ರಿಯಲ್ ಲೈಫ್‌ನಲ್ಲಿ ಒಂದಾದ ಕನ್ನಡದ ರೀಲ್ಸ್ ಜೋಡಿ, ಜಿಮ್‌ ಟ್ರೈನರ್ ಕೈಹಿಡಿದ ನಟಿ ರಜಿನಿ

Sampriya
ಸೋಮವಾರ, 10 ನವೆಂಬರ್ 2025 (13:00 IST)
Photo Credit X
ಬೆಂಗಳೂರು: ಅಮೃತವರ್ಷಿನಿ ಸೀರಿಯಲ್ ಖ್ಯಾತಿಯ ನಟಿ ರಜಿನಿ ಅವರು ಇಂದು ತಮ್ಮ ಬಹುಕಾಲದ ಗೆಳೆಯನ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

ಜಿಮ್ ಟ್ರೈನರ್‌ ಅರುಣ್ ಅವರನ್ನು ನಟಿ ರಜಿನಿ ಅವರು ಮದುವೆಯಾದರು. 

ರೀಲ್ಸ್ ಮೂಲಕ ತುಂಬಾನೇ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದ ಈ ಜೋಡಿ, ಪ್ರೀತಿಸುತ್ತಿದ್ದರೆಂಬ ವದಂತಿಯಿತ್ತು. ಈ ವಿಚಾರವನ್ನು ರಜಿನಿ ಅವರು ನಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಎಂದು ಹೇಳಿದ್ದರು. ರೂಮರ್ಸ್‌ಗಳ ಮಧ್ಯೆಯೇ ಈ ಜೋಡಿ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 


2012ರಲ್ಲಿ ಪ್ರಸಾರಗೊಂಡ ಅಮೃತವರ್ಷಿಣಿ ಸೀರಿಯಲ್‌ನಲ್ಲಿ ಅಮೃತಾ ಪಾತ್ರಕ್ಕೆ ರಜಿನಿ ಜೀವ ತುಂಬಿದ್ದರು. ಈ ಪಾತ್ರ ಅವರಿಗೆ ತುಂಬಾನೇ ಜನಮನ್ನಣೆ ತಂದುಕೊಟ್ಟಿತು. ಆ ಬಳಿಕ ಸೀರಿಯಲ್‌ನಿಂದ ದೂರ ಉಳಿದಿದ್ದ ರಜಿನಿ ಅವರು ಈಚೆಗೆ ಮತ್ತೇ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದರು. 

ಕಳೆದ ಕೆಲ ವರ್ಷಗಳಿಂದ ರಜಿನಿ ಅವರು ಅರುಣ್ ಜತೆಗೆ ಸಾಕಾಷ್ಟು ತಮಾಷೆ ರೀಲ್ಸ್‌ಗಳನ್ನು ಮಾಡಿ, ಸಾಕಷ್ಟು ವೀವ್ಸ್‌ ಅನ್ನು ಪಡೆದಿದ್ದಾರೆ. ಈ ಜೋಡಿ ನಟನೆಗೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗುತ್ತಿತ್ತು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈಲಿನಲ್ಲಿ ದರ್ಶನ್‌ ಸಂಕಷ್ಟ ನೋಡಲಾಗದೆ ಧನ್ವೀರ್ ಈ ರೀತಿ ಮಾಡಿದ್ರಾ

ಉಗ್ರರಿಗೆ, ವಿಕೃತ ಕಾಮಿಗೆ ಪರಪ್ಪನ ಅಗ್ರಹಾರ ಜೈಲಲ್ಲಿ ವಿಐಪಿ ಟ್ರೀಟ್ಮೆಂಟ್: ದರ್ಶನ್ ಫ್ಯಾನ್ಸ್ ಆಕ್ರೋಶ

ಬಿಗ್‌ಬಾಸ್‌ನಿಂದ ಬಂದ್ಮೇಲೆ ಹೊಸ ಅಧ್ಯಾಯ ಶುರು ಮಾಡಿದ ಉಗ್ರಂ ಮಂಜು

ಸಮಂತಾ ಲವ್‌ನಲ್ಲಿ ಬಿದ್ದಿರುವುದು ಪಕ್ಕಾ ಎಂದ ಅಭಿಮಾನಿಗಳು

ಇದು, ಇದು actually ಚೆನ್ನಾಗಿರೋದು, ಕಿಚ್ಚ ಬಿಚ್ಚಿಟ್ಟ ಅಸಲಿಗೆ ಪ್ರೇಕ್ಷಕರೂ ಫುಲ್ ಖುಷ್‌

ಮುಂದಿನ ಸುದ್ದಿ
Show comments