Select Your Language

Notifications

webdunia
webdunia
webdunia
webdunia

ಬೆಚ್ಚಿಬೀಳಿಸಲು ಬರುತ್ತಿದೆ ಹೊಸಬರ ಹಾರರ್ ’ಕೋಮಲಿ’

ಬೆಚ್ಚಿಬೀಳಿಸಲು ಬರುತ್ತಿದೆ ಹೊಸಬರ ಹಾರರ್ ’ಕೋಮಲಿ’
Bangalore , ಬುಧವಾರ, 22 ಫೆಬ್ರವರಿ 2017 (13:13 IST)
ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳ ಪ್ರಯತ್ನಗಳೇ ಹೆಚ್ಚಾಗಿ ಸದ್ದುಮಾಡುತ್ತಿವೆ. ಅದೇ ರೀತಿ ಇಲ್ಲಿ ವಿಕಾಸ್ ಮದಕರಿ ಎಂಬ ಮತ್ತೊಬ್ಬ ಯುವ ನಿರ್ದೇಶಕನ 
ಆಗಮನವಾಗಿದೆ. ಕೋಮಲಿ ಎಂಬ ವಿನೂತನ ಶೀರ್ಷಿಕೆಯುಳ್ಳ ಹಾರರ್-ಥ್ರಿಲ್ಲರ್ ಕಥನದ ಮೂಲಕ ತನ್ನ ಮೊದಲ ಪ್ರಯತ್ನವನ್ನು ಕನ್ನಡಿಗರ ಮುಂದೆ ತರಲು ಅವರು ಅಣಿಯಾಗಿದ್ದಾರೆ. 
 
ಶ್ರೀ ಅಂಬಾಭವಾನಿ ಮೂವಿಮೇಕರ್ಸ್ ಸಂಸ್ಥೆಯ ಮೂಲಕ ಪವನ್‍ಕುಮಾರ್ ಗೌಡ ಹಾಗೂ ಟಿ.ವರದಾ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ದೇವ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಹಿಂದೆ ಕೋಲಾಹಲ ಚಿತ್ರಕ್ಕೆ ನಾಯಕನಾಗಿ ಬಣ್ಣ ಹಚ್ಚಿದ್ದ ದೇವ್‍ಗೆ ಇದು ಎರಡನೇ ಪ್ರಯತ್ನ. ಇನ್ನು ಚಿತ್ರದ ನಾಯಕಿಯಾಗಿ ಹೈದರಾಬಾದ್ ಮೂಲದ ಕಾಜಲ್ ಅವರು ಕಾಣಿಸಿಕೊಂಡಿದ್ದು, ಇದು ಇವರ ಮೊದಲ ಚಿತ್ರ. 
 
ತನ್ನ ಪ್ರಥಮ ಚಿತ್ರದಲ್ಲೇ ಒಬ್ಬ ಹಳ್ಳಿ ಹುಡುಗಿಯ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ.  ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಟೌನ್‍ಹಾಲ್ ಬಳಿಯಿರುವ ಸಂಸ ಬಯಲು 
ರಂಗಮಂದಿರದಲ್ಲಿ ನೆರವೇರಿತು. ಸಮಾರಂಭದಲ್ಲಿ ಅಂಧ ಮಕ್ಕಳ ಕೈಲಿ ಈ ಚಿತ್ರದ ಹಾಡುಗಳ ಧ್ವನಿಸುರುಳಿಗಳನ್ನು ಬಿಡುಗಡೆಗೊಳಿಸಲಾಯಿತು. 
 
ಸಮಾರಂಭದಲ್ಲಿ ಚಿತ್ರದ ಹಾಡುಗಳ ಗಾಯನ ಹಾಗೂ ನೃತ್ಯ ಪ್ರದರ್ಶನ ಕೂಡ ನಡೆಯಿತು. ಸಮಾರಂಭಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಟಿಯಲ್ಲಿ ಚಿತ್ರದ ನಿರ್ದೇಶಕರು ತಮ್ಮ ಚಿತ್ರದ ಬಗ್ಗೆ ಒಂದಷ್ಟು ವಿವರಗಳನ್ನು ಪತ್ರಕರ್ತರೊಂದಿಗೆ ಹಂಚಿಕೊಂಡರು. ಹಿಂದೆ ಭವಾನಿಶಂಕರ್ ಎಂಬ ನಿರ್ದೇಶಕರ ಬಳಿ ಕೆಲಸ ಮಾಡಿದ್ದಲ್ಲದೆ, ಒಂದೆರಡು ಚಿತ್ರಗಳಲ್ಲಿ ಸಣ್ಣ, ಪುಟ್ಟ ಪಾತ್ರಗಳನ್ನು ಕೂಡ ಮಾಡಿದ್ದಾರೆ. ಆದರೆ ನಟನೆಗೆ ಅಷ್ಟಾಗಿ ಹೊಂದಿಕೊಳ್ಳದ ವಿಕಾಸ್ ಮದಕರಿ,  ನಿರ್ದೇಶನ ಮಾಡುವ ಪ್ರಯತ್ನವನ್ನೇ ಮುಂದುವರೆಸಿದ್ದಾರೆ. 
 
