿಯಾದರೂ ಫೂಟೇಜ್ ಹೆಚ್ಚು ಕೊಡಬೇಕು ಎಂಬ ಕಾರಣಕ್ಕೆ ಈ ಅವಧಿ ಹೆಚ್ಚಾಗುವುದು ಸಾಮಾನ್ಯ. ಒಂದು ಕಂಪನಿಯಲ್ಲಿ ಓವರ್ ಟೈಂ ಮಾಡಿದ್ದಕ್ಕೆ ಹೆಚ್ಚು ವೇತನ ನೀಡಬಹುದು. ಆದರೆ ಕಲಾವಿದರಿಗೆ ಅಂತಹ ಸೌಲಭ್ಯವಿಲ್ಲ. ಒಂದು ದಿನದ ಲೆಕ್ಕದಲ್ಲಿ ವೇತನ ಪಡೆಯುವ ಕಲಾವಿದರನ್ನು ಬೆಳಗಿನ ಜಾವದ ತನಕ ದುಡಿಸಿಕೊಂಡರೂ ಸಿಗುವ ವೇತನ ಹೆಚ್ಚಾಗಲ್ಲ. ಬೆಳಿಗ್ಗೆ 7 ಗಂಟೆಗೆ ಮೇಕಪ್ ಹಾಕಿಕೊಂಡು ಕೂತರೆ ಕೆಲವೊಮ್ಮೆ ಸಂಜೆಯಾದರೂ ಅವರು ಶೂಟಿಂಗ್ ಇಲ್ಲದೇ ಕೂರಬೇಕು. ಇಲ್ಲವೇ ನಿರಂತರವಾಗಿ ದುಡಿಯುತ್ತಲೇ ಇರಬೇಕು. ಬಹುಶಃ ನಾಯಕ-ನಾಯಕಿಯೇ ಆದರೂ ವರ್ಷಕ್ಕೊಮ್ಮೆ ವೇತನ ಹೆಚ್ಚಳವಾಗುವುದು ಅನುಮಾನವೇ.

ಊಟೋಪಚಾರ: ಇತ್ತೀಚೆಗೆ ನಟ ಅನಿರುದ್ಧ್ ಜತ್ಕಾರ್ ಒಂದು ದಿನ ಐಷಾರಾಮಿ ಹೋಟೆಲ್ ನಲ್ಲಿ ಊಟ ಮಾಡಿ ನಮಗೆ 2 ಲಕ್ಷ ರೂ. ಬಿಲ್ ಬರುವಂತೆ ಮಾಡಿದರು ಎಂದು ನಿರ್ಮಾಪಕರು ಆರೋಪಿಸಿದ್ದರು. ಆದರೆ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯುವಾಗ ಒಂದು ತೊಟ್ಟು ನೀರೂ ನಾನು ಪ್ರೊಡಕ್ಷನ್ ಕಡೆಯಿಂದ ಪಡೆದಿಲ್ಲ ಎಂದು ಅನಿರುದ್ಧ್ ಹೇಳಿದ್ದರು. ಹಾಗಾದರೆ ಕಲಾವಿದರ ಊಟೋಪಚಾರ ನೋಡಿಕೊಳ್ಳುವವರು ಯಾರು ಎಂಬ ಪ್ರಶ್ನೆ ನಿಮಗೆ ಬರಬಹುದು. ಸಾಮಾನ್ಯವಾಗಿ ಶೂಟಿಂಗ್ ಸೆಟ್ ನಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ಸಂಜೆ ತಿಂಡಿ ವ್ಯವಸ್ಥೆ ಮಾಡಿರುತ್ತಾರೆ. ಅದು ಪ್ರೊಡಕ್ಷನ್ ಹೌಸ್ ವತಿಯಿಂದ ಏರ್ಪಾಟಾಗಿರುತ್ತದೆ. ಆ ಆಹಾರದ ಗುಣಮಟ್ಟ ಆಯಾ ಧಾರವಾಹಿಯ ಪ್ರೊಡಕ್ಷನ್ ಹೌಸ್ ಎಷ್ಟು ದುಡ್ಡು ಖರ್ಚು ಮಾಡುತ್ತದೋ ಅದರ ಮೇಲೆ ನಿರ್ಧರಿತವಾಗಿರುತ್ತದೆ! ಒಂದು ವೇಳೆ ಪ್ರೊಡಕ್ಷನ್ ಹೌಸ್ ನೀಡುವ ಊಟ ಬೇಡ ಎಂದಾದರೆ ನೀವೇ ಊಟ ತಂದುಕೊಳ್ಳಬಹುದು.

