Select Your Language

Notifications

webdunia
webdunia
webdunia
webdunia

ಮಗು ದತ್ತು ತೆಗೆದುಕೊಳ್ಳಲು ಮುಂದಾದ ಮನೀಷಾ ಕೋಯಿರಾಲ

ಮಗು ದತ್ತು ತೆಗೆದುಕೊಳ್ಳಲು ಮುಂದಾದ ಮನೀಷಾ ಕೋಯಿರಾಲ
Mumbai , ಬುಧವಾರ, 22 ಫೆಬ್ರವರಿ 2017 (12:05 IST)
ಬಾಲಿವುಡ್ ನಟಿ ಮನಿಷಾ ಕೋಯಿರಾಲಾ ಹಲವಾರು ಪಾತ್ರಗಳ ಮೂಲಕ ಅಭಿಮಾನಿಗಳ ಗುಂಡೆಯಲ್ಲಿ ನೆಲೆನಿಂತವರು. ಸೌದಾಗರ್, 1942 ಎ ಲವ್ ಸ್ಟೋರಿ, ಬಾಂಬೆ, ಅಕೇಲೆ ಹಮ್ ಅಕೇಲೆ ತುಮ್ ನಂತಹ ಚಿತ್ರಗಳಲ್ಲಿ ತಮ್ಮ ಅಭಿನಯ ಸಾಮರ್ಥ್ಯ ಮೆರೆದವರು. 
 
ಈಗ ವಯಸ್ಸಾಗಿರುವ ಕಾರಣ ಹಾಗೂ ಅನಾರೋಗ್ಯ ಸಮಸ್ಯೆಯಿಂದ ಅವರು ಚಿತ್ರರಂಗದಿಂದ ದೂರ ಸರಿದಿದ್ದರೂ ಆಗಾಗ ಪೋಷಕ ಪಾತ್ರಗಳನ್ನು ಒಲ್ಲೆ ಎನ್ನುತ್ತಿಲ್ಲ. ಸಂಜಯ್ ದತ್ ಜೀವನ ಕಥೆಯಾಧಾರಿತ ಚಿತ್ರದಲ್ಲಿ ರಣ್‍ಬೀರ್ ಕಪೂರ್ ತಾಯಿಯಾಗಿ ಪಾತ್ರ ಪೋಷಿಸುತ್ತಿದ್ದಾರೆ ಮನೀಷಾ.
 
ನಿಜಜೀವನದಲ್ಲಿ ತಾಯಿಯಾಗದಿದ್ದರೂ, ಹೆಣ್ಣುಮಗುವೊಂದನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ವಿಷಯವನ್ನು ಮಾಧ್ಯಮಗಳ ಜತೆಗೆ ಮನೀಷಾ ಕೋಯಿರಾಲಾ ಹಂಚಿಕೊಂಡಿದ್ದಾರೆ ಸಹ. ಅಂಡಾಶಯದ ಕ್ಯಾನ್ಸರ್‌ಗೆ ಒಳಗಾಗಿದ್ದ ಮನೀಷಾ ಕೋಯಿರಾಲಾ, ಐದು ವರ್ಷಗಳ ಕಾಲ ಅದರಿಂದ ನರಳಿದ್ದರು. ಮಗುವನ್ನು ದತ್ತು ತೆಗೆದುಕೊಳ್ಳುತ್ತಿರುವ ಬಗ್ಗೆ ಅವರು ತುಂಬಾ ಖುಷಿಯಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೋಲ್ಡ್ ಅವತಾರದಲ್ಲಿ ನಟಿ ಸೀರತ್ ಕಪೂರ್