Select Your Language

Notifications

webdunia
webdunia
webdunia
webdunia

ಕನ್ನಡ ಡಬ್ಬಿಂಗ್ ಚಿತ್ರ ’ಸತ್ಯದೇವ್ ಐಪಿಎಸ್’ ರಾಜ್ಯದಾದ್ಯಂತ ರಿಲೀಸ್?

ಕನ್ನಡ ಡಬ್ಬಿಂಗ್ ಚಿತ್ರ ’ಸತ್ಯದೇವ್ ಐಪಿಎಸ್’ ರಾಜ್ಯದಾದ್ಯಂತ ರಿಲೀಸ್?
Bangalore , ಗುರುವಾರ, 2 ಮಾರ್ಚ್ 2017 (21:04 IST)
ಸ್ಯಾಂಡಲ್‌ವುಡ್‍ನಲ್ಲಿ ಡಬ್ಬಿಂಗ್ ಚಿತ್ರಗಳನ್ನು ಬ್ಯಾನ್ ಮಾಡಿದ್ದರೂ ತಮಿಳಿನ ’ಎನ್ನೈ ಅರಿಂಧಾಲ್’ ಕನ್ನಡ ಆವೃತ್ತಿ ’ಸತ್ಯದೇವ್ ಐಪಿಎಸ್’ ರಾಜ್ಯಾದ್ಯಂತ ತೆರೆಕಾಣಲು (ಮಾ.3) ಸಿದ್ಧವಾಗಿದೆ. ಸುಮಾರು 60 ಚಿತ್ರಮಂದಿರಗಳಲ್ಲಿ ಈ ಡಬ್ಬಿಂಗ್ ಚಿತ್ರ ಬಿಡುಗಡೆಯಾಗುತ್ತಿದೆ.
 
ಈ ಸಿನಿಮಾವನ್ನು ಬಿಡುಗಡೆ ಮಾಡುತ್ತಿರುವವರು ಕೃಷ್ಣೇಗೌಡ. ಇವರು ಈ ಹಿಂದೆ ಡಬ್ಬಿಂಗ್ ಚಲನಚಿತ್ರ ವಾಣಿಜ್ಯ ಮಂಡಳಿ ಎಂಬ ಸಂಸ್ಥೆ ಹುಟ್ಟುಹಾಕಿದ್ದರು. ಈಗ ಸತ್ಯದೇವ್ ಐಪಿಎಸ್ ಚಿತ್ರವನ್ನು ಅವರೇ ಬಿಡುಗಡೆ ಮಾಡುತ್ತಿದ್ದು, ಈ ಚಿತ್ರ ಬೆಂಗಳೂರು ಬಿಟ್ಟು ಬೇರೆ ಜಿಲ್ಲೆಗಳಲ್ಲಿ ತೆರೆಕಾಣುತ್ತಿದೆ.
 
ಏತನ್ಮಧ್ಯೆ ಆರಂಭಮ್ ಎಂಬ ಸಿನಿಮಾ ಸಹ ಕನ್ನಡಕ್ಕೆ ಡಬ್ ಆಗಿದ್ದು ಸೆನ್ಸಾರ್ ಮಂಡಳಿ ಮುಂದಿದೆ. ’ಬಾಹುಬಲಿ 2- ಮುಕ್ತಾಯ’ವನ್ನೂ ಕನ್ನಡಕ್ಕೆ ತರಲಾಗುತ್ತಿದ್ದು, ಈ ಬಗ್ಗೆ ನಿರ್ದೇಶಕ ಎಸ್ ಎಸ್ ರಾಜಮೌಳಿ ಜತೆ ಮಾತುಕತೆ ಮಾಡುವುದಾಗಿ ತಿಳಿಸಿದ್ದಾರೆ ಕೃಷ್ಣೇಗೌಡ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ದೇಶಕ ಭಟ್‌ ಕುಟುಂಬಕ್ಕೆ ಜೀವ ಬೆದರಿಕೆ ಕರೆ