Webdunia - Bharat's app for daily news and videos

Install App

ಸಿನಿಮಾ ಎಂದರೆ ಹೀಗಿರಬೇಕು! ಕಾಂತಾರಗೆ ಕಂಗನಾ ರನಾವತ್ ಕ್ಲೀನ್ ಬೌಲ್ಡ್

Webdunia
ಶುಕ್ರವಾರ, 21 ಅಕ್ಟೋಬರ್ 2022 (16:03 IST)
ಮುಂಬೈ: ಕನ್ನಡದ ಕಾಂತಾರ ಸಿನಿಮಾ ಬಾಲಿವುಡ್ಡಿಗರನ್ನೂ ರೋಮಾಂಚನಗೊಳಿಸಿದೆ. ಈ ಸಾಲಿಗೆ ಲೇಟೆಸ್ಟ್ ಸೇರ್ಪಡೆ ನಟಿ ಕಂಗನಾ ರನಾವತ್.

ಕಂಗನಾ ಕಾಂತಾರ ಸಿನಿಮಾ ನೋಡಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ರಿಷಬ್ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

‘ಅಬ್ಬಾ. ಈ ಸಿನಿಮಾ ನೋಡಿ ನಾನು ಕಳೆದು ಹೋದೆ. ಈ ಹ್ಯಾಂಗ್ ಓವರ್ ನಿಂದ ಹೊರಗೆ ಬರಲು ಕನಿಷ್ಠ ಒಂದು ವಾರ ಬೇಕು. ಈಗಲೂ ನನಗೆ ರೋಮಾಂಚನವಾಗುತ್ತಿದೆ. ಕತೆ, ನಿರ್ದೇಶನ, ಆಕ್ಟಿಂಗ್ ಎಲ್ಲವೂ ಸೂಪರ್ಬ್. ಸಿನಿಮಾ ಎಂದರೆ ಹೀಗಿರಬೇಕು’ ಎಂದು ಕಂಗನಾ ಹೊಗಳಿದ್ದಾರೆ.


ಬಳಿಕ ಮತ್ತೊಂದು ಸಂದೇಶದ ಮೂಲಕ ಕಾಂತಾರ ಸಿನಿಮಾ ಮುಂದಿನ ಬಾರಿಗೆ ಆಸ್ಕರ್ ಗೆ ಪರಿಗಣನೆಯಾಗಬೇಕು. ಈ ಸಿನಿಮಾಗಿಂತ ಬೆಸ್ಟ್ ಸಿನಿಮಾ ಮುಂದೆ ಬರಬಹುದು. ಆದರೆ ಕಾಂತಾರದಲ್ಲಿ ಭಾರತದ ಮಣ್ಣಿನ ಕತೆಯಿದೆ. ಇಲ್ಲಿನ ಸಂಸ್ಕೃತಿಯ ಪರಿಚಯವಿದೆ. ಹೀಗಾಗಿ ಭಾರತ ಎಂದರೆ ಏನು ಎಂದು ವಿಶ್ವಕ್ಕೆ ತಿಳಿಯಲು ಈ ಸಿನಿಮಾ ಆಸ್ಕರ್ ಗೆ ಸ್ಪರ್ಧಿಸಬೇಕು ಎಂದು ಆಗ್ರಹಿಸಿದ್ದಾರೆ.

-Edited by Rajesh Patil

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments