Select Your Language

Notifications

webdunia
webdunia
webdunia
webdunia

ನಿರ್ದೇಶಕ ಭಟ್‌ ಕುಟುಂಬಕ್ಕೆ ಜೀವ ಬೆದರಿಕೆ ಕರೆ

ನಿರ್ದೇಶಕ ಭಟ್‌ ಕುಟುಂಬಕ್ಕೆ ಜೀವ ಬೆದರಿಕೆ ಕರೆ
Mumbai , ಗುರುವಾರ, 2 ಮಾರ್ಚ್ 2017 (17:50 IST)
ಬಾಲಿವುಡ್ ಪ್ರಮುಖ ನಟಿ ಆಲಿಯಾ ಭಟ್ ಕುಟುಂಬವನ್ನು ನಿರ್ನಾಮ ಮಾಡುತ್ತೇವೆಂದು ಅಪರಿಚಿತ ವ್ಯಕ್ತಿಯೊಬ್ಬ ಬೆದರಿಸಿದ್ದಾನೆ. ಆಲಿಯಾ ಭಟ್ ತಂದೆ, ನಿರ್ಮಾಪಕ ಮಹೇಶ್ ಭಟ್‌ಗೆ ದೂರವಾಣಿ ಕರೆ ಮಾಡಿ ರೂ.50 ಲಕ್ಷ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.
 
ಒಂದು ವೇಳೆ ದುಡ್ಡು ಕೊಡದಿದ್ದರೆ ಮಗಳು ಆಲಿಯಾ ಭಟ್, ಪತ್ನಿ ಸೋನಿ ರಜ್ದಾನ್‍ರನ್ನು ಸಾಯಿಸುವುದಾಗಿ ಬೆದರಿಸಲಾಗಿದೆ. ಈ ಸಂಬಂಧ ಮಹೇಶ್ ಭಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣವನ್ನು ಮುಂಬೈ ಪೊಲೀಸರು ಸುಲಿಗೆ ವಿರೋಧಿ ಘಟಕ (ಎಎನ್‌ಸಿ)ಗೆ ಹಸ್ತಂತರಿಸಿದ್ದಾರೆ. 
 
ಈ ಘಟನೆ ಬಗ್ಗೆ ಪೊಲೀಸರು ಮಾತನಾಡುತ್ತಾ, ಅಪರಿಚಿತ ವ್ಯಕ್ತಿ ಮಹೇಶ್ ಭಟ್‌ಗೆ ಫೋನ್ ಮಾಡಿ ರೂ.50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ. ಮೊದಲು ಈ ಬೆದರಿಕೆಯನ್ನು ಅವರು ಗಂಭೀರವಾಗಿ ಪರಿಗಣಿಸಿಲ್ಲ. ಯಾರೋ ಸುಮ್ಮನೆ ಮಾಡುತ್ತಿದ್ದಾರೆ ಎಂದುಕೊಂಡಿದ್ದರು. ಆದರೆ ವಾಟ್ಸಾಪ್ ಸಂದೇಶಗಳ ಮೂಲಕ ಮತ್ತೆ ಬೆದರಿಕೆ ಬಂದ ಕಾರಣ ಅವರು ಪೊಲೀಸರ ಮೊರೆ ಹೋಗಿದ್ದಾರೆ. 
 
ತಾವು ಬೇಡಿಕೆ ಇಟ್ಟಿರುವ ಹಣವನ್ನು ಲಖನೌ ಬ್ಯಾಂಕ್ ಶಾಖೆಯಲ್ಲಿ ತುಂಬಬೇಕೆಂದು ಹೇಳಿದ್ದಾಗಿ ಮಹೇಶ್ ಭಟ್ ತಿಳಿಸಿದ್ದಾರೆ. ಒಂದು ವೇಳೆ ಹಣ ತುಂಬದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದಾರೆ. ಫೆ.26ರ ರಾತ್ರಿ ತಮಗೆ ಬೆದರಿಕೆ ಕರೆ ಬಂದಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. 
 
ಮಹೇಶ್ ಭಟ್ ಕುಟುಂಬಕ್ಕೆ ಬೆದರಿಕೆ ಬರುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ ಇದೇ ರೀತಿ ಬೆದರಿಸಿದ್ದ 13 ಮಂದಿ ಗ್ಯಾಂಗನ್ನು ಪೊಲೀಸರು 2014ರಲ್ಲಿ ಬಂಧಿಸಿದ್ದರು. ಸೆಕ್ಷನ್ 387ರಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಭಟ್ ಕುಟುಂಬಕ್ಕೆ ಭದ್ರತೆ ಹೆಚ್ಚಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಆಸ್ತಿ ಅವರಿಬ್ಬರಿಗೂ ಸಮಾನವಾಗಿ ಸೇರುತ್ತೆ: ಬಿಗ್ ಬಿ