Webdunia - Bharat's app for daily news and videos

Install App

ಜಿಎಸ್ ಟಿ ದರ ಕಡಿತವಾದ್ರೂ ಕನ್ನಡ ಸಿನಿಮಾ ವೀಕ್ಷಕರಿಗೆ ಲಾಭವಿಲ್ಲ

Krishnaveni K
ಗುರುವಾರ, 4 ಸೆಪ್ಟಂಬರ್ 2025 (14:13 IST)
Photo Credit: Instagram
ಬೆಂಗಳೂರು: ಕೇಂದ್ರ ಸರ್ಕಾರ ಇದೀಗ ಹಲವು ವಸ್ತುಗಳ ಮೇಲಿನ ಜಿಎಸ್ ಟಿ ದರ ಕಡಿತಗೊಳಿಸಿ ಜನತೆಗೆ ಉಡುಗೊರೆ ನೀಡಿದೆ. ಆದರೆ ಇದು ಕನ್ನಡ ಸಿನಿಮಾ ವೀಕ್ಷಕರಿಗೆ ಪ್ರಯೋಜನವಾಗಲ್ಲ. ಯಾಕೆ ಗೊತ್ತಾ?

ಜಿಎಸ್ ಟಿ ಸಮಿತಿ ಸಭೆಯಲ್ಲಿ ಜಿಎಸ್ ಟಿ ಸ್ಲ್ಯಾಬ್ ಗಳನ್ನು ಎರಡಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ 12% ಮತ್ತು 28% ಸ್ಲ್ಯಾಬ್ ರದ್ದಾಗಿದೆ. ಇದರ ಪರಿಣಾಮ ಇದರಡಿಯಲ್ಲಿ ಬರುವ ವಸ್ತುಗಳ ಬೆಲೆ ಇನ್ನು ಕೊಂಚ ಕಡಿತವಾಗಲಿದೆ.

ಸಿನಿಮಾ ರಂಗವೂ ಜಿಎಸ್ ಟಿ ಕಡಿತಕ್ಕೆ ಮನವಿ ಮಾಡಿತ್ತು. ಅದರಂತೆ ಸಿನಿಮಾ ಟಿಕೆಟ್ ಗಳ ಮೇಲಿನ ಜಿಎಸ್ ಟಿ ದರದಲ್ಲಿ ಬದಲಾವಣೆಯಾಗಿದೆ. ಆದರೆ ಇದರಿಂದ ಕರ್ನಾಟಕದ ಅಥವಾ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಲಾಭವಾಗುವ ಸಾಧ್ಯತೆಯಿಲ್ಲ.

ಇದೀಗ 100 ರೂ. ಒಳಗಿನ ಸಿನಿಮಾ ಟಿಕೆಟ್ ದರದ ಜಿಎಸ್ ಟಿಯನ್ನು ಈ ಹಿಂದೆ ಇದ್ದ ಶೇ.12 ರಿಂದ ಶೇ.5 ಕ್ಕೆ ಇಳಿಕೆ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ 100 ರೂ. ಒಳಗೆ ಟಿಕೆಟ್ ದರವಿರುವ ಥಿಯೇಟರ್ ಗಳು ತೀರಾ ವಿರಳ. ಹೆಚ್ಚಾಗಿ ತಮಿಳುನಾಡು, ಕೇರಳ, ಆಂಧ್ರದಲ್ಲಿ ಇಂತಹ ಥಿಯೇಟರ್ ಗಳಿವೆ. ಹೀಗಾಗಿ ಆ ರಾಜ್ಯಗಳಿಗೆ ಇದರಿಂದ ಲಾಭವಾಗಲಿದೆ. ಅದನ್ನು ಹೊರತುಪಡಿಸಿದರೆ 100 ರೂ. ಗಿಂತ ಮೇಲ್ಪಟ್ಟ ಸಿನಿಮಾ ಟಿಕೆಟ್ ದರದ ಮೇಲಿನ ಶೇ.18 ರಷ್ಟು ಜಿಎಸ್ ಟಿ ದರ ಎಂದಿನಂತೇ ಮುಂದುವರಿಯಲಿದೆ. ಹೀಗಾಗಿ ಇದರ ಲಾಭ ಕರ್ನಾಟಕದ  ವೀಕ್ಷಕರಿಗೆ ಆಗದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜಿಎಸ್ ಟಿ ದರ ಕಡಿತವಾದ್ರೂ ಕನ್ನಡ ಸಿನಿಮಾ ವೀಕ್ಷಕರಿಗೆ ಲಾಭವಿಲ್ಲ

ನಾನು ಸ್ವಲ್ಪ ಸ್ಲೋ ಎನಿಸಬಹುದು ಆದ್ರೆ.. ರಕ್ಷಿತ್ ಶೆಟ್ಟಿ ಹೇಳಿದ ಮಾತು ನೋಡಿ video

₹69ಕೋಟಿ ವಂಚನೆ ಬೆನ್ನಲ್ಲೇ ನಟಿ ಶಿಲ್ಪಾ ಶೆಟ್ಟಿ ಮಾಲೀಕತ್ವದ ರೆಸ್ಟೋರೆಂಟ್‌ ಇದೇನಾಯಿತು

ಹ್ರಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಹೃದಯವಂತಿಕೆಗೆ ಮನಸೋತ ಪವನ್ ಕಲ್ಯಾಣ್

ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಭಾರತಿ ವಿಷ್ಣುವರ್ಧನ್ ಹೇಳಿದ್ದೇನು

ಮುಂದಿನ ಸುದ್ದಿ
Show comments