ಕಲಾವಿದರಿಗೆ ಸಮಸ್ಯೆಯಾದಾಗ ಯಾರು ಜವಾಬ್ಧಾರಿ?: ನಿರ್ಮಾಪಕರ ಕಷ್ಟಗಳಿಗೆ ಜೊತೆಯಾಗಲು ಇತ್ತೀಚೆಗಷ್ಟೇ ನಿರ್ಮಾಪಕರ ಸಂಘ ಎಂದು ಹುಟ್ಟಿಕೊಂಡಿದೆ. ಇದರಲ್ಲಿ ಎಲ್ಲಾ ಚಾನೆಲ್ ನ ಧಾರವಾಹಿ, ರಿಯಾಲಿಟಿ ಶೋಗಳ ನಿರ್ಮಾಪಕರು ಸೇರಿದ್ದಾರೆ. ಆದರೆ ಕಿರುತೆರೆಯಲ್ಲಿ ಕಲಾವಿದರಿಗೆ ಇದುವರೆಗೆ ಯಾವುದೇ ಅಧಿಕೃತ ಸಂಘಟನೆಯಿಲ್ಲ. ಯಾವುದೇ ರೀತಿಯ ದೂರು-ದುಮ್ಮಾನಗಳಿಗೆ ಕಲಾವಿದರು ಟಿವಿ ಅಸೋಸಿಯೇಷನ್ ಮೆಟ್ಟಿಲೇರಬೇಕು. ಆದರೆ ವಾಸ್ತವವಾಗಿ ನೋಡುವುದಾದರೆ ಯಾವುದೋ ಒಬ್ಬ ಕಲಾವಿದ ತನ್ನ ತಂಡದ ವಿರುದ್ಧ ಅಸೋಸಿಯೇಷನ್ ಗೆ ದೂರು ನೀಡಿದ ಎಂದಿಟ್ಟುಕೊಳ್ಳಿ, ಮುಂದೆ ಅವರು ಅಘೋಷಿತವಾಗಿ ಬ್ಯಾನ್ ಆಗಿ ಬಿಡುತ್ತಾರೆ. ಅವರಿಗೆ ಇನ್ಯಾವುದೋ ಕಾರಣ ನೀಡಿ ಅವಕಾಶ ವಂಚಿತರಾಗಿಸಬಹುದು.

ಶೂಟಿಂಗ್ ಸಮಯದಲ್ಲಿ ಏನೆಲ್ಲಾ ಕಷ್ಟಗಳಿರುತ್ತವೆ?: ಕನ್ನಡ ಧಾರವಾಹಿಗಳಲ್ಲಿ ಇನ್ನೂ ಕ್ಯಾರಾವಾನ್ ಸಿಸ್ಟಂ ಬಂದಿಲ್ಲ. ಶೂಟಿಂಗ್ ವೇಳೆ ಅಕ್ಕಪಕ್ಕದ ಮನೆಯನ್ನೇ ಬುಕ್ ಮಾಡಿಕೊಂಡು ಡ್ರೆಸ್ ಬದಲಾಯಿಸಲು ಹೇಳುತ್ತಾರೆ. ಹೊರಾಂಗಣ ಚಿತ್ರೀಕರಣ ವೇಳೆ ಅಭಿಮಾನಿಗಳ ಮನೆಯಲ್ಲೇ ಬಟ್ಟೆ ಬದಲಾಯಿಸುವ ಪರಿಸ್ಥಿತಿ ಬರುವುದೂ ಇದೆ. ಕೆಲವೊಮ್ಮೆ ಇಂತಹ ಸಂದರ್ಭದಲ್ಲಿ ಸಾಕಷ್ಟು ಮುಜುಗರಕ್ಕೊಳಗಾಗಬೇಕಾಗುತ್ತದೆ. ತಡರಾತ್ರಿ ಶೂಟಿಂಗ್ ಎಂದಾದರೆ ಕಲಾವಿದರನ್ನು ಮನೆಗೆ ತಲುಪಿಸುವ ವ್ಯವಸ್ಥೆಯಿರುತ್ತದೆ.