ಆಗ ಮಾಡಿಕೊಂಡ ಕಥೆಯೇ ಕೋಮಲಿ. ಕನ್ನಡ ಹಾಗೂ ತೆಲುಗು ಸೇರಿ 2 ಬಾಷೆಗಳಲ್ಲಿ ಏಕಕಾಲಕ್ಕೆ ಈ ಚಿತ್ರವನ್ನು ನಿರ್ಮಿಸಲಾಗಿದೆ. ನಾಯಕಿಯ ಮೇಲೆ ಕೇಂದ್ರೀಕೃತವಾದ ಕಥಾನಕವನ್ನು ಪವನ್‍ಕುಮಾರ್ ಗೌಡ ರಚಿಸಿದ್ದಾರೆ. ನಾನಿ ಖ್ಯಾತಿಯ ಕಾರ್ತಿಕ್ ಗೌಡ ಚಿತ್ರದ ಸಂಭಾಷಣೆಗಳನ್ನು ರಚಿಸಿದ್ದಾರೆ. ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು, ಎಲ್ಲಾ ಹಾಡುಗಳಿಗೆ ವೀರು-ಸಿದ್ದು ಸಾಹಿತ್ಯ ರಚಿಸಿದ್ದಾರೆ. ಕಬೀರ್ ರಫಿ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುವುದರೊಂದಿಗೆ ಚಿತ್ರದ  ರೀರೆಕಾರ್ಡಿಂಗ್ ಕೂಡ ಮಾಡಿದ್ದಾರೆ. 
 
ಹಳ್ಳಿಯ ಇಬ್ಬರು ಪ್ರೇಮಿಗಳ ಮಧ್ಯೆ ಏನೋ ಒಂದು ಕಾರಣಕ್ಕೆ ತಪ್ಪು ಕಲ್ಪನೆ ಮೂಡುತ್ತದೆ.  ಅದನ್ನು ನಾವೇ ಸರಿಪಡಿಸಿಕೊಳ್ಳೋಣ ಎಂದು ಅವರಿಬ್ಬರೂ ಸೇರಿ ಪ್ರಯಾಣ ಹೊರಡುತ್ತಾರೆ. ಅಕಸ್ಮಾತ್  ಕಾಡೊಂದರಲ್ಲಿ  ಸಿಕ್ಕಿಹಾಕಿಕೊಳ್ಳುತ್ತಾರೆ. ಅಲ್ಲಿದ್ದ ಎರಡು ಅತೃಪ್ತ ಆತ್ಮಗಳಿಂದ ಅನೇಕ ತೊಂದರೆಗಳಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ನಂತರ ಮುಂದೇನಾಯಿತು ಎಂಬ ಪ್ರಶ್ನೆಗೆ ಚಿತ್ರದ ಕ್ಲೈಮ್ಯಾಕ್ಸ್‍ನಲ್ಲಿ ನಿರ್ದೇಶಕರು ಕುತೂಹಲಕರವಾದ ಅಂತ್ಯವನ್ನು ಕೊಟ್ಟಿದ್ದಾರೆ. 
 
ಬೆಂಗಳೂರು ಸುತ್ತಮುತ್ತ ಹಾಗೂ ಹೈದಾಬಾದ್‍ನಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿದೆ. ಚಿತ್ರದ ಉಳಿದ ತಾರಾಬಳಗದಲ್ಲಿ ಕಾರ್ತಿಕ್, ಸಾಯಿಕೃಷ್ಣ, ಸಂಜನಾ, ಸಿರಿಶಾ, ಕವಿತಾಶ್ರೀ ಹಾಗೂ ಕಮಲಾಕರರಾವ್ ನಟಿಸಿದ್ದಾರೆ. ಧನುಷ್ ಈ ಚಿತ್ರಕ್ಕೆ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ಮುಂದಿನ ತಿಂಗಳು ಅಥವಾ ಐಪಿಎಲ್ ಕ್ರಿಕೆಟ್ ಮುಗಿದ ನಂತರ ಚಿತ್ರವನ್ನು ತೆರೆಗೆ ತರುವ ಉದ್ದೇಶ ಕೋಮಲಿ ಚಿತ್ರತಂಡಕ್ಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಗು ದತ್ತು ತೆಗೆದುಕೊಳ್ಳಲು ಮುಂದಾದ ಮನೀಷಾ ಕೋಯಿರಾಲ