ಕಲಾವಿದರ ಬದುಕು ಮೇಲ್ನೋಟಕ್ಕಷ್ಟೇ ಚಂದ. ಒಳಗೊಳಗೆ ಅವರಿಗೆ ಸಾಕಷ್ಟು ಸಮಸ್ಯೆಗಳಿವೆ. ಆದರೆ ಅದನ್ನು ಹೇಳಿಕೊಳ್ಳಲು ಸೂಕ್ತ ವೇದಿಕೆಯಿಲ್ಲ. ಅವರ ಕೆಲಸಕ್ಕೆ ಭದ್ರತೆಯೂ ಇಲ್ಲ. ಒಂದೇ ಧಾರವಾಹಿಯನ್ನು ನಂಬಿ ಕೂರುವಂತಿಲ್ಲ. ಇನ್ನೊಂದು ಧಾರವಾಹಿ ಒಪ್ಪಿಕೊಂಡರೆ ಡೇಟ್ ಕ್ಲ್ಯಾಶ್ ಆಗಿ ಮನಸ್ತಾಪಗಳು ಸಹಜ. ಹೀಗಾಗಿ ಕಿರುತೆರೆಯಲ್ಲದೇ ಬೇರೊಂದು ಆದಾಯದ ಮೂಲ ಹುಡುಕಿಕೊಳ‍್ಳುವುದು ಮುಖ್ಯವಾಗುತ್ತದೆ. ಇನ್ನೊಬ್ಬರ ಸಂಭಾವನೆ ಬಗ್ಗೆ ತಲೆಕೆಡಿಸಿಕೊಳ್ಳದೇ, ಧಾರವಾಹಿಯಲ್ಲಿ ಅತಿಯಾಗಿ ಇನ್ ವಾಲ್ವ್ ಆಗದೇ ತಮಗೆ ಹೇಳಿದಷ್ಟೇ ಕೆಲಸ ಮಾಡುತ್ತಾ, ನಮ್ಮದನ್ನಷ್ಟೇ ನೋಡಿಕೊಂಡು ಹೋದರೆ ಇಲ್ಲಿ ಬದುಕಬಹುದು. ಅಂತಿಮವಾಗಿ, ಒಬ್ಬ ನಟನೇ ನಿರ್ಮಾಪಕನಾದರೂ, ನಿರ್ಮಾಪಕ ನಿರ್ಮಾಪಕನಾಗಿಯೇ ಇರುತ್ತಾನೆ, ಕಲಾವಿದ ಕಲಾವಿದನಾಗಿಯೇ ಇರುತ್ತಾನೆ ಎನ್ನುವುದನ್ನು ಇಲ್ಲಿ ಮರೆಯಬಾರದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮೈಕೊರೆಯುವ ಚಳಿಗಾಗಿ ಹೆಚ್ಚುವರಿ ಕಂಬಳಿಗೆ ದರ್ಶನ್‌ ಬೇಡಿಕೆ: ಅಸ್ತು ಎಂದ ಕೋರ್ಟ್‌

ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನದ್ದಲ್ಲ: ಪುರುಷೋತ್ತಮ ಬಿಳಿಮಲೆ

ಧನ್ವೀರ್ ಹೇಳಿಕೆಯಿಂದ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಷ್ಟ

ಮುಂದಿನ ಸುದ್ದಿ
Show comments